ಅಭಿಷೇಕ್ ಬಗ್ಗೆ ನಿಮ್ಗೆ ಗೊತ್ತಿಲ್ಲದ ವಿಷಯ ಇಲ್ಲಿದೆ: ಜ್ಯೂ.ರೆಬೆಲ್ ಸ್ಟಾರ್ ರಿಯಲ್ ನೇಮ್ ಏನು ಗೊತ್ತಾ..?

ಅಭಿಷೇಕ್ ಬಗ್ಗೆ ನಿಮ್ಗೆ ಗೊತ್ತಿಲ್ಲದ ವಿಷಯ ಇಲ್ಲಿದೆ: ಜ್ಯೂ.ರೆಬೆಲ್ ಸ್ಟಾರ್ ರಿಯಲ್ ನೇಮ್ ಏನು ಗೊತ್ತಾ..?

Published : Oct 04, 2023, 09:24 AM IST

ಕನ್ನಡ ಚಿತ್ರರಂಗದ ಒಂಟಿ ಸಲಗ, ನೇರ ದಿಟ್ಟ ಡೋಂಟ್ ಕೇರ್ ವ್ಯಕ್ತಿತ್ವ ಅಂದ್ರೆ ಅಂಬರೀಶ್. ಸ್ಯಾಂಡಲ್‌ವುಡ್‌ನ ಕರ್ಣ ಅಂದ್ರೆ ನಮ್ಮ ಕಣ್ ಮುಂದೆ ಬರೋದೇ ಅಂಬಿ. ಅಭಿಮಾನಿಗಳ ಪ್ರೀತಿಯ ರೆಬೆಲ್ ಸ್ಟಾರ್ ಇವತ್ತು ನಮ್ಮೊಂದಿಗಿಲ್ಲ. ಆದ್ರೆ ಅವರ ಅದುಕಿನ ಚಿಲುಮೆ ನಮ್ಮ ಮುಂದಿದೆ. ಯೆಸ್, ಅವ್ರೆ ಅಂಬಿಷೇಕ್ ಅಂಬರೀಶ್. ಅಂದಹಾಗೆ ರೆಬೆಲ್ ಸ್ಟಾರ್ ಪುತ್ರನಿಗೆ ಇಂದು ಹುಟ್ಟುಹಬ್ಬ.
 

ಅಭಿಷೇಕ್ ಅಂಬರೀಶ್ ಇಂದು ಸ್ಯಾಂಡಲ್ವುಡ್ ಸ್ಟಾರ್. ಅಭಿಗೆ ಸ್ಟಾರ್ ಗಿರಿ ಹುಟ್ಟುತ್ತಲೇ ಬಂದಿದೆ. ಯಾಕಂದ್ರೆ ಅಭಿ ಸೆಲೆಬ್ರಿಟಿ ಕುಡಿ. ಅಪ್ಪ ಅಮ್ಮ ಇಬ್ಬರೂ ದೊಡ್ಡ ಕಲಾವಿಧರು. ಸೆಲೆಬ್ರಿಟಿ ಕುಟುಂಬದಲ್ಲಿ ಹುಟ್ಟಿದ ಅಭಿಗೆ ಅಪ್ಪ ಅಂಬರೀಶ್(Ambareesh) ಏನಂತ ಹೆಸ್ರಿಟ್ಟಿದ್ರು ಗೊತ್ತಾ.? ಅಭಿಷೇಕ್ ಹುಟ್ಟು ಹೆಸ್ರು ಮಂಚೇಗೌಡ ಅಂತ. ಅಭಿಗೆ ಮಂಚೇಗೌಡ ಅಂತ ಹೆಸ್ರಿಟ್ಟಿದ್ದಕ್ಕೆ ಅಂಬಿ ಪತ್ನಿ ಸುಮಲತಾ(Sumalatha) ಗಂಡ ಅಂಬರೀಶ್ ಜತೆ ಜಗಳವಾಡಿದ್ದು ಇದೆ. ಕೊನೆಗೆ ಅಂಬರೀಶ್ ಹೆಸರು ಅ ಅಕ್ಷರದಿಂದ ಶುರುವಾಗಿದ್ದಕ್ಕೆ ಮಗನಿಗೂ ಅ ಅಕ್ಷರದಿಂದಲೇ ಹೆಸ್ರು ಆರಂಭವಾಗ್ಲಿ ಅಂತ ಅಭಿಷೇಕ್ ಎಂದು ನಾಮಕರಣ ಮಾಡಿದ್ರಂತೆ. ಅಭಿಷೇಕ್ ಅಂಬರೀಸ್(Abishek Ambareesh) ಅಮ್ಮನ ಮಗ. ಅಭಿಗೆ ಅಪ್ಪ ಅಂದ್ರೆ ಸಿಕ್ಕಾಪಟ್ಟೆ ಭಯ. ಓದಿನಲ್ಲಿ ಯಾವಾಗ್ಲು ಹಿಂದೆ ಬೀಳುತ್ತಿದ್ದ ಅಭಿಷೇಕ್ಗೆ ಅಮ್ಮ ಸುಮಲತಾನೇ ಟೀಚರ್. ಹೈಸ್ಕೂಲು ಕಾಲೇಜು ದಿನಗಳನ್ನ ಬೆಂಗಳೂರಿನಲ್ಲೇ ಕಳೆದ ಅಭಿ, ಹೈಯರ್ ಎಜ್ಯೂಕೇಷನ್ಗಾಗಿ ಯುಎಸ್ನಲ್ಲಿ ಮಾಸ್ಟರ್ ಡಿಗ್ರಿ ಮಾಡಿದ್ರು.  ಐದು ವರ್ಷ ಫಾರಿನ್ನಲ್ಲಿ ಓದಿದ್ದ ಅಭಿ International Relations and Democratic Politics ನಲ್ಲಿ ಪಧವಿ ಪಡೆದಿದ್ದಾರೆ. ಅಭಿಷೇಕ್‌ಗೆ ಸಿನಿಮಾ ಸ್ಟಾರ್ ಆಗೋ ಯಾವ್ ಆಸೆಯೂ ಇರಲಿಲ್ಲ. ಆದ್ರೆ ಅಂಬಿಗೆ ತನ್ನ ಮಗನನ್ನ ಕಲಾ ಸೇವೆಗೆ ನೇಮಿಸಬೇಕು ಅನ್ನೋ ಕನಸಿತ್ತು. ತಾನು ಸಾಯೋ ಮೊದಲೇ ಮಗನನ್ನ ಬಿಗ್ಸ್ಕ್ರೀನ್ನಲ್ಲಿ ನೋಡಬೇಕು ಅನ್ನೋ ದೊಡ್ಡ ಆಸೆ ಇತ್ತು.. ಅನಾರೋಗ್ಯಕ್ಕೆ ತುತ್ತಾಗಿದ್ದ ಅಪ್ಪನ ಆಸೆ ಈಡೇರಿಸಬೇಕು ಅಂತ ಅಭಿಷೇಕ್ ಹೀರೋನೂ ಆಗ್ತಾರೆ. ಈ ಸಿನಿಮಾಗೆ ಕತೆ ಆಯ್ಕೆ ಮಾಡಿದ್ದು, ಡೈರೆಕ್ಟರ್ನ ಸೆಲೆಕ್ಟ್ ಮಾಡಿದ್ದು, ಅಮರ್ ಅಂತ ಟೈಟಲ್ ಇಟ್ಟಿದ್ದು ಎಲ್ಲವೂ ಅಂಬರೀಶ್ ಅವರೇ. ಆದ್ರೆ ದುರಾದೃಷ್ಟ ಈ ಸಿನಿಮಾ ರಿಲೀಸ್ ಆಗೋ ಮೊದಲೇ ಅಂಬರೀಶ್ ನಿಧನ ಆದ್ರು.

ಇದನ್ನೂ ವೀಕ್ಷಿಸಿ: Today Horoscope: 12 ರಾಶಿಗಳ ಇಂದಿನ ಭವಿಷ್ಯ ಹೇಗಿದೆ ? ಇಂದು ಯಾರಿಗೆ ಶುಭ-ಅಶುಭ ?

03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
Read more