ಧಗಧಗ ದಾವಾಗ್ನಿಗೆ ಜನರ ಬದುಕೇ ಭಸ್ಮ: ಹಾಲಿವುಡ್ ಸೆಲೆಬ್ರಿಟಿಗಳ ಮನೆಯೆಲ್ಲಾ ಬೂದಿ.. ಬೂದಿ..!

ಧಗಧಗ ದಾವಾಗ್ನಿಗೆ ಜನರ ಬದುಕೇ ಭಸ್ಮ: ಹಾಲಿವುಡ್ ಸೆಲೆಬ್ರಿಟಿಗಳ ಮನೆಯೆಲ್ಲಾ ಬೂದಿ.. ಬೂದಿ..!

Published : Jan 10, 2025, 01:27 PM IST

ಅಗ್ನಿಯ ಈ ಆಟಾಟೋಪಕ್ಕೆ ಅಮೆರಿಕಾ ಥಂಡಾ ಹೊಡೆದಿದೆ. ವರ್ಷದ ಆರಂಭದಲ್ಲೇ ಎದುರಾಗಿರೋ ಈ ಅಗ್ನಿ ಅವಗಢ, ನಿರೀಕ್ಷೆಗೂ ಮೀರಿದ ಆಘಾತ ಕೊಟ್ಟಿದೆ. ಅಂದ ಹಾಗೆ, ಆಕಾಶದಗಲಕ್ಕೂ ಚಾಚಿಕೊಂಡಿರೋ ಬೆಂಕಿಯ ಈ ಕೆನ್ನಾಲಿಗೆ, ತನ್ನ ಹಸಿವು ಮುಗಿತು ಅಂತ ತೆಪ್ಪಗಾಗೋದು ಯಾವಾಗ? ಗೂಡು ಬಿಟ್ಟ ಹಕ್ಕಿಗಳಂತಿರೋ ಅಮೆರಿಕಾದ ಜನ, ಮರಳಿ ಗೂಡಿಗೆ ಬರುವಂತಾಗೋದು ಯಾವಾಗ?.

ಬೆಂಗಳೂರು(ಜ.10): ನಮಸ್ತೆ ವೀಕ್ಷಕರೇ, ನೀವು ಇಷ್ಟು ಹೊತ್ತು ನೋಡಿದ್ದು.. ಹಾಲಿವುಡ್ ದೃಶ್ಯಗಳು.. ಆದ್ರೆ, ಹಾಲಿವುಡ್ ಸಿನಿಮಾದ ಸೀನ್ ಅಲ್ಲ.. ಒರಿಜಿನಲ್ ಹಾಲಿವುಡ್ ಲ್ಯಾಂಡಿನ, ಒರಿಜಿನಲ್ ಸಿಚುಯೇಷನ್ ಇದು.. ಎಂಥಾ ಭಯಾನಕ ಸಿನಿಮಾದಲ್ಲೂ, ನಿಮಗೆ ಇಂಥಾ ಸೀನ್ ನೋಡೋಕೆ ಸಾಧ್ಯವಿಲ್ಲ. ದಿನದಿಂದ ದಿನಕ್ಕೆ ಕಿಚ್ಚು ಕಡಿಮೆಯಾಗ್ಬೇಕು. ಆದ್ರೆ ಇಲ್ಲಿ ಆಗ್ತಾ ಇರೋದು, ಅದಕ್ಕೆ ತದ್ವಿರುದ್ಧ. ಮಂಗಳವಾರ ಹೊತ್ತಿಕೊಂಡ ಕಾಡಿನ ಒಂದು ಕಿಚ್ಚು, ಇವತ್ತು ಲಕ್ಷಾಂತರ ಜನರ ಜೀವವನ್ನೇ ನುಂಗಿಬಿಡೋಕೆ ಹೊಂಚು ಹಾಕಿ ಹೊರಟಂತಿದೆ. ಅಲ್ಲಿ ಉದ್ಭವಿಸಿರೋ ಅಗ್ನಿಪ್ರಮಾದದ ಇಂಚಿಂಚು ಕತೆಯತನ್ನೂ ಎಳೆಎಳೆಯಾಗಿ ನಿಮ್ಮ ಮುಂದೆ ತೆರೆದಿಡ್ತೀವಿ ನೋಡಿ.

ಅಗ್ನಿಯ ಈ ಆಟಾಟೋಪಕ್ಕೆ ಅಮೆರಿಕಾ ಥಂಡಾ ಹೊಡೆದಿದೆ. ವರ್ಷದ ಆರಂಭದಲ್ಲೇ ಎದುರಾಗಿರೋ ಈ ಅಗ್ನಿ ಅವಗಢ, ನಿರೀಕ್ಷೆಗೂ ಮೀರಿದ ಆಘಾತ ಕೊಟ್ಟಿದೆ. ಅಂದ ಹಾಗೆ, ಆಕಾಶದಗಲಕ್ಕೂ ಚಾಚಿಕೊಂಡಿರೋ ಬೆಂಕಿಯ ಈ ಕೆನ್ನಾಲಿಗೆ, ತನ್ನ ಹಸಿವು ಮುಗಿತು ಅಂತ ತೆಪ್ಪಗಾಗೋದು ಯಾವಾಗ? ಗೂಡು ಬಿಟ್ಟ ಹಕ್ಕಿಗಳಂತಿರೋ ಅಮೆರಿಕಾದ ಜನ, ಮರಳಿ ಗೂಡಿಗೆ ಬರುವಂತಾಗೋದು ಯಾವಾಗ?.

ಮ್ಯಾರೆಜ್‌ ದೋಖಾ: ಹಣ ಪಡೆದು ಮದುವೆಯಾಗ್ತಾಳೆ ಸುಂದರ ಯುವತಿ, ಅವಿವಾಹಿತ ಪುರುಷರೇ ಟಾರ್ಗೆಟ್!

ಪುಟ್ಟ ಕಿಡಿಯಂತೆ ಪ್ರಾರಂಭವಾದ ಕಿಚ್ಚು, ಈಗ ಕರಾಳ ಕಾಳ್ಗಿಚ್ಚಾಗಿ, ಸಾವಿರಾರು ಜನರ ಮೇಲೆ ಅಟ್ಟಹಾಸ ಮೆರೀತಿದೆ.. ಲಕ್ಷಾಂತರ ಜನ ತಮ್ಮ ಮನೆಗಳನ್ನ ಬಿಟ್ಟು ಬೇರೆ ಕಡೆ ಹೊರಟಿದ್ದಾರೆ..  ಹಿಂದೆಂದೂ ಕಾಣದೇ ಇದ್ದ ದಾರುಣ ಪರಿಸ್ಥಿತಿ, ಈಗ ಉದ್ಭವಿಸಿದ್ದು ಹೇಗೆ? ಈ ಅಗ್ನಿಕಂಟಕದಿಂದ ಪಾರಾಗೋದು ಯಾವಾಗ?

ಈ ಭಯಾನಕ ಪರಿಸ್ಥಿತಿಯನ್ನೇ ನೋಡೋಕ್ಕಾಗ್ತಿಲ್ಲ.. ಅಂಥದ್ರಲ್ಲಿ, ಇದಕ್ಕಿಂತಾ ಭೀಕರ ಪರಿಸ್ಥಿತಿ ನಿರ್ಮಾಣವಾಗ್ತಾ ಇದೆ ಅಂತಿದ್ದಾರಲ್ಲಾ.. ಅದಕ್ಕೇನು ಕಾರಣ? ಈ ಬಗ್ಗೆ ತಜ್ಞರ ನಿಲುವೇನು?. ಅಮೆರಿಕಾದಲ್ಲಿ ಈಗ ವಿಚಿತ್ರ ರಾಜಕೀಯ ಪರಿಸ್ಥಿತಿ ಇದೆ. ಇಂಥಾ ಹೊತ್ತಲ್ಲಿ, ಕಾಳ್ಗಿಚ್ಚು ಅಬ್ಬರಿಸ್ತಾ ಇದೆ. ಈ ಅನಾಹುತದ ಸುತ್ತಲೂ ಇರೋ ಕೌತುಕಮಯ ಕತೆ, ಇಲ್ಲಿದೆ ನೋಡಿ. 

46:44ಅಮೆರಿಕ VS ನ್ಯಾಟೋ ಸೈನಿಕರ ನಡುವೆ ‘ಗ್ರೀನ್‌ಲ್ಯಾಂಡ್’ ವಾರ್; ‘ಗ್ರೀನ್‌ಲ್ಯಾಂಡ್’ ವಶಕ್ಕೆ ಪಡೆಯಲು ಮುಂದಾದ ಅಧ್ಯಕ್ಷ ಟ್ರಂಪ್
48:16Left Right & Centre: ಟ್ರಂಪ್ ಆಡಳಿತಾವಧಿಯಲ್ಲಿ ಹೆಚ್ಚಾಯ್ತಾ ಅಮೆರಿಕಾ ದಾದಾಗಿರಿ?
19:15ಇರಾನ್ ಮೇಲೆ ಟ್ರಂಪ್ ಕೆಂಗಣ್ಣು; 3ನೇ ಮಹಾಯುದ್ದವಾದ್ರೆ ಭಾರತದ ಮೇಲಾಗುವ ಪರಿಣಾಮವೇನು?
44:40ರಷ್ಯಾದಿಂದ ತೈಲ ಖರೀದಿಸುವ ರಾಷ್ಟ್ರಗಳ ಮೇಲೆ ಶೇ.500ರಷ್ಟು ಸುಂಕ?
20:21ಡೊನಾಲ್ಡ್ ಟ್ರಂಪ್ ಬಿಗ್ ಚೆಕ್! ಜಗತ್ತಿನ ಈ ಐದು ರಾಷ್ಟ್ರಗಳು ಈಗ ಅಮೆರಿಕಾದ ಟಾರ್ಗೆಟ್!
18:03Suvarna Focus: ಜಗತ್ತಿನ ವಿನಾಶಕ್ಕೆ ಮುನ್ನುಡಿ ಬರೆಯುತ್ತಾ ಅಮೆರಿಕದ ಸಾಹಸ?
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
22:39ದುಬೈನಲ್ಲಿ ಮಿಂಚು, ಗುಡುಗು, ರಣ ರಣ ಮಳೆ: ಸೌದಿ ನೆಲದಲ್ಲಿ ಹಿಮಪಾತ.. ಇದೆಂಥಾ ಅಚ್ಚರಿ? ಏನು ಕಾರಣ..?
20:42ಎಪ್‌ಸ್ಟೀನ್ ಪಟ್ಟಿಯಲ್ಲಿ ಭಾರತದ ಘಟಾನುಘಟಿಗಳು: ಕಾಮುಕನ ಸೀಕ್ರೆಟ್ ಫೈಲ್ಸ್ ಸತ್ಯ ಹೊರಬರುತ್ತಾ? ಸಮಾಧಿಯಾಗುತ್ತಾ?
98:27ಆಸ್ಟ್ರೇಲಿಯಾ-ಇಂಡಿಯಾ ಲೀಡರ್‌ಶಿಪ್‌ ಅವಾರ್ಡ್ಸ್ 2025: 9 ತೆರೆಮರೆಯ ಸಾಧಕರಿಗೆ ಮೆಲ್ಬರ್ನ್‌ನಲ್ಲಿ ಸನ್ಮಾನ
Read more