BitCoin Scam: 2018 ರಲ್ಲೇ ಬಿಟ್‌ಕಾಯಿನ್ ಬಾಂಬ್ ಹಾಕಿದ್ರು ಎಚ್‌ಡಿಕೆ, ಸಿದ್ದುಗೆ ಬಿಜೆಪಿ ಪ್ರಶ್ನೆ

BitCoin Scam: 2018 ರಲ್ಲೇ ಬಿಟ್‌ಕಾಯಿನ್ ಬಾಂಬ್ ಹಾಕಿದ್ರು ಎಚ್‌ಡಿಕೆ, ಸಿದ್ದುಗೆ ಬಿಜೆಪಿ ಪ್ರಶ್ನೆ

Published : Nov 17, 2021, 03:10 PM ISTUpdated : Nov 17, 2021, 04:30 PM IST

- 2018 ರಲ್ಲೇ ಎಚ್‌ಡಿಕೆ ಎಚ್ಚರಿಸಿದ್ದರೂ ಸಿದ್ದು ‘ಬಿಟ್‌’ ಹಾಕಿದ್ದರು: ಬಿಜೆಪಿ

- ನಲಪಾಡ್‌ ಹಲ್ಲೆ ಘಟನೆ ಕ್ಷುಲ್ಲಕ ಕಾರಣಕ್ಕೆ ನಡೆದಿಲ್ಲ

ಹ್ಯಾಕಿಂಗ್‌, ಬಿಟ್‌ಕಾಯಿನ್‌, ಹವಾಲಾ ಕೈವಾಡ ಇತ್ತು

 

ಬೆಂಗಳೂರು (ನ. 17): 3 ವರ್ಷದ ಹಿಂದೆ ನಗರದ ಯುಬಿ ಸಿಟಿಯಲ್ಲಿ ನಡೆದಿದ್ದ ಕಾಂಗ್ರೆಸ್‌ ಶಾಸಕ ಎನ್‌.ಎ.ಹ್ಯಾರಿಸ್‌ ಪುತ್ರ ಮೊಹಮ್ಮದ್‌ ನಲಪಾಡ್‌ ಗಲಾಟೆ ಪ್ರಕರಣದ ಹಿಂದೆ ಬಿಟ್‌ ಕಾಯಿನ್‌ ದಂಧೆ (Bitcoin Scam) ಇದೆ ಎಂಬ ಶಂಕೆಯನ್ನು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆಗಲೇ ವ್ಯಕ್ತಪಡಿಸಿದ್ದರು. ಆಗ ವಿರೋಧ ಪಕ್ಷದಲ್ಲಿದ್ದ ಕುಮಾರಸ್ವಾಮಿ ಅವರು ನಲಪಾಡ್‌ ಪ್ರಕರಣದ ಹಿಂದೆ ಬಿಟ್‌ ಕಾಯಿನ್‌ ದಂಧೆಯಿದೆ ಎಂಬ ಗಂಭೀರ ಆರೋಪವನ್ನು ಹುಬ್ಬಳ್ಳಿಯಲ್ಲಿ ಮಾಡಿದ್ದರು. ಆದರೆ, ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಆ ಆರೋಪವನ್ನು ಕಿವಿಗೇ ಹಾಕಿಕೊಳ್ಳಲಿಲ್ಲ ಎಂದು ಬಿಜೆಪಿ ಆರೋಪಿಸಿದೆ. 

ಯುಬಿ ಸಿಟಿ ಗಲಾಟೆ ಪ್ರಕರಣದ ಸಂಬಂಧ 2018ರ ಅಕ್ಟೋಬರ್‌ 5ರಂದು ಶ್ರೀಕಿ ಹೈಕೋರ್ಟ್‌ನಲ್ಲಿ ಜಾಮೀನು ಪಡೆಯುತ್ತಾನೆ. ಆದರೆ ಜಾಮೀನು ಪಡೆಯದಂತೆ ಆಗಿನ ಕಾಂಗ್ರೆಸ್‌ ಸರ್ಕಾರ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ಜಾಮೀನು ತೆಗೆದುಕೊಂಡ ನಂತರ ಶ್ರೀಕಿಯನ್ನು ಪೊಲೀಸ್‌ ಠಾಣೆಗೆ ಕರೆಸಿ ಯಾಕೆ ವಿಚಾರಣೆ ನಡೆಸಲಿಲ್ಲ? ಈ ರೀತಿ ಮಾಡದಂತೆ ತಡೆದದ್ದು ಯಾರು? 2018ರಲ್ಲೇ ಶ್ರೀಕಿ ತಾನು ಹ್ಯಾಕ್‌ ಮಾಡುತ್ತಿರುವುದಾಗಿ ಹೇಳಿಕೆ ನೀಡಿದ್ದರೂ ಆತನ ವಿರುದ್ಧ ಯಾಕೆ ಪ್ರಕರಣ ದಾಖಲಿಸಲಿಲ್ಲ? ಆತನಿಗೆ ರಾಜಾತಿಥ್ಯ ಕೊಟ್ಟವರು ಯಾರು ಎಂಬುದಕ್ಕೆ ಕಾಂಗ್ರೆಸ್‌ ಮುಖಂಡರು ಉತ್ತರಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. 

 

81:52ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್: 40 ಮಂದಿ ಸಾಧಕ ಸಾಧಕ ವೈದ್ಯರಿಗೆ ಸನ್ಮಾನದ ಕಿರೀಟ
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
Read more