script type="application/ld+json"> { "@context": "https://schema.org", "@type": "WebSite", "name": "Asianet Suvarna News", "url": "https://kannada.asianetnews.com", "potentialAction": { "@type": "SearchAction", "target": "https://kannada.asianetnews.com/search?topic={search_term_string}", "query-input": "required name=search_term_string" } }

Cabinet Reshuffle: ಅಸಮರ್ಥರು, ಪಕ್ಷಕ್ಕೆ ಹೊರೆಯಾದವರನ್ನು ಕೈ ಬಿಡಬೇಕು: ಸಿಟಿ ರವಿ

Mar 14, 2022, 3:24 PM IST

ಸಂಪುಟ ವಿಸ್ತರಣೆ ವಿಚಾರ ರಾಜ್ಯ ರಾಜಕಿಯದಲ್ಲಿ ಕೇಳಿ ಬರುತ್ತಿದೆ. 'ಸಂಪುಟ ವಿಸ್ತರಣೆ ವೇಳೆ ಅಸಮರ್ಥರನ್ನು ಕೈ ಬಿಡಬೇಕು. ಯಾರು ಖಾತೆಗೂ ನ್ಯಾಯ ಕೊಟ್ಟು, ಜನಸ್ನೇಹಿಯಾಗಿ, ಪಕ್ಷದ ಪರ ಕೆಲಸ ಮಾಡುತ್ತಿದ್ದಾರೋ ಅವರಿಗೆ ಇನ್ನಷ್ಟು ಜವಾಬ್ದಾರಿ ಕೊಡಬೇಕು' ಎಂದು ಸಿಟಿ ರವಿ ಹೇಳಿದ್ದಾರೆ. 

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ಜನರಿಗೆ ಹಸ್ತ ಕಂಡರೆ ಅದನ್ನ ಕಣ್ಣೆತ್ತಿಯೂ ನೋಡಬಾರದು ಅನ್ನೋ ಸ್ಥಿತಿಗೆ ಬಂದಿದ್ದಾರೆ. ಹೀಗಿರುವಾಗ ಕಾಂಗ್ರೆಸ್ ಮತ್ತೆ ಸೋನಿಯಾ ಗಾಂಧಿಯವರ ನಾಯಕತ್ವ ಬೇಕು ಅಂತಾರೆ, ಇದು ಹೀಗೆ ಮುಂದುವರೆದರೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ' ಎಂದು ಸಿಟಿ ರವಿ ಹೇಳಿದ್ದಾರೆ.