Banaras: ಝೈದ್ ಖಾನ್ ಬನಾರಸ್‌ಗೆ ಸಿಕ್ತು ಲಕ್ಕಿ ಹ್ಯಾಂಡ್ ಸಪೋರ್ಟ್!

Banaras: ಝೈದ್ ಖಾನ್ ಬನಾರಸ್‌ಗೆ ಸಿಕ್ತು ಲಕ್ಕಿ ಹ್ಯಾಂಡ್ ಸಪೋರ್ಟ್!

Published : Sep 28, 2022, 12:08 PM IST

ವೆಲ್ ಕಮ್ ಟು ಬನಾಸರ್. ನಿಮ್ಗೆಲ್ಲಾ ಬನಾಸರ್ ಊರಿಗೆ ಸ್ವಾಗತ. ಈ ಬನಾರಸ್ ಲೋಕ ಹೇಗಿದೆ ಅಂತ ತೋರಿಸೋಕೆ ಬನಾರಸ್‌ನ ಟ್ರೈಲರ್ ರಿಲೀಸ್ ಆಗಿದೆ. ಚಾಮರಾಜಪೇಟೆ ಶಾಸಕ ಜಮೀರ್ ಖಾನ್ ಸುಪುತ್ರ ಝೈದ್ ಖಾನ್ ಬೆಳ್ಳಿತೆರೆಗೆ ಪದಾರ್ಪಣೆ ಮಡುತ್ತಿರೋ ಸಿನಿಮಾ ಬನಾಸರ್. 

ವೆಲ್ ಕಮ್ ಟು ಬನಾಸರ್. ನಿಮ್ಗೆಲ್ಲಾ ಬನಾಸರ್ ಊರಿಗೆ ಸ್ವಾಗತ. ಈ ಬನಾರಸ್ ಲೋಕ ಹೇಗಿದೆ ಅಂತ ತೋರಿಸೋಕೆ ಬನಾರಸ್‌ನ ಟ್ರೈಲರ್ ರಿಲೀಸ್ ಆಗಿದೆ. ಚಾಮರಾಜಪೇಟೆ ಶಾಸಕ ಜಮೀರ್ ಖಾನ್ ಸುಪುತ್ರ ಝೈದ್ ಖಾನ್ ಬೆಳ್ಳಿತೆರೆಗೆ ಪದಾರ್ಪಣೆ ಮಡುತ್ತಿರೋ ಸಿನಿಮಾ ಬನಾಸರ್. ಸಿನಿಮಾದ ಟ್ರೈಲರ್‌ನಲ್ಲಿ ಹ್ಯಾಂಡ್ಸಮ್ ಹಂಕ್ನಂತೆ ಕಾಣೋ ಝೈದ್ ಐ ಡೋಂಟ್ ಲೈಕ್ ವೈಲೆನ್ಸ್ ಅಂತ ಡೈಲಾಗ್ ಹೊಡೆದು ಆ್ಯಕ್ಷನ್ ಮಾಡುತ್ತಾ. ನಾನು ಲವರ್ ಬಾಯ್ ಕೂಡ ಹೌದು ಅಂತ ಹೇಳಿದ್ದಾರೆ. ಝೈದ್ ಖಾನ್ ಬನಾಸರ್ ಸಿನಿಮಾಗೆ ಸ್ಯಾಂಡಲ್‌ವುಡ್‌ನ ಲಕ್ಕಿ ಹ್ಯಾಂಡ್ ಅಂತ ಕರೆಸಿಕೊಳ್ಳೋ ಕ್ರೇಜಿಸ್ಟಾರ್ ರವಿಚಂದ್ರನ್ ಸಪೋರ್ಟ್ ಸಿಕ್ಕಿದೆ. 

ಬನಾರಸ್‌ನ ಟ್ರೈಲರ್‌ನ ರವಿಚಂದ್ರನ್ ರಿಲೀಸ್ ಮಾಡಿ ಝೈದ್ ಖಾನ್ ನಟನೆಗೆ ಭೇಷ್ ಅಂದ್ರು, ಅಷ್ಟೆ ಅಲ್ಲ ಈ ಸಿನಿಮಾದ ಹೀರೋಯಿನ್ ಸೋನಾಲ್ ಮೊಂಟೆರೊಗೆ ನನ್ನ ಸಿನಿಮಾದಲ್ಲಿ ನಟಿಸು ಅಂದ್ರೆ ಈ ಹುಡ್ಗಿ ಒಪ್ಪಲಿಲ್ಲ. ಈಗ ಬನಾಸರ್ ಮಾಡಿದ್ದಾಳೆ ಅಂತ ಕಿಚಾಯಿಸಿದ್ರು. ಟ್ರೈಲರ್ ರಿಲೀಸ್‌ಗೆ ಬಾಲಿವುಡ್ನಿಂದ ಚೀಫ್ ಗೆಸ್ಟ್ ಆಗಿ ಬಂದಿದ್ದ ಸಲ್ಮಾನ್ ಖಾನ್ ಬ್ರದರ್ ಅರ್ಬಾಜ್ ಖಾನ್ ಹಿಂದಿ ಟ್ರೈಲರ್ ಬಿಡುಗಡೆ ಮಾಡಿದರು. ಉತ್ತರ ಪ್ರದೇಶದ ವಾರಣಾಸಿಯ ಹಳೇ ಹೆಸರು ಬನಾರಸ್. ಈ ಟೈಟಲ್‌ನಲ್ಲೇ ನಿರ್ದೇಶಕ ಜಯತೀರ್ಥ ಅದ್ಭುತ ಸ್ಟೋರಿ ಕಟ್ಟಿದ್ದು, ಆ ಸ್ಟೋರಿಯಲ್ಲಿ ಜಮೀರ್ ಪುತ್ರನನ್ನ ನಾಯಕನ್ನಾಗಿ ಮಾಡಿದ್ದಾರೆ. ನಾಯಕಿಯಾಗಿ ಸೋನಾಲ್ ಮೊಂಟೆರೊ ನಟಿಸಿದ್ದು, ಈ ಪೇರ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲು ರೆಡಿಯಾಗಿದೆ. 

ಯಶ್- ಸುದೀಪ್‌ ಮರ್ಸಿಡಿಸ್‌ ಬೆಂಜ್ ನಾನು ಕೇವಲ ಮಾರುತಿ ವ್ಯಾನ್: ಝೈದ್ ಖಾನ್

ಬನಾರಸ್ ಕನ್ನಡ ಹಿಂದಿ ತೆಲುಗು, ತಮಿಳು, ಮಲೆಯಾಳಂ, ತೆಲುಗುನಲ್ಲಿ ತೆರೆ ಕಾಣುತ್ತಿದೆ. ಕಾವೇರಿಯಿಂದ ಗಂಗಾ ನದಿಗೆ ಕನೆಕ್ಟ್ ಆಗುವಂತಹ ಕಥೆಯನ್ನ ಜಯತೀರ್ಥ ಈ ಸಿನಿಮಾದಲ್ಲಿ ತೋರಿಸುತ್ತಿದ್ದಾರಂತೆ. ಬನಾಸರ್ ಸಿನಿಮಾದಿಂದ ಝೈದ್ ಖಾನ್ ತಮ್ಮ ಮೊದಲ ಹೆಜ್ಜೆಯಲ್ಲೇ ಪ್ಯಾನ್ ಇಂಡಿಯಾ ಹೀರೋ ಆಗೋಕೆ ಹೊರಟಿದ್ದಾರೆ. ಸಿದ್ಧ್ ಅನ್ನೋ ಪಾತ್ರದಲ್ಲಿ ಝೈದ್ ಖಾನ್ ಗಗನಯಾತ್ರಿ ಹಾಗೂ ಟೈಮ್ ಟ್ರಾವೆಲರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬನಾರಸ್ ಬೀದಿಯಲ್ಲಿ ಸುತ್ತುತ್ತಾ ಸೋನಾಲ್ ಮೊಂಟೆರೊ ಪ್ರೀತಿಯಲ್ಲಿ ಬೀಳೋ ಝೈದ್ ಕೊನೆಗೆ ಟೈಮ್ ಟ್ರವೆಲರ್ ಆಗಿ ಕಾಣಿಸಿಕೊಂಡಿದ್ದಾರೆ. ಬನಾರಸ್ ಸಿನಿಮಾಗೆ ಅಜನೀಶ್ ಲೋಕನಾಥ್ ಮ್ಯೂಸಿಕ್ ಮಾಡಿದ್ದಾರೆ. ತಿಲಕ್ ರಾಜ್ ಬಲ್ಲಾಳ್ ಬಂಡವಾಳ ಹೂಡಿರೋ ಬನಾರಸ್ ಸಿನಿಮಾದ 90ರಷ್ಟು ಶೂಟಿಂಗ್ ವಾರಣಾಸಿಯಲ್ಲೇ ಆಗಿದೆ. ನೆವೆಂಬರ್ನಲ್ಲಿ ಈ ಕಲರ್‌ಫುಲ್ ಲವ್, ಸಸ್ಪೆನ್ಸ್ ಸ್ಟೋರಿಯ ಬನಾರಸ್ ತೆರೆಗೆ ಬರಲಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more