Jun 26, 2023, 3:32 PM IST
ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ. ಈ ದಶಕದಲ್ಲಿ ಅತಿ ಹೆಚ್ಚು ಗಾಸಿಪ್‌ಗೆ ಕಾರಣ ಆದ ಜೋಡಿ. ಇಬ್ಬರು ಲವ್ ಮಾಡ್ತಿದ್ದಾರೆ. ಡೇಟಿಂಗ್ ಮಾಡಿದ್ದಾರೆ. ಮಾಲ್ಡೀವ್ ನಲ್ಲಿ ಮಜಾ ಮಾಡಿದ್ದಾರೆ. ಹೈದರಾಬಾದ್ ,ಮುಂಬೈನಲ್ಲಿ ಊರೂರು ಸುತ್ತಿದ್ದಾರೆ ಅಂತೆಲ್ಲಾ ಕೇರಿ ಕೇರಿಯಲ್ಲೂ ಗುಲ್ಲೆಬ್ಬಿತ್ತು. ಆದ್ರೆ ಇವರಿಬ್ರು ಲವ್ ಸ್ಟೋರಿಗೆ ಇಷ್ಟು ದಿನ ಯಾವ್ದೇ ಸರಿಯಾದ ಪ್ರ್ಯೂಫ್ ಸಿಕ್ಕಿರಲಿಲ್ಲ. ಇದೀಗ ಗೀತಾ ಗೋವಿಂದನ ಪ್ರೇಮ ಪುರಾಣಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. ಈ ಪ್ರ್ಯೂಫ್ನಲ್ಲಿ ವಿಜಯ್ ರಶ್ಮಿಮಾ ಫ್ಯಾಮಿಲಿ ಜೊತೆ ಲಂಚ್ ಪಾರ್ಟಿ ಮಾಡಿದ್ದಾರೆ. ವಿಜಯ್ ರಶ್ಮಿಕಾ ಮಧ್ಯೆಯೂ ಕ್ಲಾಶ್ ಆಗಿದೆ ಅಂತ ಸುದ್ದಿ ಆಗಿತ್ತು. ಆದ್ರೆ ಈಗ ಇಬ್ಬರು ಪ್ಯಾಚಪ್ ಮಾಡಿಕೊಂಡಿದ್ದಾರಂತೆ. ಆ ಪ್ಯಾಚಪ್ ಬಳಿಕ ವಿಜಯ್ ಹಾಗೂ ರಶ್ಮಿಕಾ ರೆಸ್ಟೋರೆಂಟ್ ಒಂದರಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲಿ ಇವರ ಕುಟುಂಬದವರು ಕೂಡ ಇದ್ದರು ಅನ್ನೋದು ವಿಶೇಷ. ಈ ವೀಡಿಯೋ ಈಗ ರಶ್ಮಿಕಾ ವಿಜಯ್ ದೇವರಕೊಂಡ ಅಭಿಮಾನಿಗಳ ಮೊಬೈಲ್ನಲ್ಲಿ ಸಿಕ್ಕಾಪಟ್ಟೆ ಹರಿದಾಡ್ತಿದ್ದು, ಇಬ್ಬರ ಪ್ರೇಮ್ ಕಹಾನಿಗೆ ಸಾಕ್ಷಿಯಂತಿದೆ.
ಇದನ್ನೂ ವೀಕ್ಷಿಸಿ: ಬೆಳಗಾವಿ: ವೈನ್ ಶಾಪ್ ಮಾಲೀಕನ ಬೆವರಿಳಿಸಿ, ಅಂಗಡಿ ಬಂದ್ ಮಾಡಿಸಿದ ನಾರಿಮಣಿಯರು..!