ಉಪ್ಪಿ ಯುಐ ಸಿನಿಮಾ ಹಾಡಿನಲ್ಲಿ ಟ್ರೋಲ್ ಸಾಹಿತ್ಯ..! ಟ್ರೋಲರ್ಸ್‌ನನ್ನೇ ಟ್ರೋಲ್ ಮಾಡಿದ ರಿಯಲ್ ಸ್ಟಾರ್!

ಉಪ್ಪಿ ಯುಐ ಸಿನಿಮಾ ಹಾಡಿನಲ್ಲಿ ಟ್ರೋಲ್ ಸಾಹಿತ್ಯ..! ಟ್ರೋಲರ್ಸ್‌ನನ್ನೇ ಟ್ರೋಲ್ ಮಾಡಿದ ರಿಯಲ್ ಸ್ಟಾರ್!

Published : Mar 07, 2024, 09:44 AM IST

ಈಗ ಸೋಷಿಯಲ್ ಮೀಡಿಯಾ ಟ್ರೆಂಡ್.. ಇಲ್ಲಿ ಏನು ಅಲ್ಲದವರು ರಾತ್ರೋ ರಾತ್ರಿ ಸ್ಟಾರ್ ಆಗ್ತಾರೆ. ಸ್ಟಾರ್ ಆಗಿದ್ದವರು ನೈಟ್ ನೈಟೇ ವಿಲನ್ ತರ ಕಾಣೋಕೆ ಶುರುವಾಗ್ತಾರೆ. ಇದೆಲ್ಲಾ ಸೋಷಿಯಲ್ ಮೀಡಿಯಾ ವರ ಪ್ರಸಾದ. ಸದ್ಯ ಉಪೇಂದ್ರ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಹಾಗೂ ಟ್ರೋಲ್ ಆದ ವಿಷಯಗಳನ್ನೇ ಇಟ್ಟುಕೊಂಡು ಯುಐ ಸಿನಿಮಾಗೆ ಸ್ಪೆಷಲ್ ಸಾಂಗ್ ಮಾಡಿದ್ದಾರೆ. 

ಯುಐ.. ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದಲ್ಲಿ ಸಿದ್ಧವಾಗುತ್ತಿರೋ ರಾಯಲ್ ಸಿನಿಮಾ. ಈ ಸಿನಿಮಾ ಸ್ಯಾಂಪಲ್‌ಗಳು ಯುಐ(UI Movie) ಬಗ್ಗೆ ಈಗಾಗಲೇ ಟಾಕ್ ಎಬ್ಬಿಸಿವೆ. ಉಪ್ಪಿ ಡಿಫ್ರೆಂಟ್ಗೆ ಡಿಫ್ರೆಂಟ್ ಅಂತ ಮತ್ತೆ ಸಾರಿವೆ. ಇದೀಗ ಯುಐನ ಟ್ರೋಲ್ ಸಾಂಗ್ ಹೊಸ ಟ್ರೆಂಡ್ ಎಬ್ಬಿಸಿದೆ. ಸೋಷಿಯಲ್ ಮಾಡಿಯಾದಲ್ಲಿ ಟ್ರೋಲ್(Troll) ಆದವರನ್ನೇ ಇಟ್ಟುಕೊಂಡು ಈ ಸಾಂಗ್ ಮಾಡಲಾಗಿದೆ. ಉಪ್ಪಿ(Upendra) ಹಾಡುಗಳಲ್ಲಿ ಸಾಹಿತ್ಯ ಸಖತ್ತಾಗಿರುತ್ತೆ. ಸಮಾಜದಲ್ಲಿ ನಡೆಯೋ ಕತೆಗಳನ್ನೇ ಸಿನಿಮಾದ ಸ್ಟೋರಿ ಮಾಡಿ ಹಾಡಿನಲ್ಲೂ ಅದನ್ನ ಹೇಳೋ ಚಾತಿ ಉಪ್ಪಿಯದ್ದು, ಅದಕ್ಕೆ ಅವರನ್ನ ರಿಯಲ್ ಸ್ಟಾರ್ ಅಂತ ಕರೆದಿದ್ದು. ಅಷ್ಟೆ ಅಲ್ಲ ಉಪ್ಪಿಗೆ ಟ್ರೆಂಡ್ ಸೆನ್ಸ್ ತುಂಬಾ ಸೂಪರ್ ಆಗಿದೆ. ಹೀಗಾಗೆ ಸೂಪರ್ ಅನ್ನೋ ಸಿನಿಮಾ ಮಾಡಿದ್ರು. ಈಗ ಟ್ರೆಂಡ್ ಅಂದ್ರೆ ಟ್ರೋಲ್. ಹೀಗಾಗಿ ಸೋಶಿಯಲ್ ಮೀಡಿಯಾದ ಟ್ರೋಲ್ ಆದ ವಿಚಾರಗಳನ್ನೇ ತನ್ನ ಹಾಡಿನ ಸಾಹಿತ್ಯ ಮಾಡಿ ಸಾಂಗ್ ಬಿಟ್ಟಿದ್ದಾರೆ ಉಪೇಂದ್ರ. ‘ಟ್ರೋಲ್ ಆಗತ್ತೆ ಇದು ಟ್ರೋಲ್ ಆಗತ್ತೆ.. ಇನ್ಸ್ಟಾದಲ್ಲಿ ತುಂಬ ರೀಲ್ಸ್ ಆಗತ್ತೆ. ಕೆಲ್ಸ ಇಲ್ಲದವ್ರಿಗೆ ಟೈಮ್ ಪಾಸ್ ಆಗತ್ತೆ.. ಎಂದು ಶುರುವಾಗುವ ಹಾಡಿನಲ್ಲಿ ರೀಷ್ಮಾ ನಾಣಯ್ಯ ಬಿಂದಾಸ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಬೆಳ್ಳುಳ್ಳಿ ಕಬಾಬ್, ಒನ್ ಮೋರ್ ಒನ್ ಮೋರ್, ಸಮುಲತಾ ಅವರ ಜೋಡೆತ್ತು ಕಥೆಯಿಂದ ಹಿಡಿದು ಹೆಂಗ್ ಪುಂಗ್ ಲಿ, ಆಲ್ ರೈಟ್ ಮುಂದಕ್ಕೆ ಹೋಗೋಣ ಎಂಬಿತ್ಯಾದಿ ಟ್ರೋಲ್ ಸಾಲುಗಳು ಹಾಡಿನಲ್ಲಿವೆ. 

ಇದನ್ನೂ ವೀಕ್ಷಿಸಿ:  Today Horoscope: ಬುಧ ನೀಚ ಸ್ಥಾನಕ್ಕೆ ಹೋಗುತ್ತಿದ್ದು, ಇದರಿಂದ ಯಾವ ರಾಶಿಯವರಿಗೆ ಶುಭ-ಅಶುಭ ?

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more