KGF Chapter 2: ಜರ್ಮನಿಯಲ್ಲಿ ಐದು ಭಾಷೆಯಲ್ಲಿ ಬರುತ್ತೆ ರಾಕಿಭಾಯ್ ಸಿನಿಮಾ!

KGF Chapter 2: ಜರ್ಮನಿಯಲ್ಲಿ ಐದು ಭಾಷೆಯಲ್ಲಿ ಬರುತ್ತೆ ರಾಕಿಭಾಯ್ ಸಿನಿಮಾ!

Published : Apr 02, 2022, 04:23 PM IST

'ಕೆಜಿಎಫ್ ಚಾಪ್ಟರ್ 2' ರಾಕಿಂಗ್ ಸ್ಟಾರ್ ಯಶ್ ಬಣ್ಣದ ಜಗತ್ತಿನ ಬಾಕ್ಸಾಫೀಸ್ ಭೇಟೆ ಆಡೋಕೆ ಸಜ್ಜುಗೊಳಿಸಿರೋ ತೂಫಾನ್ ಇದು. 'ಕೆಜಿಎಫ್ ಚಾಪ್ಟರ್ 1' ರಲ್ಲಿ ರಾಕಿ ಇಟ್ಟಿದ್ದ ಗುರಿ ಮಿಸ್ ಆಗದೇ ಬಾಕ್ಸಾಫೀಸ್‌ನಲ್ಲಿ ಗೆದ್ದಿತ್ತು. 

'ಕೆಜಿಎಫ್ ಚಾಪ್ಟರ್ 2' (KGF Chapter 2) ರಾಕಿಂಗ್ ಸ್ಟಾರ್ ಯಶ್ (Yash) ಬಣ್ಣದ ಜಗತ್ತಿನ ಬಾಕ್ಸಾಫೀಸ್ ಭೇಟೆ ಆಡೋಕೆ ಸಜ್ಜುಗೊಳಿಸಿರೋ ತೂಫಾನ್ ಇದು. 'ಕೆಜಿಎಫ್ ಚಾಪ್ಟರ್ 1'ರಲ್ಲಿ (KGF) ರಾಕಿ ಇಟ್ಟಿದ್ದ ಗುರಿ ಮಿಸ್ ಆಗದೇ ಬಾಕ್ಸಾಫೀಸ್‌ನಲ್ಲಿ ಗೆದ್ದಿತ್ತು. ಅಷ್ಟೆ ಅಲ್ಲ ದೇಶದ ಸಿನಿ ಮಾರ್ಕೇಟ್‌ನಲ್ಲಿ ಕನ್ನಡ ಸಿನಿಮಾಗಳಿಗೆ ಒಂದು ಘನತೆ ಸಿಗೋ ಹಾಗೆ ಮಾಡಿತ್ತು 'ಕೆಜಿಎಫ್ ಚಾಪ್ಟರ್ 1' ಆದರೆ ಈ ಬಾರಿ ವರ್ಲ್ಡ್ ಸಿನಿ ಮಾರ್ಕೇಟ್‌ನಲ್ಲಿ ಕನ್ನಡ ಸಿನಿಮಾಗಳ ಬೇಡಿಕೆಯನ್ನ ಹೆಚ್ಚುವಂತೆ ಮಾಡ್ತಿದೆ 'ಕೆಜಿಎಫ್ ಚಾಪ್ಟರ್ 2' ಇದಕ್ಕೆ ಬೆಸ್ಟ್ ಎಕ್ಸಾಂಪಲ್ ವಿಶ್ವದಾದ್ಯಂತ ಎದ್ದಿರೋ 'ಕೆಜಿಎಫ್ 2' ಕ್ರೇಜ್ ಸುನಾಮಿ.

KGF 2 ಟ್ರೇಲರ್ ರಿಲೀಸ್‌ ವೇಳೆ ರಾಧಿಕಾ ಧರಿಸಿದ್ದ ಡ್ರೆಸ್ ಬೆಲೆ ಹುಡುಕಿದವರಿಗೆ ಶಾಕ್..!

ಹೌದು! ವಿಶ್ವದಾದ್ಯಂತ 'ಕೆಜಿಎಫ್ 2' ಸಿನಿಮಾದ ಬೇಡಿಕೆ ಹೇಗಿದೆ ಅನ್ನೋದಕ್ಕೆ ಇಲ್ಲೊಂದು ಸ್ಮಾಲ್ ಎಕ್ಸಾಂಪಲ್ ಇದೆ. ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಫಿಝಿ, ಪಪುವ ನ್ಯೂಗಿನಿಯಾ, ಸಿಂಗಪೂರ್, ಯೂರೋಪ್ ಕಂಟ್ರಿ, ಮಲೇಶಿಯಾ, ಯುಕೆ, ಆಫ್ರೀಕಾದಲ್ಲಿ ಸಿನಿಮಾ ತೆರೆಗೆ ಬರ್ತಾ ಇದೆ. ಅಷ್ಟೆ ಅಲ್ಲ ಜರ್ಮನಿ (Germany) ಒಂದೇ ದೇಶದಲ್ಲಿ ಕೆಜಿಎಫ್-2 ಸಿನಿಮಾ ಐದು ಭಾಷೆಯಲ್ಲಿ 150ಕ್ಕೂ ಹೆಚ್ಚಿನ ಸ್ಕ್ರೀನ್‌ಗಳಲ್ಲಿ ತೆರೆ ಕಾಣುತ್ತಿದೆ. ಆಲ್ ಇಂಡಿಯಾದ 'ಕೆಜಿಎಫ್ 2' ಸಿನಿಮಾ ವಿತರಕರೆಲ್ಲಾ ಸೇರಿ ಈ ಸಿನಿಮಾವನ್ನ ಕನ್ನಡ, ಹಿಂದಿ, ತೆಲುಗು, ಮೆಲೆಯಾಳಂ ಹಿಂದಿ,ತಮಿಳಿನಲ್ಲಿ ರಿಲೀಸ್ ಮಾಡುತ್ತಿದ್ದಾರೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more