ರಾಯರ ಆರಾಧನಾ ಮಹೋತ್ಸವಕ್ಕೆ ಕೌಂಟ್‌ಡೌನ್‌: ಈ ಬಾರಿ ಭಕ್ತರಿಗೆ ಪುಣ್ಯ ಸ್ನಾನದ್ದೇ ಟೆನ್ಷನ್ !

ರಾಯರ ಆರಾಧನಾ ಮಹೋತ್ಸವಕ್ಕೆ ಕೌಂಟ್‌ಡೌನ್‌: ಈ ಬಾರಿ ಭಕ್ತರಿಗೆ ಪುಣ್ಯ ಸ್ನಾನದ್ದೇ ಟೆನ್ಷನ್ !

Published : Aug 22, 2023, 10:36 AM IST

ಕಲಿಯುಗದ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವಕ್ಕಾಗಿ ಮಂತ್ರಾಲಯ ಮಠದಲ್ಲಿ ಸಕಲ ಸಿದ್ಧತೆಗಳು ನಡೆದಿವೆ. ಇದೇ ಆಗಸ್ಟ್ 29 ರಿಂದ ಸೆಪ್ಟೆಂಬರ್ 4ರವರೆಗೆ ರಾಯರ ಆರಾಧನೆ ಮಹೋತ್ಸವ ನಡೆಯಲಿದ್ದು, ಸಪ್ತರಾತ್ರೋತ್ಸವ ಕಾರ್ಯಕ್ರಮಕ್ಕಾಗಿ ಶ್ರೀಮಠ ಸಜ್ಜಾಗುತ್ತಿದೆ. ಆದ್ರೆ ಪ್ರತಿ ವರ್ಷ  ಆರಾಧನೆಗೆ ಬರುವ ಭಕ್ತರಿಗೆ ಈ ವರ್ಷ ನಿರಾಸೆ ಆಗುವ ಸಾಧ್ಯತೆ ಇದೆ. 

ಗುರು ರಾಘವೇಂದ್ರ ಕೋಟ್ಯಂತರ ಭಕ್ತರ ಆರಾಧ ದೈವ. ನಿತ್ಯವೂ ಸಾವಿರಾರು ಭಕ್ತರು ಮಂತ್ರಾಲಯಕ್ಕೆ ಹರಿದು ಬರ್ತಾರೆ. ಇನ್ನು  ಆರಾಧನಾ ಮಹೋತ್ಸವಕ್ಕಂತೂ(Aradhana Mahotsav) ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಈ ಬಾರಿಯೂ ಆರಾಧನಾ ಮಹೋತ್ಸವಕ್ಕೆ ಮಂತ್ರಾಲಯದಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ. ಆಗಸ್ಟ್ 29ರಿಂದ ಸೆಪ್ಟೆಂಬರ್‌ವವರೆಗೆ ರಾಯರ 352ನೇ ಆರಾಧನಾ ಮಹೋತ್ಸವ ನಡೆಯಲಿದೆ. ಏಳು ದಿನಗಳ ಕಾಲ ನಡೆಯುವ ಆರಾಧನಾ ಮಹೋತ್ಸವದಲ್ಲಿ ಮಠದಲ್ಲಿ ನಿತ್ಯವೂ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಮೇಳೈಸಲಿದೆ. ಆದರೆ  ಈ ಬಾರಿ ಮಂತ್ರಾಲಯಕ್ಕೆ(Mantralayam) ಬರುವ ಭಕ್ತರಿಗೆ ಪುಣ್ಯ ಸ್ನಾನದ್ದೇ ಟೆನ್ಷನ್. ಯಾಕಂದ್ರೆ ತುಂಗಭದ್ರಾ ನದಿಯಲ್ಲಿ ನೀರಿಲ್ಲದೇ ಕಲ್ಲು ಬಂಡೆಗಳೇ ಕಾಣಿಸುತ್ತಿವೆ. ರಾಯರ ದರ್ಶನಕ್ಕೆ ಬರುವ ಭಕ್ತರು ಮೊದಲು ತುಂಗಭದ್ರಾ(Tungabhadra) ನದಿಯಲ್ಲಿ ಪುಣ್ಯಸ್ನಾನ ಮಾಡಿ ನಂತ್ರ ರಾಯರ ದರ್ಶನ ಪಡೆಯೋದು ಪ್ರತೀತಿ. ಆದ್ರೆ ಮಂತ್ರಾಲಯದ ರಾಯರ ಮಠದ ಪಕ್ಕ ಹರಿಯುವ ತುಂಗಭದ್ರೆಯ ಒಡಲು ಈ ಬಾರಿ ಸಂಪೂರ್ಣ ಖಾಲಿಯಾಗಿದೆ. ಪುಣ್ಯಸ್ನಾನಕ್ಕೂ ನೀರಿನ ಸಮಸ್ಯೆ ಎದುರಾಗಿದೆ. ಇನ್ನು ಮಠದ ಆಡಳಿತ ಮಂಡಳಿ ಭಕ್ತರಿಗೆ ಸಮಸ್ಯೆ ಆಗದಂತೆ ನದಿ ದಡದಲ್ಲಿ ಸ್ನಾನಘಟ್ಟಗಳನ್ನ ನಿರ್ಮಿಸಿದೆ. ಜೊತೆಗೆ ತುಂಗಭದ್ರಾ ನದಿಗೆ ಹೆಚ್ಚುವರಿ ನೀರು ಹರಿಸುವಂತೆ ಸಂಬಂಧಪಟ್ಟ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಲಾಗುವುದು ಅಂತ ಶ್ರೀಗಳು ತಿಳಿಸಿದ್ದಾರೆ.

ಇದನ್ನೂ ವೀಕ್ಷಿಸಿ: 'ಟೋಬಿ' ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭ: ವರಮಹಾಲಕ್ಷ್ಮಿ ಹಬ್ಬದಂದು ಬೆಳ್ಳಿತೆರೆಗೆ ಎಂಟ್ರಿ !

81:52ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್: 40 ಮಂದಿ ಸಾಧಕ ಸಾಧಕ ವೈದ್ಯರಿಗೆ ಸನ್ಮಾನದ ಕಿರೀಟ
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!