ಹಿಜಾಬ್ ಆಯ್ತು (Hijab Row) ವ್ಯಾಪಾರಿ ವಾರ್ (Ban Muslim Traders) ಆಯ್ತು, ಈಗ ಜನಸಂಖ್ಯಾ ನಿಯಂತ್ರಣದ ಕುರಿತು ಚರ್ಚೆಯಾಗುತ್ತಿದೆ.
ಬೆಂಗಳೂರು (ಮಾ. 28): ಹಿಜಾಬ್ ಆಯ್ತು (Hijab Row) ವ್ಯಾಪಾರಿ ವಾರ್ (Ban Muslim Traders) ಆಯ್ತು, ಈಗ ಜನಸಂಖ್ಯಾ ನಿಯಂತ್ರಣದ ಕುರಿತು ಚರ್ಚೆಯಾಗುತ್ತಿದೆ.
'ನಮ್ಮ ದೇಶದಲ್ಲಿ ಜನಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಜನಸಂಖ್ಯಾ ನಿಯಂತ್ರಣಕ್ಕೆ ಸರ್ಕಾರ ಕ್ರಮ ತೆಗೆದುಕೊಂಡರೂ, ನಿರೀಕ್ಷಿತ ಫಲಿತಾಂಶ ಕಾಣಬೇಕಿದೆ. ಸರ್ಕಾರ ನೀಡುವ ಎಲ್ಲಾ ಸೌಕರ್ಯ, ಸವಲತ್ತುಗಳನ್ನು 2 ಮಕ್ಕಳನ್ನು ಹೊಂದಿರುವವರಿಗೆ ಮಾತ್ರ ನೀಡುವ ಬಗ್ಗೆ ಚಿಂತಿಸಬೇಕು' ಎಂದು ಪರಿಷತ್‌ನಲ್ಲಿ ಬಿಜೆಪಿ ನಾಯಕಿ ಭಾರತಿ ಶೆಟ್ಟಿ ಒತ್ತಾಯಿಸಿದ್ದಾರೆ.