Aug 2, 2023, 3:28 PM IST
ವಿಜಯ್ ಜೊತೆಗಿನ ‘ಸುರ’(Sura) ನನ್ನ ಕೆಟ್ಟ ಸಿನಿಮಾ ಎಂದು ತಮನ್ನಾ ಹೇಳಿದ್ದಾರೆ. ನಟಿ ತಮನ್ನಾ (Actress Tammanna) ಸಿನಿ ಜೀವನದಲ್ಲೇ ಅದು ಕೆಟ್ಟ ಸಿನಿಮಾವಂತೆ. ಇದಕ್ಕೆ ವಿಜಯ್ ಫ್ಯಾನ್ಸ್ ನಟಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತಮಿಳು ಯೂಟ್ಯೂಬ್ ಚಾನಲ್‌ಗೆ(Youtube channel) ನೀಡಿದ ಸಂದರ್ಶನವೊಂದರಲ್ಲಿ ನಟಿ ಈ ರೀತಿ ಹೇಳಿದ್ದಾರೆ. ಯೂಟ್ಯೂಬರ್ ನೀವು ನಟಿಸಿದ ಸಿನಿಮಾಗಳಲ್ಲಿ ನಿಮಗೆ ಇಷ್ಟವಾಗದಿರುವುದು ಯಾವುದು ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ನಟಿ 'ಸುರ' ಸಿನಿಮಾ ಎಂದು ಉತ್ತರ ನೀಡಿದ್ದಾರೆ. ನನಗೆ ಶೂಟಿಂಗ್ ವೇಳೆಯೇ ಸರಿಯಿಲ್ಲ ಎನಿಸಿತು. ಆದ್ರೂ ನಟಿಸಬೇಕಾಯಿತು ಎಂದು ನಟಿ ಹೇಳಿದ್ದಾರೆ. ತಮನ್ನಾ ಅವರ ಈ ಹೇಳಿಕೆ ದಳಪತಿ ವಿಜಯ್ ಅಭಿಮಾನಿಗಳಿಗೆ ಅಸಮಾಧಾನ ಉಂಟುಮಾಡಿದೆ. ಅಲ್ಲದೇ ಅವರು ನಾನಾ ರೀತಿ ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ವೀಕ್ಷಿಸಿ: ಇದು ಏಷ್ಯಾನೆಟ್ ಸುವರ್ಣ ನ್ಯೂಸ್ ಬಿಗ್ 3ಯ ಪವರ್: ಶಾಸಕರ ಮುಂದೆಯೇ ಕುಡಿಯುವ ನೀರಿನ ವ್ಯವಸ್ಥೆ..!