Dec 15, 2023, 10:42 AM IST
ನಟ ಶ್ರೀಮುರಳಿ ಹುಟ್ಟುಹಬ್ಬ ಬರ್ತಿದೆ. ಇದೇ ಡಿಸೆಂಬರ್ 17ಕ್ಕೆ ಉಗ್ರಂ ಸ್ಟಾರ್ ಜನ್ಮದಿನ ಆಚರಿಸಿಕೊಳ್ತಾರೆ. ಬರ್ತ್ ಡೇ(Birthday) ಅಂದ್ಮೇಲೆ ಪ್ಯಾನ್ಸ್‌ಗೆ ಸರ್ಪ್ರೈಸ್ ಟ್ರೀಟ್ ಇರ್ಲೇ ಬೇಕಲ್ವಾ..? ಅದಕ್ಕಾಗಿ ಮಾಸ್ ಮಹರಾಜ ಬಘೀರ ರೆಡಿಯಾಗಿದ್ದಾನೆ. ಶ್ರೀಮುರಳಿ ಹುಟ್ಟುಹಬ್ಬದ ಸ್ಪೆಷಲ್ ಆಗಿ ಬಘೀರ ಟೀಸರ್ ರಿಲೀಸ್ ಆಗ್ತಿದೆ. ಬಘೀರ(Bagheera) ಇದು ಹೊಂಬಾಳೆ ಫಿಲ್ಮ್ಸ್(Hombale Films) ಬ್ಯಾನರ್‌ನ ಮತ್ತೊಂದು ಪ್ಯಾನ್ ಇಂಡಿಯಾ ಕೊಡುಗೆ. ಸಿನಿಮಾ ರಂಗದ ಮೇಲೆ 3 ಸಾವಿರ ಕೋಟಿ ಇನ್ವೆಸ್ಟ್ ಮಾಡುತ್ತೇವೆ ಅಂತ ವರ್ಷಗಳ ಹಿಂದೆ ಹೊಂಬಾಳೆ ಹೇಳಿಕೊಂಡಿತ್ತು. ಆ ಮೂರು ಸಾವರಿ ಕೋಟಿಯಲ್ಲಿ ಬಘೀರನ ಪಾಲೂ ಇದೆ. ಈ ‘ಬಘೀರ’ನ ಟೀಸರ್(Bagheera Official Teaser) ಡಿಸೆಂಬರ್ 17ರ ಬೆಳಿಗ್ಗೆ 9:45ಕ್ಕೆ ಬಿಡುಗಡೆ ಆಗಲಿದೆ. ಡಿಸೆಂಬರ್ 22ಕ್ಕೆ ಇದೇ ಹೊಂಬಾಳೆ ನಿರ್ಮಾಣದ ಸಲಾರ್ ತೆರೆ ಕಾಣುತ್ತಿದೆ. ಆದ್ರೆ ಸಲಾರ್‌ಗೂ ಮೊದಲೇ ಹೊಂಬಾಳೆ ಕಡೆಯಿಂದ ಬಘೀರನ ಟ್ರೀಟ್ ಸಿಗುತ್ತೆ. ಶ್ರೀಮುರಳಿಯ ಬಘೀರನಿಗೆ ಉಗ್ರಂ ಕೆಜಿಎಫ್ ಸಾಲಾರ್ ಖ್ಯಾತಿಯ ಪ್ರಶಾಂತ್ ನೀಲ್ ಕತೆ ಬರೆದಿದ್ದಾರೆ. ಡಾ ಸೂರಿ ನಿರ್ದೇಶನ ಮಾಡಿದ್ದಾರೆ. ‘ಬಘೀರ’ ಸಿನಿಮಾವು ಪಕ್ಕಾ ಆಕ್ಷನ್ ಸಿನಿಮಾ ಶ್ರೀಮುರಳಿಗೆ ನಾಯಕಿಯಾಗಿ ರುಕ್ಮಿಣಿ ವಸಂತಾ ನಟಿಸಿದ್ದಾರೆ.
ಇದನ್ನೂ ವೀಕ್ಷಿಸಿ: ‘ಆಕಾಶ ಗಡಿಯ ದಾಟಿ’ ಗೆಳೆತನ ಸಂಭ್ರಮಿಸುವ ‘ಸಲಾರ್’ ಸಾಂಗ್!