ರಂಜಿತ್​ನ ಮನೆಮಂದಿಯೆಲ್ಲಾ ಸೇರಿ ಬಲಿಪಶು ಮಾಡಿದ್ರಾ? ದೊಡ್ಮನೆ ಬಗ್ಗೆ ಜಗದೀಶ್ ಮೆಚ್ಚುಗೆ!

ರಂಜಿತ್​ನ ಮನೆಮಂದಿಯೆಲ್ಲಾ ಸೇರಿ ಬಲಿಪಶು ಮಾಡಿದ್ರಾ? ದೊಡ್ಮನೆ ಬಗ್ಗೆ ಜಗದೀಶ್ ಮೆಚ್ಚುಗೆ!

Published : Oct 21, 2024, 01:49 PM IST

ಈ ಬಾರಿಯ ಬಿಗ್ ಬಾಸ್​​ ಸೀಸನ್​ನಲ್ಲಿ ತನ್ನದೇ ಹವಾ ಕ್ರಿಯೇಟ್ ಮಾಡಿದ್ದ ಲಾಯರ್ ಜಗದೀಶ ಎವಿಕ್ಟ್ ಆಗಿ ಮನೆಯಿಂದ ಆಚೆ ಬಂದಾಗಿದೆ. ಬಿಗ್ ಬಾಸ್​​ ಮನೆಯಲ್ಲಿದ್ದಾಗಲೇ ಬಿಗ್ ಬಾಸ್ ಶೋದ ಬಂಡವಾಳ ಬಯಲು ಮಾಡ್ತಿನಿ ಅಂದಿದ್ರು ಜಗದೀಶ್. ಹಾಗಾದ್ರೆ ಮನೆಯಿಂದ ಹೊರಬಂದ ಮೇಲೆ ವಕೀಲ್ ಸಾಬ್ ಏನಂದ್ರು..? ಬಿಗ್ ಬಾಸ್ ಪಯಣದ ಬಗ್ಗೆ ಲಾಯರ್ ಜಗದೀಶ್ ಹೇಳಿದ್ದೇನು ಅನ್ನೋದನ್ನ ನೋಡ್ಕೊಂಡ್ ಬರೋಣ ಬನ್ನಿ...

ಬಿಗ್ ಬಾಸ್​​ ಮನೆಯಿಂದ ಹೊರಬಂದಿರೋ ಲಾಯರ್ ಜಗದೀಶ್ ಮಾಧ್ಯಮಗಳ ಮುಂದೆ ಬಂದು ತನ್ನ ಬಿಗ್ ಬಾಸ್ ಜರ್ನಿಯನ್ನ ಬಿಚ್ಚಿಡೋದಕ್ಕೆ ಮುಂದಾಗಿದ್ರು. ಆದ್ರೆ ಕಿಚ್ಚ ಸುದೀಪ್ ತಾಯಿಯವರ ಸಾವಿನ ವಿಷ್ಯ ತಿಳಿದು ಮೊದಲು ಹೋಗಿ ಸುದೀಪ್​ಗೆ ಸಾಂತ್ವನ ಹೇಳಿದ್ರು.  

ಬಿಗ್ ಬಾಸ್ ಮನೆಯೊಳಗೆ ಇದ್ದಾಗ ಬಿಗ್ ಬಾಸ್ ಮುಖವನ್ನೇ ಬಿಚ್ಚಿಡ್ತೀನಿ ಅಂತ ಎಗರಾಡಿದ್ದ ಲಾಯರ್ ಸಾಬ್, ಹೊರಗಡೆ ಬಂದ್ಮೇಲೆ ಬಿಗ್ ಬಾಸ್ ಬಗ್ಗೆ ಒಳ್ಳೆ ಮಾತುಗಳನ್ನ ಆಡಿದ್ದಾರೆ. ಅದೊಂದು ಕನ್ನಡಿ ಇದ್ದಂತೆ, ತಮ್ಮ ವ್ಯಕ್ತಿತ್ವವನ್ನ ನಮಗೇ ತೋರಿಸುತ್ತೆ ಅಂತ ದೊಡ್ಮನೆಯನ್ನ ಹಾಡಿ ಹೊಗಳಿದ್ದಾರೆ ಜಗದೀಶ್.

ಇನ್ನೂ ಜಗದೀಶ್ ಮನೆಯೊಳಗೆ ಇದ್ದಷ್ಟು ಕಾಲವೂ ಇರೋ ಬರೋ  ಸ್ಪರ್ಧಿಗಳಿಗೆಲ್ಲಾ ಕಾಟ ಕೊಟ್ಟಿದ್ರು. ಅಂತೆಯೇ ಜಗದೀಶ್​ ಔಟ್ ಆಗುತ್ತಲೇ ಮನೆಮಂದಿಯೆಲ್ಲಾ ಚಪ್ಪಾಳೆ ತಟ್ಟಿ ಸಂಭ್ರಮ ಪಟ್ಟಿದ್ರು. ಆದ್ರೆ ಈಗ ಜಗದೀಶ್,  ಮನೆಮಂದಿಯೆಲ್ಲಾ ದೇವರಂಥವರು ಅಂತಿದಾರೆ. ಇನ್ನು, ಜಗದೀಶ್ ಮೇಲೆ ದೈಹಿಕ ಹಲ್ಲೆ ಮಾಡಿ ರಂಜಿತ್ ಕೂಡ ಹೊರ ಬಂದಿದ್ದಾರೆ. ರಂಜಿತ್ ಮಾಡಿದ್ದು ಅಕ್ಷಮ್ಯ ತಪ್ಪು ಅನ್ನೋ ಜಗದೀಶ್, ಆತನನ್ನ ಬೇರೆ ಸ್ಪರ್ಧಿಗಳೆಲ್ಲಾ ಸೇರಿ ಬಲಿಪಶು ಮಾಡಿದ್ರು ಅಂತಾರೆ. 

ಅಸಲಿಗೆ ಲಾಯರ್ ಜಗದೀಶ್ ಬಿಗ್ ಬಾಸ್​​ ಮನೆಯಲ್ಲಿ ಅದ್ಭುತವಾಗಿ ಆಟವಾಡ್ತಾ ಇದ್ರು. ಜನ ಕೂಡ ಜಗದೀಶ್ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಅದ್ರೆ ಅನಗತ್ಯವಾಗಿ ಆಡಿದ ಕೆಟ್ಟ ಮಾತು ಜಗದೀಶ್​​ನ ಮನೆಯಿಂದ ಎವಿಕ್ಷನ್ ಆಗುವಂತೆ ಮಾಡ್ತು. ಬಹುಶಃ ಜಗದೀಶ್ ದೊಡ್ಮನೆಯಲ್ಲಿ ಮುಂದುವರೆದಿದ್ರೆ ಖಂಡಿತ ಫೈನಲಿಸ್ಟ್ ಆಗ್ತಾ ಇದ್ರೇನೋ, ಆದ್ರೆ ಒಂದು ತಪ್ಪು ವಕೀಲ್​ ಸಾಬ್ ಬಿಗ್ ಬಾಸ್ ಜರ್ನಿಗೆ ಮುಕ್ತಾಯ ಹಾಡಿದೆ. 

23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
03:58ಬಿಗ್ ​ಬಾಸ್​ನಿಂದ ಬಿಗ್​ ಬಾಸೇ ಔಟ್.. ದೊಡ್ಮನೆಯಲ್ಲಿ ವಿಲನ್ ಟಾಸ್ಕ್‌ಗಳಿಂದ ಬೆಚ್ಚಿಬಿದ್ದ ಸ್ಪರ್ಧಿಗಳು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
05:43ರಣರಂಗವಾದ ದೊಡ್ಮನೆ.. ಜಾಲಿವುಡ್‌ಗೆ ಬಂದ ಅತಿಥಿಗಳ ಜೊತೆ ಗಲಾಟೆ ಮಾಡಿದ ಗಿಲ್ಲಿ!
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:12BBK 12: ಅಂಥಂಥ ಮಾತಾಡಿ ಅಶ್ವಿನಿ ಗೌಡಗೆ ಕ್ಯಾಪ್ಟನ್ಸಿ ಸಿಗದಂತೆ ಮಾಡಿದ ಗಿಲ್ಲಿ ನಟ!
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
06:04ಬಿಗ್​ಬಾಸ್ ಅಗ್ನಿ ಪರೀಕ್ಷೆ, ಬಿಗ್​ ಬಾಸ್ ಮನೆಯಲ್ಲಿ ಗಿಲ್ಲಿಯ ಪ್ರೇಮಕಾವ್ಯ..!
Read more