KPSC Recruitment Scam: ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳು ಕೋಟಿ ಕೋಟಿಗೆ ಸೇಲ್‌!

Apr 27, 2022, 12:21 PM IST

ಮಂಗಳೂರು(ಎ.27): ಪಿಎಸ್‌ಐ ಹುದ್ದೆಗಳ ನೇಮಕಾತಿ (PSI Exam Scam) ಸಂಬಂಧ ನಡೆದ ಪರೀಕ್ಷೆಯಲ್ಲಿ ಅಕ್ರಮ ಬಹಿರಂಗವಾದ ಬೆನ್ನಲ್ಲೇ  ಕರ್ನಾಟಕ ಲೋಕಸೇವಾ ಆಯೋಗ (Karnataka Public Service Commission) ಗೆಜೆಟೆಡ್ ಪ್ರೊಬೆಷನರಿ (gazetted probationers) ಹುದ್ದೆ ನೇಮಕಾತಿಯಲ್ಲೂ ಅಕ್ರಮ ನಡೆದಿದೆ ಎಂದು 2015ರ ಬ್ಯಾಚ್ ಅಭ್ಯರ್ಥಿ ಮಂಗಳೂರು ಮೂಲದ ಯು.ಟಿ ಫರ್ಝಾನಾ ಆರೋಪಿಸಿದ್ದಾರೆ. ಎಸಿ, ತಹಶೀಲ್ದಾರ್, ಡಿವೈಎಸ್ಪಿ ಹಂತದ 'ಎ' ಗ್ರೇಡ್ ಹುದ್ದೆಗಳು ಕೋಟಿ ಕೋಟಿಗೆ ಮಾರಾಟ ಮಾಡಿದ್ದಾರೆ. ಈ ಅಕ್ರಮದ ದಾಖಲೆಗಳನ್ನು ಯಾವುದೇ ತನಿಖಾಧಿಕಾರಿಗಳಿಗೆ ನೀಡಲು ಸಿದ್ದ ಎಂದಿದ್ದಾರೆ.

ECIL Recruitment 2022: ವಿವಿಧ 20 ಹುದ್ದೆಗಳಿಗೆ ನೇಮಕಾತಿ, ₹2.4 ಲಕ್ಷ ವೇತನ!

 ಈಗಾಗಲೇ  ಅಕ್ರಮದ ವಿರುದ್ಧ 52 ಅಭ್ಯರ್ಥಿಗಳೂ ಕಾನೂನು ಹೋರಾಟ ಮಾಡುತ್ತಿದ್ದಾರೆ. 2017 ರಲ್ಲಿ ನಾನು ಪರೀಕ್ಷೆ ಬರೆದಿದ್ದೆ 2019ರಲ್ಲಿ ಫಲಿತಾಂಶ ಬಂದಿತ್ತು. ಫಲಿತಾಂಶದಲ್ಲಿ ಅನುಮಾನ ಬಂದಿರುವ ಹಿನ್ನೆಲೆಯಲ್ಲಿ ಎಲ್ಲಾ ವಿಷಯದ ಅಂಕಗಳನ್ನು ಅಭ್ಯರ್ಥಿಗಳು ಕೇಳಿದ್ದರು. ಆದರೆ ಅಂಕಪಟ್ಟಿ ನೀಡಲು ಕೆಪಿಎಸ್‌ಸಿ ನಿರಾಕರಿಸಿದೆ. ಉತ್ತರ ಪತ್ರಿಕೆ ತೋರಿಸಲು ಹೈಕೋರ್ಟ್ ಆದೇಶಿಸಿದ್ರೂ ಕೂಡ ಕೆಪಿಎಸ್‌ಸಿ ನಿರ್ಲಕ್ಷ್ಯ ತೋರಿದೆ ಎಂದು ಫರ್ಝಾನಾ ಆರೋಪಿಸಿದ್ದಾರೆ.