
ಶಿವಮೊಗ್ಗ ಜಿಲ್ಲೆ ಹೊಸನಗರದಲ್ಲಿರೋ ಮಾಸ್ತಿಕಟ್ಟೆಯ ಮಾಣಿ ಜಲಾಶಯದಲ್ಲಿ 'ಕಾಂತಾರ'-1 ಚಿತ್ರದ ಕೊನೆ ಹಂತದ ಚಿತ್ರೀಕರಣ ನಡೀತಿದೆ. ರಿಷಬ್ ಶೆಟ್ಟಿ ಸೇರಿ 30 ಕಲಾವಿದರಿಂದ ಬೋಟ್ ಮಗುಚಿ ಬಿದ್ದಿದೆ. ಬೋಟ್ನಲ್ಲಿದ್ದ ಕಲಾವಿದರು, ತಂತ್ರಜ್ಞರು ಎಲ್ಲರೂ ಈಜಿ ದಡ ಸೇರಿದ್ದಾರೆ.
ಕಾಂತಾರ-1 ತಂಡಕ್ಕೆ ನೋಟೀಸ್ ನೀಡಲಾಗಿದೆ ಅನ್ನೋ ಸುದ್ದು ಕೂಡ ಹರಿದಾಡ್ತಾ ಇದ್ವು. ಆದ್ರೆ ಮಾಣಿ ಜಲಾಶಯದ ಹಿನ್ನೀರಿನಲ್ಲಿ ಶೂಟಿಂಗ್ ನಡೆಸಲು ಎಲ್ಲಾ ಇಲಾಖೆಗಳಿಂದ ಅಗತ್ಯ ಅನುಮತಿ ಪಡೆಯಲಾಗಿದೆ . ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಕೆಪಿಸಿಎಲ್ ಸೇರಿದಂತೆ ಇದಕ್ಕೆ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆಯಲಾಗಿದೆ.ಇದೇ ವೇಳೆ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತಕ್ಕೂ ಈ ಕುರಿತು ಮಾಹಿತಿ ನೀಡಲಾಗಿದೆಯಂತೆ.