ಪಿಎಸ್ಐ ಪರೀಕ್ಷಾ ಹಗರಣ (PSI Recruitment Scam) ಮಂಡ್ಯಕ್ಕೂ (Mandya) ಕಾಲಿಟ್ಟಿದೆ. ಪ್ರಕರಣ ಸಂಬಂಧ ನಾಗಮಂಗಲದಲ್ಲಿ ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶರತ್ ರಾಮಣ್ಣನನ್ನು ಬಂಧಿಸಲಾಗಿದೆ. ಇವರು ಚೆಲುವರಾಯ ಸ್ವಾಮಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು.
ಮಂಡ್ಯ (ಮೇ.11): ಪಿಎಸ್ಐ ಪರೀಕ್ಷಾ ಹಗರಣ (PSI Recruitment Scam) ಮಂಡ್ಯಕ್ಕೂ (Mandya) ಕಾಲಿಟ್ಟಿದೆ. ಪ್ರಕರಣ ಸಂಬಂಧ ನಾಗಮಂಗಲದಲ್ಲಿ ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶರತ್ ರಾಮಣ್ಣನನ್ನು ಬಂಧಿಸಲಾಗಿದೆ. ಇವರು ಚೆಲುವರಾಯ ಸ್ವಾಮಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು.
ಶರತ್ ರಾಮಣ್ಣ ಪಿಎಸ್‌ಐ ಕೆಲಸದ ವಿಚಾರದಲ್ಲಿ ಮಧ್ಯವರ್ತಿಯಾಗಿದ್ದರು. ಪರೀಕ್ಷೆ ಮುಗಿದ ಬಳಿಕ ನೇಮಕಾತಿ ವಿಭಾಗದ ಸ್ಟ್ರಾಂಗ್ ರೂಮ್‌ನಲ್ಲಿದ್ದ ಕೆಲ ಅಭ್ಯರ್ಥಿಗಳ ಒಎಂಆರ್ ಶೀಟ್‌ಗಳನ್ನು ಈ ಆರೋಪಿಗಳು ತಿದ್ದಿದ್ದಾರೆ. ಇದಕ್ಕೆ ತಲಾ ಅಭ್ಯರ್ಥಿಯಿಂದ 30 ರಿಂದ 40 ಲಕ್ಷ ರು. ವಸೂಲಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.