Jun 21, 2023, 4:53 PM IST
ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಇಂದು (ಜೂನ್ 21) ನಂಜನಗೂಡಿಗೆ ಭೇಟಿ ನೀಡಿದ್ದರು. ಯಶ್ ದಂಪತಿ ಜೊತೆ ಇಬ್ಬರೂ ಮುದ್ದಾದ ಮಕ್ಕಳನ್ನು ಕರೆದುಕೊಂಡು ಹೋಗಿದ್ದರು. ಶ್ರೀಕಂಠೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸದರು. ಜೊತೆಗೆ ಇಬ್ಬರೂ ಮಕ್ಕಳ ಜೊತೆ ಸಪಾರಿ ಕೂಡ ಎಂಜಾಯ್ ಮಾಡಿದ್ದಾರೆ. ನಾಗರ ಹೊಳೆ, ಬಂಡೀಪುರ ಅರಣ್ಯದಲ್ಲಿ ಸಫಾರಿ ಮಾಡಿದ ಯಶ್ ದಂಪತಿ ಮಕ್ಕಳಿಗೆ ವಿಶೇಷ ಅನುಭವ ಎಂದು ಹೇಳಿದ್ದಾರೆ. ಜೊತೆಗೆ ಸದ್ಯದಲ್ಲೇ ಮುಂದಿನ ಸಿನಿಮಾ ಅನೌನ್ಸ್ ಮಾಡುವುದಾಗಿ ಹೇಳಿದ್ದಾರೆ.