ಬುಡಕಟ್ಟು ಜನಾಂಗ v/s ರಾಕ್ಷಸನ ಕಥೆಯುಳ್ಳ ‘ಕೋರ’ ಚಿತ್ರಕ್ಕೆ ಸ್ಟಾರ್ ಸುನಾಮಿ ಕಿಟ್ಟಿ ನಾಯಕ!

Jan 9, 2025, 4:08 PM IST

ರಿಯಾಲಿಟಿ ಶೋಗಳಲ್ಲಿ ಸುನಾಮಿ ಪರ್ಫಾರ್ಮೆನ್ಸ್ ನೀಡಿ ಫೇಮಸ್ ಆದ ಸುನಾಮಿ ಕಿಟ್ಟಿ ಈಗ ನಾಯಕನಟನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾನೆ. ಕಿಟ್ಟಿ ನಟನೆಯ ವಿಭಿನ್ನ ಕಥಾಹಂದರದ ಕೋರ ಸಿನಿಮಾ ಟ್ರೈಲರ್ ರಿಲೀಸ್ ಆಗಿದ್ದು, ತನ್ನ ಕಂಟೆಂಟ್ ಮತ್ತು ಮೇಕಿಂಗ್​ನಿಂದ ಸದ್ದು ಮಾಡ್ತಾ ಇದೆ.ರತ್ನಮ್ಮ‌ ಮೂವೀಸ್ ಲಾಂಛನದಲ್ಲಿ ಪಿ.ಮೂರ್ತಿ ನಿರ್ಮಿಸಿರುವ ಈ ಸಿನಿಮಾಗೆ ಒರಟ ಶ್ರೀ ಆಕ್ಷನ್ ಕಟ್ ಹೇಳಿದ್ದು, ಕನ್ನಡದ ಜೊತೆಗೆ ತಮಿಳು, ತೆಲಗಿನಲ್ಲೂ ಸಿನಿಮಾ ಮೂಡಿಬಂದಿದೆ. ಆದಿವಾಸಿ ಬುಡಕಟ್ಟು ಜನಾಂಗ ಹಾಗೂ ರಾಕ್ಷಸನೊಬ್ಬನ‌ ಕುರಿತಾದ ಕಥೆಯಿರೋ ಈ ಸಿನಿಮಾದ   ಹೆಚ್ಚಿನ ಭಾಗದ ಚಿತ್ರೀಕರಣ ಕಾಡಿನಲ್ಲೇ ನಡೆದಿದೆ.‌  ಕಿಟ್ಟಿ ಜೊತೆ ನಾಯಕಿಯಾಗಿ  ಚರಿಷ್ಮಾ ನಟಿಸಿದ್ದು,   ಎಂ.ಕೆ.ಮಠ, ಮುನಿ, ನೀನಾಸಂ ಅಶ್ವಥ್,  ಯತಿರಾಜ್, ಸೌಜನ್ಯ ಚಿತ್ರದ ತಾರಾಗಣದಲ್ಲಿದ್ದಾರೆ. ಟ್ರೈಲರ್ ಮೂಲಕ ಸದ್ದು ಮಾಡಿರೋ ಈ ಸಿನಿಮಾ ಸದ್ಯದಲ್ಲೇ ಥಿಯೇಟರ್ ಅಂಗಳಕ್ಕೆ ಬರೋ ತಯಾರಿಯಲ್ಲಿದೆ.

ಬಿಗ್ ಬಾಸ್ ಗೌತಮಿ ಬಾಯಲ್ಲಿ ಪದೇ ಪದೇ ಕೇಳಿ ಬರುವ ವನದುರ್ಗ ದೇವಿ ಎಲ್ಲಿದೆ? ಅದ್ಭುತ ಪವಾಡಗಳ ಸ್ಥಳವಿದು