ಒಂದೇ ದಿನ ತೆರೆ ಮೇಲೆ ದರ್ಬಾರ್ ಮಾಡ್ತಾರೆ 'ತ್ರಿ' ಸ್ಟಾರ್ಸ್.!

ಒಂದೇ ದಿನ ತೆರೆ ಮೇಲೆ ದರ್ಬಾರ್ ಮಾಡ್ತಾರೆ 'ತ್ರಿ' ಸ್ಟಾರ್ಸ್.!

Published : Nov 24, 2023, 08:37 PM IST

ರಾಜ್ ಬಿ ಶೆಟ್ಟಿ.. ಸ್ಯಾಂಡಲ್ವುಡ್ ಬಾಕ್ಸಾಫೀಸ್ಅನ್ನ ಸೈಲೆಂಟ್ಗೇ ದೋಚೋ ಬೆಸ್ಟ್ ಆ್ಯಕ್ಟರ್.. ಡಾರ್ಲಿಂಗ್ ಕೃಷ್ಣ.. ಲವ್ ನಲ್ಲಿ ನಿಮ್ಮನ್ನ ಲಾಕ್ ಮಾಡಿ ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆಯೋ ಹೀರೋ.. ಇನ್ನು ಅಭಿಷೇಕ್ ಅಂಬರೀಶ್.. ರೆಬೆಲ್ ಆಗಿ ಬಂದು ದರ್ಬಾರ್ ಮಾಡೋ ಸ್ಟಾರ್ ಕಿಡ್..

ರಾಜ್ ಬಿ ಶೆಟ್ಟಿ.. ಸ್ಯಾಂಡಲ್ವುಡ್ ಬಾಕ್ಸಾಫೀಸ್ಅನ್ನ ಸೈಲೆಂಟ್ಗೇ ದೋಚೋ ಬೆಸ್ಟ್ ಆ್ಯಕ್ಟರ್.. ಡಾರ್ಲಿಂಗ್ ಕೃಷ್ಣ.. ಲವ್ ನಲ್ಲಿ ನಿಮ್ಮನ್ನ ಲಾಕ್ ಮಾಡಿ ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆಯೋ ಹೀರೋ.. ಇನ್ನು ಅಭಿಷೇಕ್ ಅಂಬರೀಶ್.. ರೆಬೆಲ್ ಆಗಿ ಬಂದು ದರ್ಬಾರ್ ಮಾಡೋ ಸ್ಟಾರ್ ಕಿಡ್.. ಈಗ ರಾಜ್ ಬಿ ಶೆಟ್ಟಿ, ಡಾರ್ಲಿಂಗ್ ಕೃಷ್ಣ, ಅಭಿಶೇಕ್ ಅಂಬರೀಶ್ ಒಂದೇ ದಿನ ಬೆಳ್ಳಿತೆರೆ ಮೇಲೆ ದರ್ಬಾರ್ ಮಾಡೋಕೆ ಬರ್ತಿದ್ದಾರೆ. ಸ್ಯಾಂಡಲ್ವುಡ್ನ ಭರವಸೆಯ ಸ್ಟಾರ್ಸ್ ರಾಜ್ ಬಿ ಶೆಟ್ಟಿ, ಅಭಿಷೇಕ್ ಅಂಬರೀಶ್, ಹಾಗು ಡಾರ್ಲಿಂಗ್ ಕೃಷ್ಣ  ಸಿನಿಮಾಗಳಿಗೆ ಮಾರ್ಕೆಟ್ನಲ್ಲಿ ಭಾರಿ ಭೇಡಿಕೆ ಇದೆ. ಈ ಮಾರ್ಕೆಟ್ನಲ್ಲಿ ಈಗ ಗೆಲ್ಲೋದ್ಯಾರು ಅನ್ನೋದೆ ಕುತೂಹಲ. ಯಾಕಂದ್ರೆ ರಾಜ್ ಬಿ ಶೆಟ್ಟಿ ನಟಿಸಿ ನಿರ್ದೇಶಿಸಿರೋ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಟ್ರೈಲರ್ನಿಂದಲೇ ನಿರೀಕ್ಷೆ ಹೆಚ್ಚಿಸಿದೆ. 

ರಮ್ಯಾ ನಿರ್ಮಾಣ ಮಾಡಿರೋ ಈ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿಗೆ ಸಿರಿ ರವಿ ಕುಮಾರ್ ನಾಯಕಿಯಾಗಿದ್ದಾರೆ. ಇನ್ನು ಶುಗರ್ ಫ್ಯಾಕ್ಟರಿ. ದೀಪಕ್ ಅರಸ್ ನಿರ್ದೇಶನದ ಸಿನಿಮಾದಲ್ಲಿ ಯುತ್ಫುಲ್ ಸ್ಟೋರಿ ಇದೆ. ಈಗಿನ ಪಬ್ ಕಲ್ಚರ್ ಸುತ್ತ ಕತೆ ಹೆಣೆದಿರೋ ನಿರ್ದೇಶಕ ದೀಪಕ್ ಅರಸ್, ಡಾರ್ಲಿಂಗ್ ಕೃಷ್ಣ ಹಿಂದೆಂದೂ ಮಾಡದ ಪಾತ್ರದಲ್ಲಿ ತೋರಿಸಿದ್ದಾರೆ. ಕೃಷ್ಣ ಇಲ್ಲಿ ಸೋನಲ್ ಮಂಥೋರ, ಅದ್ವಿತ ಶೆಟ್ಟಿ, ರುಹಾನಿ ಶೆಟ್ಟಿ ನಟಿಸಿದ್ದಾರೆ. ಅಭಿಷೇಕ್ ಅಂಬರೀಸ್ ನಟನೆಯ ಬ್ಯಾಡ್ ಮ್ಯಾನರ್ಸ್ ಸಿನಿಮಾ ಕೂಡ ನಾಳೆ ತೆರೆ ಕಾಣುತ್ತಿದೆ. ಸುಕ್ಕ ಸೂರಿ ನಿರ್ದೇಶನದ ಈ ಸಿನಿಮಾದಲ್ಲಿ ಅಭಿ ಟಫ್ ಪೊಲೀಸ್ ಕಾಪ್ ರೋಲ್ ಮಾಡಿದ್ದಾರೆ. ಸುದೀರ್ ನಿರ್ಮಾಣದ ಈ ಸಿನಿಮಾದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಹೀರೋಯಿನ್. ಚರಣ್ ರಾಜ್ ಮ್ಯೂಸಿಕ್ ಸಿನಿಮಾಗಿದೆ. ಸಿನಿಮಾ ರಾಜ್ಯದ 300 ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ. 

02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
Read more