ಕೃಷ್ಣನ 'ಶುಗರ್ ಫ್ಯಾಕ್ಟರಿ'ಯಲ್ಲಿ ಒಂದು ರೌಂಡ್: ಸಿನಿಮಾದ ಮತ್ತೊಂದು ಸಾಂಗ್ ರಿಲೀಸ್..!

ಕೃಷ್ಣನ 'ಶುಗರ್ ಫ್ಯಾಕ್ಟರಿ'ಯಲ್ಲಿ ಒಂದು ರೌಂಡ್: ಸಿನಿಮಾದ ಮತ್ತೊಂದು ಸಾಂಗ್ ರಿಲೀಸ್..!

Published : Nov 03, 2023, 09:31 AM IST

ಈಗ ಸ್ಯಾಂಡಲ್‌ವುಡ್‌ನ ಲವ್ ಬಾಯ್ ಯಾರು ಅಂದ್ರೆ ಅದು ಡಾರ್ಲಿಂಗ್ ಕೃಷ್ಣ ಅಂತಾರೆ. ಯಾಕಂದ್ರೆ ಕೃಷ್ಣ ಲವ್ ಬಾಯ್ ಆಗಿ ಗೆದ್ದ ಸಿನಿಮಾಗಳು ಒಂದೇ ಎರಡೇ. ಮೊನ್ನೆ ಮೊನ್ನೆಯಷ್ಟೆ ಕೌಸಲ್ಯಾ ಸುಪ್ರಜಾ ರಾಮ ಅಂತ ಕೃಷ್ಣನ ಜಪ ಮಾಡಿದ್ದ ನೀವೆಲ್ಲಾ ಈಗ ಮತ್ತೆ ಡಾರ್ಲಿಂಗ್ ಕೃಷ್ಣ ಓಪನ್ ಮಾಡಿರೋ ಬರೀ ಪ್ರೀತಿಯೇ ತುಂಬಿರೋ ಶುಗರ್ ಫ್ಯಾಕ್ಟರಿಗೆ ಭೇಟಿ ಕೊಡೋ ಟೈಂ ಬಂದಿದೆ.
 

ಶುಗರ್ ಫ್ಯಾಕ್ಟರಿ.. ಸಿನಿ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟ ಆಗೋ ಸ್ವೀಟ್ ಕಮ್ ಹಾಟ್ ಕೇಕ್ ಅಂತ ಮೊನ್ನೆ ಮೊನ್ನೆ ಬಂದಿದ್ಧ ಶುಗರ್ ಫ್ಯಾಕ್ಟರಿ ಟ್ರೈಲರ್ ಹೇಳಿತ್ತು. ಟ್ರೈಲರ್ ನೋಡಿ ವಾರೆ ವಾವ್ಹ್ ಎಂದಿದ್ದವರು ಈಗ ಲವ್ ಟ್ರ್ಯಾಕ್ ನೋಡಿ ಖುಷಿ ಪಡುತ್ತಿದ್ದಾರೆ. ಡಾರ್ಲಿಂಗ್ ಕೃಷ್ಣನ(Darling Krishna'ಶುಗರ್ ಫ್ಯಾಕ್ಟರಿ'ಯಲ್ಲಿ (Sugar Factory movie) ಏನ್ ಆಗ್ತಿದೆ ಅಂತ ನೋಡ್ಕೋಂಡ್ ಬರೋಕೆ ಒಂದು ರೌಂಡ್ ಹೋದವರಿಗೆ ಶುಗರ್ ಫ್ಯಾಕ್ಟರಿ ಮತ್ತೊಂದು ಸಾಂಗ್ ಸಿಕ್ಕಿದೆ. ಶುಗರ್ ಫ್ಯಾಕ್ಟರಿ ಸಿಹಿಯಾದ ಪ್ರೀತಿಯ ಮಾಧೂರ್ಯ ತುಂಬಿರೋ ಚಿತ್ರ. ಯುತ್ಸ್‌ಗೆ ಅದ್ಯಾವಾಗ ಯಾರ್ ಮೇಲೆ ಹೇಗೆ ಲವ್ ಆಗುತ್ತೋ ಗುತ್ತಾಗಲ್ಲ. ಅಂತಹ ಕಥೆಯನ್ನ ಶಾರ್ಟ್ ಆ್ಯಂಡ್ ಸ್ವೀಟ್ ಆಗಿ ಕಟ್ಟಿಕೊಡೋ ಸಿನಿಮಾ ಶೂಗರ್ ಫ್ಯಾಕ್ಟರಿ. ಕಥೆಗೆ ತಕ್ಕಂತೆ ಈ ಹಾಡು ಕ್ರಿಯೆಟ್ ಆಗಿದೆ. ನಟ ಕೃಷ್ಣ ಹಣೆಯ ಬರಹ ಏನು ಅರಿಯದಾಗಿದೆ ಅಂತ ಹಾಡಿದ್ದಾರೆ. ದೀಪಕ್ ಅರಸ್ ನಿರ್ದೇಶನದ ಶುಗರ್ ಫ್ಯಾಕ್ಟರಿ ಈಗಿನ ಟ್ರೆಂಡ್, ಜಮಾನದ ಯೂತ್‌ಫುಲ್. ಹೀಗಾಗಿ ಅದಕ್ಕೆ ತಕ್ಕಂತೆ ಈ ಹಾಡು ಮೂಡಿ ಬಂದಿದೆ. ಕಬೀರ್ ರಫಿ ಮ್ಯೂಸಿಕ್ ಮಾಡಿರೋ ಹಾಡಿಗೆ ಅರ್ಮಾನ್ ಮಲ್ಲಿಕ್ ಧ್ವನಿಯಾಗಿದ್ದಾರೆ. ಬನಾರಸ್ ಚೆಲುವೆ ಸೋನಲ್ ಮಂಥೋರೋ, ರುಹಾನಿ ಶೆಟ್ಟಿ, ಅಧ್ವಿತಿ ಶೆಟ್ಟಿ ಶುಗರ್ ಫ್ಯಾಕ್ಟರಿಯಲ್ಲಿ ಕೃಷ್ಣನ ಪ್ರೀತಿಗೆ ಮರುಳಾಗಲಿದ್ದಾರೆ. ಈ ಬ್ಯಟಿಫುಲ್ ಸಿನಿಮಾವನ್ನ ಗಿರೀಶ್ ನಿರ್ಮಿಸಿದ್ದು, ನವೆಂಬರ್ 24ಕ್ಕೆ ಶುಗರ್ ಫ್ಯಾಕ್ಟರಿ ರಿಲೀಸ್ ಆಗ್ತಿದೆ. 

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರು ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಿ..ಆದಿತ್ಯ ಹೃದಯ ಪಠಿಸಿ

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
Read more