'ಯಶ್ 19' ಸಿನಿಮಾ ಅನೌನ್ಸ್‌ಗೆ ದಿನಾಂಕ ನಿಗದಿ: ರಾಕಿಯನ್ನ ಆಶೀರ್ವದಿಸುತ್ತಾಳೆ ವರಮಹಾಲಕ್ಷ್ಮಿ!

Aug 22, 2023, 9:07 AM IST

ಇಷ್ಟು ದಿನ ರಾಕಿಂಗ್ ಸ್ಟಾರ್ ಯಶ್ ಫ್ಯಾನ್ಸ್(Yash fans) ಕಾಯುತ್ತಿದ್ದ ದಿನ ಹತ್ತಿರ ಆಗಿದೆ. ಯಶ್ 19ಗಾಗಿ ಜಪ ತಪ ಮಾಡಿ ಹತ್ತಾರು ಹರಕೆ ಹೊತ್ತಿದ್ದ ಅಭಿಮಾನಿಗಳ ಆಸೆ ಮತ್ತು ನಿರೀಕ್ಷೆಗೆ ಈಗ ಉತ್ತರ ಸಿಗೋ ಟೈಂ ಬಂದಿದೆ. ಒಂದೂವರೆ ವರ್ಷದ ಯಶ್ ಅಭಿಮಾನಿಗಳ ವನವಾಸಕ್ಕೆ ಬ್ರೇಕ್ ಬೀಳುತ್ತಿದೆ. ಯಶ್ 19 ಸಿನಿಮಾಗಾಗಿ ರಾಕಿ ಫ್ಯಾನ್ಸ್ ಸೋಷಿಯಲ್ ಮೀಡಿಯಾ ಅಭಿಯಾನ ಮಾಡಿದ್ರು. ಆದ್ರೆ ಅದೆಲ್ಲ ಇಷ್ಟು ದಿನ ಲೆಕ್ಕಕ್ಕೇ ಬರಲಿಲ್ಲ. ಭಟ್ ಈಗ ವಿದೇಶದಲ್ಲಿರೋ ಯಶ್‌ರ ಡೈ ಹಾರ್ಡ್ ಅಭಿಮಾನಿಗಳು ಯಶ್ 19 (Yash 19) ಅನೌನ್ಸ್ ಮಾಡಿ ಅಂತ ಕೇಳಿಕೊಂಡಿರೋ ವಿಡಿಯೋ ಒಂದು ಹರಿದಾಡ್ತಿದೆ. ಈ  ವಿಡಿಯೋ ನೋಡಿದ್ರೆ ತುಂಬಾ ಪ್ರೊಪೇಷನಲ್ ಆಗಿ ಶೂಟಿಂಗ್ ಮಾಡಿ ವೈರಲ್ ಮಾಡ್ತಿರೋದು ಗೊತ್ತಾಗುತ್ತೆ. ಸೋ ಈ ವಿಡಿಯೋ ಹಿಂದಿನ ಗುಟ್ಟೇನು ಅಂತ ಹುಡುಕ್ತಾ ಹೋದ ನಿಮ್ಮ ಏಷ್ಯಾನೆಟ್ ಸುವರ್ಣ ನ್ಯೂಸ್ಗೆ ಸಿಕ್ಕಿದ ಉತ್ತರ ಇದು ಯಶ್19 ಸಿನಿಮಾದ ಅನೌನ್ಸ್ ಆಗ್ತಿರೋ ಪೂರ್ವ ಸಿದ್ಧತೆ ಅನ್ನೋದು. ರಾಕಿಂಗ್ ಸ್ಟಾರ್ ಯಶ್(Rocking star Yash) ಸಿನಿಮಾ ಅನೌನ್ಸ್ ಯಾವಾಗ ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಯಶ್ ಫ್ಯಾನ್ಸ್ನ ಮಾಡಿರೋ ಈ ವಿಡಿಯೋ. ಇದರ ಹಿಂದಿನ ಜಾಡು ಹುಡುಕ್ತಾ ಹೋದ್ರೆ ಸಿಕ್ಕ ಉತ್ತರ ರಾಕಿಗೆ ವರಮಹಾಲಕ್ಷ್ಮಿ ಆಶೀರ್ವಾದ ಸಿಕ್ತಿದೆ ಅನ್ನೋದು. ನಟ ಯಶ್ ತನ್ನ 19ನೇ ಸಿನಿಮಾವನ್ನ ಅನೌನ್ಸ್ ಮಾಡೋಕೆ ದಿನಾಂಕ ಫಿಕ್ಸ್ ಮಾಡಿಕೊಂಡಿದ್ದಾರೆ. ವರ ಮಹಾಲಕ್ಷ್ಮಿ ಹಬ್ಬ ಮುಗಿದು ಒಂದು ವಾರದ ಬಳಿಕ 19ನೇ ಸಿನಿಮಾ ಅನೌನ್ಸ್ ಮಾಡ್ತಾರೆ ಅಂತ ರಾಕಿಯ ಆಪ್ತ ಸ್ನೇಹಿತರು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಮಾಹಿತಿ ಕೊಟ್ಟಿದ್ದಾರೆ. 

ಇದನ್ನೂ ವೀಕ್ಷಿಸಿ:  Today Horoscope: ಇಂದಿನಿಂದ ಮಂಗಳಗೌರಿ ವ್ರತ ಆರಂಭ, ಇದರ ಮಹತ್ವವೇನು ಗೊತ್ತಾ ?