Dec 2, 2024, 3:17 PM IST
ಬಿಗ್ ಬಾಸ್ ವಿನ್ನರ್ ಪ್ರಥಮ್ (Actor Pratham) ನಟನೆ-ನಿರ್ದೇಶನದ 'ಕರ್ನಾಟಕದ ಅಳಿಯ' ಸಿನಿಮಾದ ಸೆಟ್ಗೆ ಸೆಂಚೂರಿ ಸ್ಟಾರ್ ಶಿವರಾಜ್‌ಕುಮಾರ್ ವಿಸಿಟ್ ಕೊಟ್ಟು ಟೀಮ್ಗೆ ಆಲ್ ದಿ ಬೆಸ್ಟ್ ಹೇಳಿದ್ರು. ಇದೀಗ ಅದಕ್ಕೆ ಪ್ರತಿಯಾಗಿ ಪ್ರಥಮ್ ಶಿವಣ್ಣನಿಗೊಂದು ಗಿಪ್ಟ್ ಕೊಟ್ಟಿದ್ದಾರೆ. ಏನದು ಗಿಫ್ಟ್ ಈ ಸ್ಟೋರಿ ನೋಡಿ.
ಬಿಗ್ ಬಾಸ್ ಖ್ಯಾತಿಯ ಪ್ರಥಮ್ ನಟನೆ-ನಿರ್ದೇಶನದಲ್ಲಿ ಕರ್ನಾಟಕದ ಅಳಿಯ ಅನ್ನೋ ಸಿನಿಮಾ ಬರ್ತಾ ಇದೆ. ಕೆಲ ದಿನಗಳ ಹಿಂದೆ ಈ ಸಿನಿಮಾದ ಸೆಟ್ ಗೆ ಡಾ.ಶಿವರಾಜ್ ಕುಮಾರ್ ಭೇಟಿ ಕೊಟ್ಟಿದ್ರು. ಪತ್ನಿ ಸಮೇತ ಶೂಟಿಂಗ್ ಸೆಟ್ಗೆ ವಿಸಿಟ್ ಕೊಟ್ಟು ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದ್ರು.
ತಮ್ಮ ಬ್ಯುಸಿ ಶೆಡ್ಯೂಲ್ ನಡುವೆ ತಮ್ಮ ತಂಡಕ್ಕೆ ಶಿವಣ್ಣ ಕೊಟ್ಟ ಪ್ರೋತ್ಸಾಹ ಕಂಡು ಪ್ರಥಮ್ ಅಂಡ್ ಟೀಂ ಖುಷಿ ಪಟ್ಟಿತ್ತು. ಶಿವಣ್ಣ ದಂಪತಿಯನ್ನ ಸನ್ಮಾನಿಸಿ, ಪ್ರೀತಿಯ ಉಡುಗೊರೆಯನ್ನ ಕೊಟ್ಟು ಕಳುಹಿಸಿತ್ತು.
ಮತ್ತೀಗ ಶಿವಣ್ಣನಿಗಾಗಿ ಪ್ರಥಮ್ ಮತ್ತೊಂದು ವಿಶೇಷ ಉಡುಗೊರೆ ಕೊಟ್ಟಿದ್ದಾರೆ. ಇತ್ತೀಚಿಗೆ ರಾಜ್ ಕಪ್ ಆಡಲಿಕ್ಕಾಗಿ ದುಬೈಗೆ ಹೋಗಿದ್ದ ಪ್ರಥಮ್ ಅಲ್ಲಿನ ಹಿಂದೂ ಮಂದಿರಕ್ಕೆ ಭೇಟಿ ಕೊಟ್ಟು ಶಿವರಾಜ್‌ಕುಮಾರ್ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಅಲ್ಲಿನ ಗೋಶಾಲೆಗೆ ತೆರಳಿ ಗೋವುಗಳಿಗೆ ಗೋಗ್ರಾಸ ನೀಡಿದ್ದಾರೆ. ಶಸ್ತ್ರಚಿಕಿತ್ಸೆಗಾಗಿ ವಿದೇಶಕ್ಕೆ ಹೊರಟು ನಿಂತಿರೋ ಶಿವಣ್ಣನಿಗೆ ಒಳ್ಳೆದಾಗಲಿ.. ಅವರ ಆರೋಗ್ಯ, ಆಯಸ್ಸು ಹೆಚ್ಚಲಿ ಅಂತ ಪ್ರಾರ್ಥನೆ ಮಾಡಿದ್ದಾರೆ.
ಶಿವರಾಜ್‌ಕುಮಾರ್ ಆರೋಗ್ಯಕ್ಕಾಗಿ ಪ್ರಾರ್ಥಿಸ್ತಾ ಇರೋರು ಒಬ್ಬಬ್ಬಿರಲ್ಲ. ಕೋಟಿ ಕೋಟಿ ಅಭಿಮಾನಿಗಳು ಶಿವಣ್ಣ ಗುಣವಾಗಲಿ ಅಂತ ಹಾರೈಸ್ತಾ ಇದ್ದಾರೆ. ಇವರೆಲ್ಲರ ಹಾರೈಕೆಯೇ ಶಿವಣ್ಣನಿಗೆ ಶ್ರೀರಕ್ಷೆ ಅಂದ್ರೆ ತಪ್ಪಾಗಲ್ಲ.