‘ಬಾ ಬಾ ಬ್ಲಾಕ್ ಶೀಪ್ ಎಂದು ಮಚ್ಚು ಹಿಡಿದು ಬಂದ ಕಿಚ್ಚ ! ಕಿಕ್ ಕೊಟ್ಟ ಮ್ಯಾಕ್ಸ್ ಟೀಸರ್..ಫ್ಯಾನ್ಸ್‌ಗೆ 'max'imum' ಹಬ್ಬ!

‘ಬಾ ಬಾ ಬ್ಲಾಕ್ ಶೀಪ್ ಎಂದು ಮಚ್ಚು ಹಿಡಿದು ಬಂದ ಕಿಚ್ಚ ! ಕಿಕ್ ಕೊಟ್ಟ ಮ್ಯಾಕ್ಸ್ ಟೀಸರ್..ಫ್ಯಾನ್ಸ್‌ಗೆ 'max'imum' ಹಬ್ಬ!

Published : Jul 17, 2024, 09:30 AM ISTUpdated : Jul 17, 2024, 09:31 AM IST

ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾದ ಟೀಸರ್ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಿದೆ. ‘ಬಾ ಬಾ ಬ್ಲಾಕ್ ಶೀಪ್’ ಎಂದು ಸುದೀಪ್ ಇಂಗ್ಲೀಷ್‌ರೈಮ್ಸ್ ಅನ್ನು ಕೊಂಚ ಬದಲಿಸಿ ಹೇಳುವುದರೊಂದಿಗೆ ಟೀಸರ್ ಶುರುವಾಗುತ್ತೆ. ಕಿಚ್ಚನ ಖಡಕ್ ವಾಯ್ಸ್ ಮತ್ತಷ್ಟು ಕಿಕ್ ಕೊಡುತ್ತದೆ. 

ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಮ್ಯಾಕ್ಸ್'(Max movie) ನಿರ್ಮಾಣವಾಗುತ್ತಿದೆ. ಜಬರ್ದಸ್ತ್‌ ಆಕ್ಷನ್ ಎಪಿಸೋಡ್ ಮಿಕ್ಸ್ ಮಾಡಿ ಟೀಸರ್(Teaser) ಕಟ್ ಮಾಡಲಾಗಿದೆ. ನಾಯಕ ನಾಯಕಿ, ವಿಲನ್ ಎನ್ನುವ ರೊಟೀನ್ ಸಬ್ಜೆಕ್ಟ್ ಕೈ ಬಿಟ್ಟಿರೋ ಮ್ಯಾಕ್ಸ್ ವಿಭಿನ್ನವಾಗಿ ಕಥೆ ಹೇಳುತ್ತಿರೋದು ಗೊತ್ತಾಗುತ್ತಿದೆ. ನೆಗೆಟಿವ್ ರೋಲ್‌ನಲ್ಲಿ ತೆಲುಗು ನಟ ಸುನೀಲ್ ಕಾಣಿಸಿಕೊಂಡಿದ್ದಾರೆ. ಮತ್ತೊಂದು ಪವರ್‌ಫುಲ್ ರೋಲ್‌ನಲ್ಲಿ ತಮಿಳು ನಟಿ ವರಲಕ್ಷ್ಮಿ ಶರತ್‌ಕುಮಾರ್ ಮಿಂಚಿದ್ದಾರೆ. ನಟನಾಗಿ ಸುದೀಪ್‌ (Sudeep) ಮಿಂಚಿದ್ದಾರೆ. ಚೇತನ್ ಡಿಸೋಜಾ ಕಂಪೋಸ್ ಮಾಡಿರುವ ಆಕ್ಷನ್ ಸೀಕ್ವೆಲ್ ಮಜಾ ಕೊಡ್ತಿದೆ. ಕೊನೆಗೆ ಕಾಳಿ ವೇಷಧಾರಿಯ ಮುಂದೆ ಕಿಚ್ಚ ಬಿಂದಾಸ್ ಆಗಿ ಹೆಜ್ಜೆ ಹಾಕಿರೋದು ಮ್ಯಾಕ್ಸ್ ಮೇಲಿನ ನಿರೀಕ್ಷೆಯನ್ನ ಡಬಲ್ ಮಾಡುತ್ತಿದೆ. ಮ್ಯಾಕ್ಸ್‌ನಲ್ಲಿ ಅಜನೀಶ್ ಲೋಕನಾಥ್ ಬಿಜಿಎಂ ಮಸ್ತ್ ಆಗಿದೆ. ಮೇಕಿಂಗ್, ವಿಷ್ಯುವಲ್ಸ್ ಹುಬ್ಬೇರಿಸುವಂತಿದೆ. ಇನ್ನು ಕಿಚ್ಚನ ಪವರ್‌ಫುಲ್ ಪರ್ಫಾರ್ಮನ್ಸ್ ನೆಕ್ಸ್ಟ್ ಲೆವೆಲ್. 'ವಿಕ್ರಾಂತ್ ರೋಣ' ಸಿನಿಮಾ ಬಂದು  2 ವರ್ಷಗಳ ಬಳಿಕ 'ಮ್ಯಾಕ್ಸ್' ಸಿನಿಮಾ ಬರ್ತಿದೆ. ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯ ಮ್ಯಾಕ್ಸ್ ಸೂತ್ರಧಾರಿ. ಕಲೈಪುಲಿ ಎಸ್ ತನು ವಿ‌ಕ್ರಿಯೇಷನ್ಸ್ ಬ್ಯಾನರ್ ಹಾಗೂ ಕಿಚ್ಚ ಸುದೀಪ್ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಮ್ಯಾಕ್ಸ್ ನಿರ್ಮಾಣ ಆಗುತ್ತಿದೆ. ಸಧ್ಯ ಮ್ಯಾಕ್ಸ್ ಟೀಸರ್ ಕೊಡುತ್ತಿರೋ ಕಿಕ್ ಸಿನಿಮಾ ಮೇಲಿನ ನಿರೀಕ್ಷೆಯನ್ನ ದುಪ್ಪಟು ಮಾಡಿರೋದಂತು ನಿಜ.

ಇದನ್ನೂ ವೀಕ್ಷಿಸಿ:  Darshan: ಜೈಲಿನಲ್ಲಿ ಬಯಲಾಯ್ತು ದರ್ಶನ್ ವಿಗ್ ಸ್ಟೋರಿ! 'ಶಿವಾಜಿ' ಲುಕ್‌ನಲ್ಲಿ ಮೊಟ್ಟೆ ಬಾಸ್ ಆದ ನಟ ?

04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!