ಬಾಕ್ಸಾಫೀಸ್ ಮೂನ್ ಸ್ಟಾರ್ ಯಶ್,  ಮೊದಲ ದಿನದ KGF 2 ಗಳಿಕೆ ಎಷ್ಟು ಗೊತ್ತಾ.?

ಬಾಕ್ಸಾಫೀಸ್ ಮೂನ್ ಸ್ಟಾರ್ ಯಶ್, ಮೊದಲ ದಿನದ KGF 2 ಗಳಿಕೆ ಎಷ್ಟು ಗೊತ್ತಾ.?

Published : Apr 16, 2022, 02:37 PM ISTUpdated : Apr 16, 2022, 03:07 PM IST

- ಹಿಂದಿಯಲ್ಲಿ ಹೊಸ ಇತಿಹಾಸ ಬರೆದ ರಾಕಿಂಗ್ ಸ್ಟಾರ್.!

- ಉತ್ತರ ಭಾರದಲ್ಲಿ ದಕ್ಷಿಣ ಭಾರತದ ರಾಕಿ ಅಬ್ಬರ ಹೇಗಿದೆ ಗೊತ್ತಾ.?

- ನ್ಯಾಷನಲ್ ಸ್ಟಾರ್ ಆಗಿದ್ದ ಯಶ್ ಈಗ ಗ್ಲೋಬಲ್ ಸ್ಟಾರ್..!
 

ಬೆಂಗಳೂರು (ಏ. 16): ರಾಕಿ ಭಾಯ್ (Yash) ಅಬ್ಬರಕ್ಕೆ ಬಾಲಿವುಡ್ ಗಲ್ಲಾಪಟ್ಟಿಗೆ ಶೇಕ್ ಆಗಿದೆ. ಕೆಜಿಎಫ್-2 (KGF 2) ಸಿನಿಮಾ ಬಿಡುಗಡೆ ಆಗುತ್ತೆ ಅಂದಾಗ ಬಾಲಿವುಡ್ ಬಿಗ್ ಸ್ಟಾರ್‌ಗಳ ಎದೆಯಲ್ಲಿ ನಡುಕ ಶುರುವಾಗಿತ್ತು. ಹಿಂದಿಯ ಕಲೆಕ್ಷನ್ ವಿಚಾರದಲ್ಲಿ ನಮ್ಮ ಸಿನಿಮಾಗಳನ್ನ ಮೀರಿಸೋಕೆ ಯಾರಿಂದಲೂ ಸಾಧ್ಯವಿಲ್ಲ ಎನ್ನುತ್ತಿದ್ದವರು ಇಂದು ಬಾಯ್ ಮೇಲೆ ಬೆರಳಿಟ್ಟು ಕಣ್ ಕಣ್ ಬಿಡುತ್ತಿದ್ದಾರೆ.

ಯಾಕಂದ್ರೆ ಯಶ್ (Yash) ಒಂದೇ ಹಡೆತಕ್ಕೆ ಒಂದೇ ದಿನದಲ್ಲಿ ಹಿಂದಿಯಲ್ಲಿ ಬರೋಬ್ಬರಿ 53.95 ಕೋಟಿ ಕಲೆಕ್ಷನ್ ಮಾಡಿದ್ದಾರೆ. ಹಿಂದಿಯಲ್ಲಿ 51.60 ಕೋಟಿ ಕಲೆಕ್ಷನ್ ಮಾಡೋ ಮೂಲಕ ಅತಿ ಹೆಚ್ಚು ಗಳಿಸಿದ ಸಿನಿಮಾ ಹೃತಿಕ್ ರೋಷನ್ ಹಾಗು ಟೈಗರ್ ಶ್ರಾಫ್ ನಟಿಸಿದ್ದ ವಾರ್ ಚಿತ್ರವಾಗಿತ್ತು. ಆದ್ರೆ ಈಗ 53.95 ಕೋಟಿ ಗಳಿಸೋ ಮೂಲಕ ಹಿಂದಿಯಲ್ಲಿ ಫಸ್ಟ್ ಡೇ ಅತಿ ಹೆಚ್ಚು ಗಳಿಸಿರೋ ಮೊದಲ ಸಿನಿಮಾ ಅನ್ನೋ ರೆಕಾರ್ಡನ್ನು 2 ತನ್ನ ಹೆಸರಿಗೆ ಬರೆದುಕೊಂಡಿದೆ. 

ಕೆಜಿಎಫ್-2 ಚಿತ್ರ ಕನ್ನಡ, ತೆಲುಗು, ತಮಿಳು, ಹಾಗು ಮಲೆಯಾಳಂನಲ್ಲಿ ಒಟ್ಟು 81 ಕೋಟಿ ಕಲೆಕ್ಷನ್ ಮಾಡಿದೆ. ಹೊರ ದೇಶದಲ್ಲೂ ಕೆಜಿಎಫ್-2 ಬಹು ದೊಡ್ಡ ಕಲೆಕ್ಷನ್ ಮಾಡಿದೆ. ಭಾರತದಲ್ಲಿ 134.5 ಕೋಟಿ ಗಳಿಸಿರೋ ಕೆಜಿಎಫ್-2 ಹೊರ ದೇಶದಲ್ಲಿ 90 ಕೋಟಿ ಕಲೆಕ್ಷನ್ ಮಾಡಿದೆ ಅಂತ ಅಂದಾಜಿಸಲಾಗಿದೆ. ಹೀಗಾಗಿ ಫಸ್ಟ್ ಡೇ ಕೆಜಿಎಫ್-2 ಸಿನಿಮಾದ ಒಟ್ಟು ಗಳಿಕೆ 224 ಕೋಟಿ ಆಗುತ್ತೆ. ಹೀಗಾಗಿ ಈಗ ವಿಶ್ವದಾದ್ಯಂತ ರಾಕಿ ದರ್ಬಾರ್ ನಡೆಯುತ್ತದೆ..

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
Read more