Dec 27, 2022, 3:48 PM IST
ನಾವು ಬೇರೆ ಚಿತ್ರರಂಗಗಳ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು, ಬೇರೆ ಚಿತ್ರರಂಗಗಳನ್ನು ಟ್ರೋಲ್ ಮಾಡುವುದನ್ನು ಬೆಂಬಲಿಸಬಾರದು, ಒಳ್ಳೆ ಚಿತ್ರಗಳನ್ನು ಮಾಡೋ ಚಿತ್ರರಂಗಳನ್ನು ಗೌರವಿಸಬೇಕು ಎಂದು ನಟ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ. ಅಷ್ಟೆ ಅಲ್ಲ ನಾವು ಸಿನಿಮಾದಲ್ಲಿ ಬೆಳೆದಿರುವುದನ್ನು ನೋಡಿ ಹೊಟ್ಟೆಕಿಚ್ಚು ಪಡಬಾರದು, ನಾವೇ ಬೆಸ್ಟ್ ಎಂದು ಸುಮ್ಮನೆ ಕೂರಲೂ ಬಾರದು, ಹೋಗಿ ಪೈಪೋಟಿ ನೀಡಬೇಕು ಅಂತ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ. ಯಶ್ ಹೇಳಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.