Raj B Shetty:  ಇವಿ ಎಕ್ಸ್‌ಫೋನಲ್ಲಿ ಎಲೆಕ್ಟ್ರಿಕ್ ಆಟೋ ಓಡಿಸಿ ಖುಷಿಪಟ್ಟ ಟೋಬಿ!

Raj B Shetty: ಇವಿ ಎಕ್ಸ್‌ಫೋನಲ್ಲಿ ಎಲೆಕ್ಟ್ರಿಕ್ ಆಟೋ ಓಡಿಸಿ ಖುಷಿಪಟ್ಟ ಟೋಬಿ!

Published : Aug 26, 2023, 05:03 PM ISTUpdated : Aug 26, 2023, 05:04 PM IST

ಸಿಲಿಕಾನ್ ಸಿಟಿ ಬೆಂಗಳೂರು ನಗರದ ಗಾಯತ್ರಿ ವಿಹಾರ ಆರಮನೆ ಮೈದಾನದಲ್ಲಿ ಏಷಿಯಾನೆಟ್ ಸುವರ್ಣ ನ್ಯೂಸ್ ಆಯೋಜಿಸಿರುವ ಮೂರು ದಿನಗಳ  ಇವಿ ಎಕ್ಸ್‌ಪೋಗೆ ಭೇಟಿ ನೀಡಿದ ಚಿತ್ರನಟ, ನಿರ್ದೇಶಕ ರಾಜ್‌ ಬಿ ಶೆಟ್ಟಿ ಶುಭ ಕೋರಿದರು.

ಬೆಂಗಳೂರು (ಆ.26): ಸಿಲಿಕಾನ್ ಸಿಟಿ ಬೆಂಗಳೂರು ನಗರದ ಗಾಯತ್ರಿ ವಿಹಾರ ಆರಮನೆ ಮೈದಾನದಲ್ಲಿ ಏಷಿಯಾನೆಟ್ ಸುವರ್ಣ ನ್ಯೂಸ್ ಆಯೋಜಿಸಿರುವ ಮೂರು ದಿನಗಳ  ಇವಿ ಎಕ್ಸ್‌ಪೋಗೆ ಭೇಟಿ ನೀಡಿದ ಚಿತ್ರನಟ, ನಿರ್ದೇಶಕ ರಾಜ್‌ ಬಿ ಶೆಟ್ಟಿ ಶುಭ ಕೋರಿದರು.

ಕಾಂತರಾ ಚಿತ್ರದ ಬಳಿಕ ಟೋಬಿ(Toby success) ಚಿತ್ರ ಕೂಡ ಭಾರೀ ಸದ್ದು ಮಾಡುತ್ತಿದೆ.  ರಾಜ್ಯದಲ್ಲಷ್ಟೇ ಅಲ್ಲದೆ ನೆರೆಯ ರಾಜ್ಯಗಳಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಸಕ್ಸಸ್‌ ಮೂಡ್‌ನಲ್ಲಿರುವ ರಾಜ್ ಬಿ ಶೆಟ್ಟಿ ಎಲೆಕ್ಟ್ರಿಕ್ ವಾಹನಗಳ ಮೇಳಕ್ಕೆ ಭೇಟಿ ಕೊಟ್ಟು ಎಲೆಕ್ಟ್ರಿಕ್ ಆಟೋಗಳ ಕರ್ಟನ್ ರೈಸ್ ಮಾಡಿದರು.ಬಳಿಕ ಸ್ವತಃ ತಾನೇ ಎಲೆಕ್ಟ್ರಿಕ್ ಆಟೋ ಓಡಿಸಿ ಖುಷಿ ಪಟ್ಟ ಒಂದು ಮೊಟ್ಟೆಯ ಕಥೆ ಹೀರೋ.

ಇಂದಿನಿಂದ ಬೆಂಗಳೂರಿನಲ್ಲಿ ಮೆಗಾ ಇವಿ ಎಕ್ಸ್‌ಪೋ; ಎಲೆಕ್ಟ್ರಿಕ್ ವಾಹನ ಖರೀದಿಗೆ ಪ್ಲಾನ್ ಮಾಡಿದ್ದೀರಾ? ಇಲ್ಲಿ ನೋಂದಾಯಿಸಿ!

ಎಕ್ಸ್‌ಪೋಗೆ ಭೇಟಿ ನೀಡಿ ತುಂಬಾ ಖುಷಿಯಾಗಿದೆ:

ಇವಿ ಎಕ್ಸ್‌ಪೋಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಾಜ್‌ ಬಿ ಶೆಟ್ಟಿ ಇಲ್ಲಿನ ಒಂದೊಂದು ಎಲೆಕ್ಟ್ರಿಕ್ ವಾಹನಗಳ ಡ್ರೈವ್ ಮಾಡಿದೆ ಕ್ಯೂಟ್ ಆಗಿವೆ. ನಾನಂತೂ ಈ ಗಾಡಿಗಳನ್ನು ಓಡಿಸಿ ತುಂಬಾ ಖುಷಿ ಪಟ್ಟೆ ಈ ಎಕ್ಸ್‌ಪೋ (EV expo) ಆಯೋಜಿಸಿದ್ದಕ್ಕೆ  ಸುವರ್ಣ ನ್ಯೂಸ್ ಗೆ ಧನ್ಯವಾದಗಳನ್ನ ತಿಳಿಸಿದರು. 

ಟೋಬಿ ಚಿತ್ರದ ಕುರಿತಾದ ವಿಶೇಷ ವಿನ್ಯಾಸದ ವಸ್ತ್ರ ಧರಿಸಿ ಬಂದಿದ್ದ ರಾಜ್ ಬಿ ಶೆಟ್ಟಿ ವಸ್ತ್ರ ವಿನ್ಯಾಸದ ಬಗ್ಗೆ ನಗುತ್ತಲೇ ಮಾತಾಡಲಾರಂಭಿಸಿದರು. ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ನೆರೆಯ ರಾಜ್ಯಗಳಲ್ಲೂ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಮಲಯಾಳಂ ಸೇರಿದಂತೆ ಬೇರೆ ಭಾಷೆಗಳಿಂದಲೂ ಡಿಮ್ಯಾಂಡ್ ಬಂದಿದೆ ಇನ್ನಷ್ಟು ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಇದೆಲ್ಲ ಸಾಧ್ಯವಾಗಿಸಿದ ಕನ್ನಡಿಗರಿಗೆ ಧನ್ಯವಾದ ಹೇಳಿದ ಟೋಬಿ ಹೀರೋ.

ನಮ್ಮ ನಡುವೆ ಯಾವ ಸ್ಪರ್ಧೆನೂ ಇಲ್ಲ: ರಕ್ಷಿತ್ ಶೆಟ್ಟಿ- ರಾಜ್‌ ಬಿ ಶೆಟ್ಟಿ ಕ್ಲಾರಿಟಿ

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
Read more