ಕಾದಂಬರಿ, ನಿನ್ನಿಂದಲೇ... ಉದಯ ಟಿವಿಯಲ್ಲಿ 2 ಹೊಸ ಧಾರಾವಾಹಿಗಳು!

ಕಾದಂಬರಿ, ನಿನ್ನಿಂದಲೇ... ಉದಯ ಟಿವಿಯಲ್ಲಿ 2 ಹೊಸ ಧಾರಾವಾಹಿಗಳು!

Published : Aug 21, 2021, 08:58 PM ISTUpdated : Aug 21, 2021, 08:59 PM IST

* ಉದಯ ಟಿವಿಯಲ್ಲಿ ಡಬಲ್ ಧಮಾಕಾ 
* ಆಗಷ್ಟ್ 23 ರಿಂದ ಸೋಮವಾರದಿಂದ ಶನಿವಾರಧಾರಾವಾಹಿಗಳ ಹಬ್ಬ
* “ಕಾದಂಬರಿ” ಮಧ್ಯಾಹ್ನ 2ಗಂಟೆಗೆ, “ನಿನ್ನಿಂದಲೇ” ಮಧ್ಯಾಹ್ನ 2.30ಕ್ಕೆ
*  ಕೌತುಕಗಳೊಂದಿಗೆ ಸೃಜನಾತ್ಮಕ ಧಾರಾವಾಹಿಗಳನ್ನನೀಡುತ್ತ ಬಂದಿರೋ ಉದಯ ಟಿವಿ

ಬೆಂಗಳೂರು(ಆ. 21)  ಡ್ರಾಮಾ , ಆಕ್ಷನ್ , ಹಾರರ್ ಹೀಗೆ ಎಲ್ಲಾ ಬಗೆಯ ಕಾರ್ಯಕ್ರಮಗಳನ್ನ ನೀಡಿ ಉದಯ ಟಿವಿ ವೀಕ್ಷಕರನ್ನು ರಂಜಿಸುತ್ತಿದೆ. ಹೊಸ ಪ್ರಯತ್ನಗಳ ಮೂಲಕ  ಜನರ ಮನಗೆದ್ದಿರೋ ಈ ವಾಹಿನಿ ಇದೀಗ ಮತ್ತೆ  ಹೊಸ 2 ಧಾರಾವಾಹಿಗಳನ್ನು ನೀಡಲು ಸಜ್ಜಾಗಿದೆ.  ಕಾದಂಬರಿ: ಸೋಮವಾರದಿಂದ ಶನಿವಾರ ಮಧ್ಯಾಹ್ನ 2 ಗಂಟೆಗೆ ಶ್ರೀ ದುರ್ಗಾ ಕ್ರೀಯೇಷನ್ಸ್ ವಿಭಿನ್ನ ಕಥಾಹಂದರವುಳ್ಳ “ಕಾದಂಬರಿ” ಎಂಬ ಧಾರಾವಾಹಿಯನ್ನು ಪ್ರೇಕ್ಷಕರೆದುರಿಡಲು ಸಿದ್ಧವಾಗಿದೆ.

“ಕಾದಂಬರಿ” ಒಂದು ಕೆಳಮಧ್ಯಮ ವರ್ಗದ ಹುಡುಗಿ. ಹೊರದೇಶಕ್ಕೆ ತೆರಳಿ ದುಡಿದು ಬರುವುದಾಗಿ ಎಂದು ಹೇಳಿ ಹೋದ ಅಪ್ಪನ ಸುಳಿವಿಲ್ಲ. ಇದ್ದೊಬ್ಬ ಪ್ರೀತಿಯ ಅಣ್ಣ ಜೀವನದಲ್ಲಿ ಸೋತು ಸರಾಯಿಯ  ಸೆರೆಯಾಗಿದ್ದಾನೆ. ಹೀಗಿರುವಾಗ ತುಂಬು ಕುಟುಂಬಕ್ಕೆ ಆಧಾರವಾಗಿ ಇವಳೊಬ್ಬಳದೇ ದುಡಿಮೆ. ಮನೆಯನ್ನು ನೀಯಂತ್ರಿಸಲು ಹಗಲಿರುಳು ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಇವಳ ಶ್ರದ್ಧೆ, ಪರಿಶ್ರಮ ಕಂಡು ಇವಳ ಬಾಸ್ ಸುದರ್ಶನ್ ಚಕ್ರವರ್ತಿಗೆ ಇವಳ ಮೇಲೆ ಅಭಿಮಾನ, ಅಪಾರ ನಂಬಿಕೆ.

ಮಕ್ಕಳ ಜತೆ ಮಗುವಾದ ಬೊಮ್ಮಾಯಿ, ನೆಚ್ಚಿನ ನಟಿ ಯಾರೆಂದು ಘೋಷಣೆ.. ಹಾಡು ಹಾಡಿದ್ರು!

ಮನೆ ಮಗನಂತೆ ದುಡಿತಿರೋ ಕಾದಂಬರಿಗೆ ತನ್ನದೇ ಪುಟ್ಟ ಕನಸಿನ ಗೂಡಿದೆ. ಈಗಿನ ಕಾಲದ ಹುಡಿಗಿಯರಿಗೆಲ್ಲಾ ಬಣ್ಣ-ಬಣ್ಣದ ಕನಸುಗಳಿದ್ದರೆ, ಇವಳಿಗೊಂದೇ ಆಸೆ. ಇವಳ ಮನಸನ್ನ ಅರ್ಥ ಮಾಡಿಕೊಳ್ಳೋ ಒಬ್ಬ ಸಂಗಾತಿಯ ಕೈಹಿಡಿದು, ೨ ಮುದ್ದಾದ ಮಕ್ಕಳನ್ನು ಹೆತ್ತು ಗೃಹಿಣಿಯಾಗಿ ಸಂಸಾರ ತೂಗಿಸಬೇಕು ಅಂತ. ಆದರೆ ಬೆನ್ನೇರಿರೋ ಮನೆ ಜವಾಬ್ದಾರಿ ಇವಳ ಕನಸನ್ನು ನನಸು ಮಾಡುತ್ತಾ? ಎಂಬುದು ಈ ಧಾರಾವಾಹಿಯ ಸಾರಾಂಶ.

“ಎಲ್ಲಾ ಧಾರಾವಾಹಿಗಳಲ್ಲಿ ತೋರಿಸೋ ದ್ವೇಷ ಅಸೂಯೆಗಳ ಕಿತ್ತಾಟವಿಲ್ಲದೆ, ಮಮತೆಗೆ ಕರಗೋ ಮಿಡ್ಲ್ ಕ್ಲಾಸ್ ಫ್ಯಾಮಿಲಿಯ ಹೈಕ್ಲಾಸ್ ಕಥೆ ಇದಾಗಿದೆ” ಎಂದು ಎನ್ನುತ್ತಾರೆ ನಿರ್ದೇಶಕ ದರ್ಶಿತ್ ಭಟ್. 

ಪ್ರಸಿದ್ಧ ಧಾರಾವಾಹಿಗಳನ್ನು ನೀಡಿರುವ ಗಣಪತಿ ಭಟ್  ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಸುನಾದ್ ಗೌತಮ್ ಸಂಗೀತ ಸಂಯೋಜನೆ, ಕೃಷ್ಣ ಕಂಚನಹಳ್ಳಿಯವರ ಛಾಯಾಗ್ರಹಣ, ಗಿರೀಶ್ ಚಿತ್ರಕಥೆ ಮತ್ತು ತುರುವೆಕೆರೆ ಪ್ರಸಾದ್ ಸಂಭಾಷಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ನಾಯಕಿಯಾಗಿ ಪವಿತ್ರ ನಾಯಕ್ ಮತ್ತು ನಾಯಕನಾಗಿ  ರಕ್ಷಿತ್ ನಟಿಸುತ್ತಿದ್ದಾರೆ. ನಾಗೇಂದ್ರ ಶಾ, ಮಾಲತಿ ಸರ್ ದೇಶಪಾಂಡೆ, ಸುರೇಶ್ ರೈ, ಗಾಯಿತ್ರಿ ಪ್ರಭಾಕರ್, ಪ್ರಥಮಾ ರಾವ್, ನಿರಂಜನ್,  ಶ್ವೇತಾ, ಪ್ರಗತಿ, ಅರ್ಪಿತ, ಪೃಥ್ವಿ ಯುವಸಾಗರ್, ಲಿಖಿತ, ಅಶೋಕ್ ಬಿ.ಎ, ರಾಧಿಕಾ ಶೆಟ್ಟಿ, ಆನಂದ್ ಹೀಗೆ ಹಲವಾರು ಕಲಾವಿದರನ್ನು ಒಳಗೊಂಡಿದೆ ಈ  ಧಾರಾವಾಹಿ. “ಕಾದಂಬರಿ”ಇದೇ 23 ರಿಂದ ಸೊಮವಾರದಿಂದ ಶನಿವಾರ  ಮದ್ಯಾಹ್ನ 2ಗಂಟೆಗೆ ಉದಯಟಿವಿಯಲ್ಲಿ ಪ್ರಸಾರವಾಗಲಿದೆ.

ನಿನ್ನಿಂದಲೇ : ಸೋಮವಾರದಿಂದ ಶನಿವಾರ ಮಧ್ಯಾಹ್ನ 2.30ಕ್ಕೆ
ಪ್ರಖ್ಯಾತ ನಟ , ರಾಜೇಶ ನಟರಂಗ ನಿರ್ಮಾಣದಲ್ಲಿ ತಯಾರಾಗುತ್ತಿದೆ ನಿನ್ನಿಂದಲೇ ಧಾರಾವಾಹಿ.   ಇದೊಂದು ಪ್ರೇಮ ಕಥೆ. ಸುಮಧುರ ಸ್ನೇಹಕ್ಕೆ ಪ್ರೀತಿಯ ಕರೆಯೋಲೆ ಈ ನಿನ್ನಿಂದಲೇ.  ಧ್ವನಿ ಕ್ರಿಯೇ಼ಷನ್ಸ್ ಲಾಂಚನದಲ್ಲಿ  ಮೊದಲ ಬಾರಿಗೆ ನಿರ್ಮಾಣಕ್ಕೆ ಕೈ ಹಾಕುತಿರೋ ರಾಜೇಶ , ಈ ಪ್ರೇಮ ಕಥೆಯಲ್ಲಿ ಸಾಕಷ್ಟು ಕೌಟುಂಬಿಕ ಅಂಶಗಳನ್ನ ಸೇರಿಸಿದ್ದಾರೆ. 

ರಾಜಲಕ್ಷ್ಮಿಯ ದೊಡ್ಡ ಕುಟುಂಬ , ಅಳಿಯನ ಮನೆಯವರ ಜೊತೆಗೆ ಆದ ಮನಸ್ತಾಪದಿಂದ  , ಎರಡು ಕುಟುಂಬ ದೂರವಿರುತ್ತೆ .  ಈ ಸಂಬಂದಗಳನ್ನ ಒಂದು ಮಾಡೋಕೆ ಇರೋ ದಾರಿ ತನ್ನ ಮೊಮ್ಮಕಳಾದ ಅನನ್ಯ ಮತ್ತು ವರು಼ಣ್ನ ಮದುವೆ.  ನಾಯಕಿಯಾಗಿರೊ ಅನನ್ಯಾಳಿಗೆ ನಾಯಕ ವರುಣ್ ಅಂದ್ರೆ ಪಂಚಪ್ರಾಣ , ಈ ಪವಿತ್ರ ಸ್ನೇಹದಲ್ಲಿ ಪ್ರೀತಿಯ ಅಲೆ ಹೊಮ್ಮಲಿದೆಯಾ? ಎಂಬುದು ಈ ಧಾರಾವಾಹಿಯ ಸಾರಾಂಶ. 

ಶರತ್ ಪರ್ವತವಾಣಿಯವರ ಕಥೆಗೆ , ವಿನೋದ್ ಸಂಭಾಷಣೆ ಬರೆಯುತ್ತಿದ್ದಾರೆ. ನಿರ್ದೇಶನದ ಜವಾಬ್ದಾರಿಯನ್ನ ದಿಲೀಪ್ ಹೊತ್ತಿದ್ದಾರೆ. ನಾಯಕಿಯಾಗಿ ಚಿತ್ರಶ್ರಿ ಮತ್ತು ನಾಯಕನ ಪಾತ್ರದಲ್ಲಿ ದೀಪಕ್ ಬಣ್ಣ ಹಚ್ಚುತ್ತಿದ್ದಾರೆ., ಇವರ ಜೊತೆಗೆ ನಟಿ ಜಯಶ್ರಿ , ಲಲಿತಾಂಜಲಿ , ನಮಿತಾ ದೇಸಾಯಿ , ಪ್ರಶಾಂತ್ , ನಂದೀಶ , ಶೋಭಿತಾ ಮುಖ್ಯ ಪಾತ್ರಗಳನ್ನ ವಹಿಸಿದ್ದಾರೆ.  ನಿನ್ನಿಂದಲೇ ಹಾಡಿಗೆ ಸಾಹಿತ್ಯ ಬರೆದಿರುವುದು ಸಾಹಿತಿ ಜಯಂತ್ ಕಾಯ್ಕಿಣಿ. ಸಂಗೀತ ಸಂಯೋಜನೆ ಮಾಡಿರಿವುದು ವಸಂತ್ ದನಿಯಾಗಿರೋದು ಮಾನಸ ಹೊಲ್ಲಾ.  “ನಿನ್ನಿಂದಲೇ”ಇದೇ 23ರಿಂದ ಸೊಮವಾರದಿಂದ ಶನಿವಾರ  ಮದ್ಯಾಹ್ನ 2.30ಕ್ಕೆ ಉದಯಟಿವಿಯಲ್ಲಿ ಪ್ರಸಾರವಾಗಲಿದೆ.

 

04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
03:58ಬಿಗ್ ​ಬಾಸ್​ನಿಂದ ಬಿಗ್​ ಬಾಸೇ ಔಟ್.. ದೊಡ್ಮನೆಯಲ್ಲಿ ವಿಲನ್ ಟಾಸ್ಕ್‌ಗಳಿಂದ ಬೆಚ್ಚಿಬಿದ್ದ ಸ್ಪರ್ಧಿಗಳು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
05:43ರಣರಂಗವಾದ ದೊಡ್ಮನೆ.. ಜಾಲಿವುಡ್‌ಗೆ ಬಂದ ಅತಿಥಿಗಳ ಜೊತೆ ಗಲಾಟೆ ಮಾಡಿದ ಗಿಲ್ಲಿ!
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:12BBK 12: ಅಂಥಂಥ ಮಾತಾಡಿ ಅಶ್ವಿನಿ ಗೌಡಗೆ ಕ್ಯಾಪ್ಟನ್ಸಿ ಸಿಗದಂತೆ ಮಾಡಿದ ಗಿಲ್ಲಿ ನಟ!
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
06:04ಬಿಗ್​ಬಾಸ್ ಅಗ್ನಿ ಪರೀಕ್ಷೆ, ಬಿಗ್​ ಬಾಸ್ ಮನೆಯಲ್ಲಿ ಗಿಲ್ಲಿಯ ಪ್ರೇಮಕಾವ್ಯ..!
06:01ಗಿಲ್ಲಿ ಮೇಲೆ ಹಲ್ಲೆ ಮಾಡಿಯೂ ಬಚಾವ್ ಆದ್ರಾ ರಿಷಾ ಗೌಡ? ಕಿಚ್ಚ ಸುದೀಪ್ ಎದುರೇ ಕಿಕ್​ ಔಟ್?