ಹುಲಿ ಕುಣಿತದಲ್ಲಿ ಡ್ಯಾನ್ಸ್ ಕಿಂಗ್ ಕಮಾಲ್: ಶಿವಣ್ಣನ ಜತೆ ಪ್ರಭುದೇವ ಮಸ್ತ್ ಡ್ಯಾನ್ಸ್‌ !

ಹುಲಿ ಕುಣಿತದಲ್ಲಿ ಡ್ಯಾನ್ಸ್ ಕಿಂಗ್ ಕಮಾಲ್: ಶಿವಣ್ಣನ ಜತೆ ಪ್ರಭುದೇವ ಮಸ್ತ್ ಡ್ಯಾನ್ಸ್‌ !

Published : Oct 12, 2023, 09:38 AM IST

ಪ್ರಭುದೇವ.. ಇಂಡಿಯನ್ ಸಿನಿಮಾ ಜಗತ್ತಿನ ಡ್ಯಾನ್ಸ್ ಕಿಂಗ್. ಇವ್ರು ಡಾನ್ಸ್ ಮಾಡೋಕೆ ನಿಂತ್ರೆ ಮುಗೀತು. ಡಾನ್ಸ್ ಪ್ರೀಯರ ನರ ನಾಡಿಯೆಲ್ಲಾ ಆ್ಯಕ್ಟೀವ್. ಶಿಳ್ಳೆ ಚಪ್ಪಾಳೆಗಳ ಸುರಿಮಳೆ. ಅಂತಹ ಅದ್ಭುತ ಡ್ಯಾನ್ಸ್ ಲೆಜೆಂಡ್ ಪ್ರಭುದೇವ.

ಇಂಡಿಯನ್ ಮೈಕಲ್ ಜಾಕ್ಸನ್ ಹುಲಿ ಕುಣಿತ ಮಾಡಿದ್ರೆ ಹೇಗ್ ಇರುತ್ತೆ ಹೇಳಿ. ಅದರ ಮಜಾ ಬೇರೆ ಲೆವ್ನಲ್ಲೇ ಇರುತ್ತೆ ಅಲ್ವಾ. ಯೆಸ್, ಡಾನ್ಸ್ ಕಿಂಗ್ ಪ್ರಭುದೇವ ಬಗ್ಗೆ ಇಷ್ಟೆಲ್ಲಾ ಹೇಳೋಕೆ ಕಾರಣ ಇದೇ ಹುಲಿ ಕುಣಿತಾ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್‌ರ(Shivarajkumar) ಸಾರಥ್ಯದ ಡಾನ್ಸ್ ಕರ್ನಾಟಕ ಡಾನ್ಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ನಮ್ಮ ಮೈಕಲ್ ಜಾಕ್ಸಸ್ ಪ್ರಭುದೇವ(Prabhudev) ಶಿವಣ್ಣನ ಜತೆ ಹುಲಿ ಡಾನ್ಸ್(Tiger Dance) ಮಾಡಿದ್ದಾರೆ. ಹುಲಿ ಕುಣಿತ ಅಂದ್ರೆ ಕೈ ಎತ್ತಿ ಡಾನ್ಸ್ ಮಾಡೋದಷ್ಟೆ ಅಲ್ಲ, ಹುಲಿ ಡಾನ್ಸ್ ನಲ್ಲಿ ಕೈ ಕಾಲು ಎರಡನ್ನೂ ಅಟ್ ಎ ಟೈಂ ಕುಣಿಸಬೇಕು. ಈ ಪ್ರಾಪರ್ ಹುಲಿ ಡಾನ್ಸ್ ಮಾಡಿದ್ದಾರೆ ಪ್ರಭುದೇವ. ಸ್ಯಾಂಡಲ್‌ವುಡ್‌ನಲ್ಲಿ(Sandalwood) ಹುಲಿ ಡ್ಯಾನ್ಸ್‌ಗೆ ಒಂದು ರೇಂಜ್‌ನ ಕ್ರೇಜ್ ತಂದಿದ್ದು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ಆ ಕ್ರೇಜ್‌ನನ್ನ ಮತ್ತಷ್ಟು ಹೈ ಮಾಡಿದ್ದು ರಾಜ್ ಬಿ ಶೆಟ್ಟಿ. ಇಂದಿಗೂ ಹೋದಲ್ಲಿ ಬಂದಲ್ಲಿ ಹುಲಿ ಡಾನ್ಸ್ ಮಾಡಿ ಫುಲ್ ಮಾಸ್ತಿ ಮಾಡ್ತಾರೆ ಈ ಕಿಲಾಡಿ ಜೋಡಿ. ಈಗ ಹುಲಿ ಡಾನ್ಸ್ನ ಮೈಕಲ್ ಜಾಕ್ಸನ್ ಪ್ರಭುದೇವ ಕೂಡ ಒಂದೇ ಟೇಕ್‌ನಲ್ಲಿ ನೋಡಿ ಕಲಿತಿದ್ದಾರೆ. ಡಾನ್ಸ್ ಕರ್ನಾಟಕ ಡ್ಯಾನ್ಸ್‌ನ ಕಂಟೆಸ್ಟೆಂಟ್‌ಗಳು ಮಾಡಿದ ಡಾನ್ಸ್ಅನ್ನ ನೋಡ್ಕೊಂಡ ಪ್ರಭುದೇವ ಒಂದೇ ಟೇಕ್‌ನಲ್ಲಿ ಹುಲಿ ಕುಣಿತ ಮಾಡಿದ್ದು ಅಲ್ಲಿದ್ದವರಿಗೆ ಆಶ್ಚರ್ಯ ತರಿಸಿದೆ.

ಇದನ್ನೂ ವೀಕ್ಷಿಸಿ:  ಇಸ್ರೇಲ್ ಇತಿಹಾಸದಲ್ಲೇ ಕಂಡರಿಯದ ದುರಂತ! ಉಗ್ರರ ಗಾಜಾ ಪಟ್ಟಿ ಸರ್ವನಾಶ ಮಾಡುತ್ತಾ ಇಸ್ರೇಲ್ ?

24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್