ಯುವ ಸಿನಿಮಾಗಾಗಿ ಕಾದು ಕುಂತ ದೊಡ್ಮನೆ ಫ್ಯಾನ್ಸ್! ಸಲಾರ್‌ಗಾಗಿ ಯುವ ರಿಲೀಸ್ ತಡವಾಗುತ್ತಾ..?

Oct 19, 2023, 10:15 AM IST


ಡಿಸೆಂಬರ್‌ನಲ್ಲಿ ‘ಯುವ’ ನೋಡ್ತಿವಿ ಅಂತ ಕಾದು ಕೂತಿದ್ದ ಅಭಿಮಾನಿಗಳು ಬೇಸರವಾಗಿದ್ದಾರೆ. ಸಲಾರ್ ಆ ಜಾಗವನ್ನು ಆಕ್ರಮಿಸಿದೆ. ರಾಮಾಚಾರಿ ರಾಜಕುಮಾರದಂತಹ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ನಿರ್ದೇಸಕ ಸಂತೋಷ್ ಆನಂದ್ರಾಮ್ ಅವರ ನಿರ್ದೇಶನದ ಸಿನಿಮಾ ಯುವ. ರಾಘವೇಂದ್ರ ರಾಜ್‌ಕುಮಾರ್ ಕಿರಿಯ ಪುತ್ರ ಯುವರಾಜ್‌ಕುಮಾರ್(Yuvarajkumar) ಮೊದಲ ಸಿನಿಮಾ ಇದಾಗಿದ್ದು, ಕಾಂತರಾ ಖ್ಯಾತಿಯ ಸಪ್ತಮಿ ಗೌಡ (Sapthami Gowda)ಯುವಗೆ ನಾಯಕಿಯಾಗಿದ್ದಾರೆ. ಯುವ ಸಿನಿಮಾದ  ಲಡಾಕ್ ಟು ಬಳ್ಳಾರಿ ರೌಂಡ್ಸ್ ಜೊತೆಗೆ 8 ದಿನಗಳ ಸಿಕ್ರೇಟ್ ವಿತ್ ರಿಲೀಸ್ ಪ್ಲ್ಯಾನ್ ಇಲ್ಲಿದೆ ನೋಡಿ.ಅಪ್ಪುರಂತೆ ಡ್ಯಾನ್ಸ್ (Dance) ಫೈಟ್ ಜಿಮ್ನಾಸ್ಟಿಕ್ ಕಲಿತಿರೋ ಯುವರಾಜ್‌ಕುಮಾರ್ ಮೊದಲ ಸಿನಿಮಾ ಮೇಲೆ ಫ್ಯಾನ್ಸ್ ಭಾರೀ ನಿರೀಕ್ಷೆಯಿದೆ. ಯುವ ಸಿನಿಮಾ ಶೂಟಿಂಗ್  ಇದೀಗ ಆಲ್ ಮೋಸ್ಟ್ ಮುಗಿದಿದೆ. ಟಾಕಿ ಭಾಗದ ಶೂಟಿಂಗ್ ಕಂಪ್ಲೀಟ್ ಮಾಡಿಕೊಂಡಿರುವ ‘ಯುವ’ ಎರಡು ಹಾಡಿನ ಚಿತ್ರೀಕರಣಕ್ಕೆ ರೆಡಿಯಾಗ್ತಿದ್ದಾರೆ. ಲಡಾಕ್‌ನಲ್ಲಿ ಈ ಸಿನಿಮಾದ ಹಾಡೊಂದನ್ನ ಚಿತ್ರೀಕರಿಸಲು ಟೀಮ್ ಪ್ಲ್ಯಾನ್ ಮಾಡಿಕೊಂಡಿದೆ. ಲಡಾಕ್‌ನಿಂದ ಬಂದ್ಮೇಲೆ ಬಳ್ಳಾರಿಯಲ್ಲಿ ಇನ್ನೊಂದು ಹಾಡಿಗೆ ಯುವರಾಜ್ ಕುಮಾರ್ ಹೆಜ್ಜೆ ಹಾಕಲಿದ್ದಾರೆ. ಬಳ್ಳಾರಿ, ಲಡಾಕ್, ಬೆಂಗಳೂರು ಸೇರಿಸಿ 8 ದಿನ ಶೂಟಿಂಗ್ ಮುಗಿದರೆ ಮುಂದಿನ ವಾರದಲ್ಲಿ ಹೊಂಬಾಳೆ ಸಂಸ್ಥೆ ಯುವ ರಿಲೀಸ್ ಡೇಟ್ ಅನೌನ್ಸ್  ಮಾಡಲಿದ್ದಾರೆ.  ಅನೌನ್ಸ್ ಮೆಂಟ್ ಬಳ್ಳಾರಿ, ಲಡಾಕ್, ಬೆಂಗಳೂರು ಸೇರಿಸಿ 8 ದಿನ ಶೂಟಿಂಗ್ ಮಾಡಿದ್ದರೆ ಈ ಸಿನಿಮಾ ಕಂಪ್ಲೀಟ್. ಮುಂದಿನ ವಾರದಲ್ಲಿ ಹೊಂಬಾಳೆ ಸಂಸ್ಥೆ ಯುವ ರಿಲೀಸ್ ಡೇಟ್  ಮಾಡಲಿದೆ. ಒಳ್ಳೆಯ ಟೈಮ್ ಒಳ್ಳೆಯ ಮುಹೂರ್ತದಲ್ಲಿ ‘ಯುವ’ ಸಿನಿಮಾ ಚಿತ್ರಮಂದಿರಕ್ಕೆ ತಂದು ಜಾತ್ರೆ ಮಾಡಲು ಹೊಂಬಾಳೆ ರೆಡಿಯಾಗ್ತಿದೆ.

ಇದನ್ನೂ ವೀಕ್ಷಿಸಿ:  'ಯಶ್19'ಗಾಗಿ ರಾಕಿ ಭಾಯ್ ತಾಲೀಮು: ಜಿಮ್‌ನಲ್ಲಿ ಬೆವರು ಹರಿಸುತ್ತಿದ್ದಾರೆ KGF ಕಿಂಗ್!