ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಕೇಸ್‌ ವಾಪಸಾತಿಗೆ ಪತ್ರ; ಅಮಾಯಕರಿಗೆ ಶಿಕ್ಷೆ ಸಲ್ಲದೆಂದ ತನ್ವೀರ್‌ ಸೇಠ್‌

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಕೇಸ್‌ ವಾಪಸಾತಿಗೆ ಪತ್ರ; ಅಮಾಯಕರಿಗೆ ಶಿಕ್ಷೆ ಸಲ್ಲದೆಂದ ತನ್ವೀರ್‌ ಸೇಠ್‌

Published : Jul 26, 2023, 05:47 PM IST

ನಾನು ತಪ್ಪಿತಸ್ಥರನ್ನು ಬಿಡಬೇಕು ಅಂತಾ ಪತ್ರ ಬರೆದಿಲ್ಲ. ಅಮಾಯಕರು ಅಥವಾ ವಿದ್ಯಾರ್ಥಿಗಳು ವಿನಾಕಾರಣ ಶಿಕ್ಷೆ ಅನುಭವಿಸೋದು ಬೇಡ ಅನ್ನೋದೇ ನನ್ನ ಕಳಕಳಿಯಾಗಿದೆ ಎಂದು ಶಾಸಕ ತನ್ವೀರ್‌ ಸೇಠ್‌ ಹೇಳಿದ್ದಾರೆ.

ಬೆಂಗಳೂರು (ಜು.26): ನಾನು ತಪ್ಪಿತಸ್ಥರನ್ನು ಬಿಡಬೇಕು ಅಂತಾ ಪತ್ರ ಬರೆದಿಲ್ಲ. ಅಥವಾ ಒಂದು ಕೋಮಿನ ವಿಚಾರವನ್ನು ಕೂಡಾ ಪ್ರಸ್ತಾಪ ಮಾಡಿಲ್ಲ. ಅಮಾಯಕರು ಅಥವಾ ವಿದ್ಯಾರ್ಥಿಗಳು ವಿನಾಕಾರಣ ಶಿಕ್ಷೆ ಅನುಭವಿಸೋದು ಬೇಡ ಅನ್ನೋದೇ ನನ್ನ ಕಳಕಳಿಯಾಗಿದೆ ಎಂದು ಶಾಸಕ ತನ್ವೀರ್‌ ಸೇಠ್‌ ಹೇಳಿದ್ದಾರೆ.

ಬೆಂಗಳೂರಿನ ಡಿ.ಜೆ. ಹಳ್ಳಿ, ಕೆಜಿ ಹಳ್ಳಿ, ಹುಬ್ಬಳ್ಳಿ ಮತ್ತು ಶಿವಮೊಗ್ಗ ಸೇರಿದಂತೆ ವಿವಿಧಡೆ ನಡೆದ ಗಲಭೆಗಳಲ್ಲಿ ಮೊಕದ್ದಮೆ ಮರು ಪರಿಶೀಲಿಸಿ ಅಮಾಯಕರ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆದ ಕುರಿತು ಮಾಧ್ಯಮಗಳೊಂದಿಗೆ ಶಾಸಕ ತನ್ವೀರ್‌ ಸೇಠ್‌ ಮಾತನಾಡಿದರು. ಬಿಜೆಪಿಯವರು ಆರೋಪ ಮಾಡ್ತಾ ಇರುವಂತೆ ನಾವು ಒಂದು ಕೋಮು ಓಲೈಕೆ ಮಾಡುವ ಕೆಲಸ ಮಾಡ್ತಾ ಇಲ್ಲ. ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಎಲ್ಲರೂ ಸಾಮರಸ್ಯದಿಂದ ಬಾಳಬೇಕು ಎಂಬುದು ನನ್ನ ಆಶಯವಾಗಿದೆ ಎಂದರು.

ಸ್ವತಃ ನನ್ನ ಮೇಲೆ ಆದ ಹಲ್ಲೆ ಬಗ್ಗೆ ಕೂಡಾ ಸರ್ಕಾರ ಸರಿಯಾದ ತನಿಖೆ ನಡೆಸಿಲ್ಲ. ಅದರ ಬಗ್ಗೆ ಕೂಡಾ ತನಿಖೆ ನಡೆಸಿ ಅಂತಾ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಅದರ ಬಗ್ಗೆ ಸರಿಯಾದ ತನಿಖೆ ನಡೆದಿಲ್ಲ. ನಮ್ಮದೇ ಪಕ್ಷದ ಶಾಸಕರ ಮನೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಕೂಡಾ ತಪ್ಪಿತಸ್ಥರನ್ನು ಬಿಡಿ ಅಂತಾ ನಾನು ಹೇಳಿಲ್ಲ. ಆ ಗಲಭೆ ಆದ ಹಿನ್ನಲೆ ಏನು ಅಂತಲೂ ಎಲ್ಲರಿಗೂ ಗೊತ್ತಿದೆ. ಬಿಜೆಪಿಯವರು ಆರೋಪ ಮಾಡ್ತಾ ಇರುವ ರೀತಿ  ನಾವು ಓಲೈಕೆ ಮಾಡ್ತಾ ಇಲ್ಲ. ಒಟ್ಟಾರೆ ಅಮಾಯಕರಿಗೆ  ಶಿಕ್ಷೆ ಆಗಬಾರದು ಎಂಬುದೇ ನನ್ನ ಉದ್ದೇಶವಾಗಿದೆ. ಗೃಹ ಸಚಿವ ಪರಮೇಶ್ವರ್ ಅವರೂ ಕೂಡಾ ತಳಮಟ್ಟದಿಂದ ಬಂದವರು. ಅವರು ಕೂಡಾ ಅರ್ಥ ಮಾಡಿಕೊಂಡು ಈ ಪತ್ರದ ಬಗ್ಗೆ ಕ್ರಮ ತೆಗದುಕೊಳ್ತಾರೆ ಅನ್ನೋ ವಿಶ್ವಾಸ ಇದೆ ಎಂದು ಹೇಳಿದರು. 

81:52ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್: 40 ಮಂದಿ ಸಾಧಕ ಸಾಧಕ ವೈದ್ಯರಿಗೆ ಸನ್ಮಾನದ ಕಿರೀಟ
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
Read more