Oct 28, 2023, 9:10 AM IST
ಟಗರು ಪಲ್ಯ ಸಿನಿಮಾ ಶುಕ್ರವಾರ ಬಿಡುಗಡೆಯಾಗಿದ್ದು, ಮೊದಲ ದಿನವೇ ಉತ್ತಮ ಓಪನಿಂಗ್ ಪಡೆದುಕೊಂಡಿದೆ. ಸಿನಿಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಬಂದಿದ್ದು, ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪುತ್ರಿ ಅಮೃತಾ ಪ್ರೇಮ್‌ರನ್ನು(Amrutha Prem) ನಟ ಲವ್ಲಿ ಸ್ಟಾರ್ ಪ್ರೇಮ್ ತಬ್ಬಿ ಕಣ್ಣೀರಿಟ್ಟಿದ್ದಾರೆ. 175 ಥಿಯೇಟರ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗಿದ್ದು, ಡಾಲಿ ಪಿಕ್ಚರ್ಸ್ ಬ್ಯಾನರ್‌ನಡಿ(Dolly Pictures Banner) ಮೂಡಿಬಂದ ಮೂರನೇ ಸಿನಿಮಾ ಇದಾಗಿದೆ. ಈ ಸಿನಿಮಾವನ್ನು ಹಲವಾರು ನಟ-ನಟಿಯರು ನೋಡಿ, ಚಿತ್ರವನ್ನು ಇಷ್ಟಪಟ್ಟಿದ್ದಾರೆ. ಸಿನಿ ಪ್ರೇಕ್ಷಕರು ರುಚಿ ರುಚಿಯಾದ ಟಗರು ಪುಲ್ಯ(Tagaru palya) ತಿಂದು ತೇಗಿದ್ದಾರೆ. ಅಪ್ಪಟ ಹಳ್ಳಿ ಸೊಗಡು, ಸೊಬಗು. ಹೊಟ್ಟೆ ಹುಣ್ಣಾಗುವಷ್ಟು ಕಾಮಿಡಿ. ಅಲ್ಲಲ್ಲಿ ಕಣ್ಣೀರು ತರಿಸೋ ಎಮೋಷನಲ್ ದೃಶ್ಯಗಳ ಹಾವಳಿ ಸಿನಿಮಾದಲ್ಲಿದೆ.
ಇದನ್ನೂ ವೀಕ್ಷಿಸಿ: ಡಾಲಿಯ 'ಟಗರು ಪಲ್ಯ' ರುಚಿ ಸವಿದ ಪ್ರೇಕ್ಷಕ: ಇಲ್ಲಿದೆ ನೋಡಿ ಸಿನಿಮಾ ರುಚಿಯಾದ ರಿವ್ಯೂ..!