ಈ ವಾರ ರಿಲೀಸ್ ಆಗ್ತಿದೆ ಜಸ್ಟ್ ಪಾಸ್: ಫಸ್ಟ್ ಕ್ಲಾಸಲ್ಲಿ ಪಾಸ್ ಮಾಡುತ್ತಾನಾ ಪ್ರೇಕ್ಷಕ?

Feb 8, 2024, 1:14 PM IST

ಕನ್ನಡ ಕಿರುತೆರೆಯ ಹಲವು ಧಾರಾವಾಹಿಗಳಲ್ಲಿ ನಟಿಸಿ, ಆನಂತರ 'ಇರುವುದೆಲ್ಲವಾ ಬಿಟ್ಟು', 'ಗಜಾನನ & ಗ್ಯಾಂಗ್' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿರುವ ನಟ ಶ್ರೀ ಮಹದೇವ್ ಈಗ 'ಜಸ್ಟ್ ಪಾಸ್' ಅನ್ನೋ ಸಿನಿಮಾ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರು ಅರ್ಜುನ್ ಎಂಬ ಕಾಲೇಜು ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದಾರೆ. 'ಜಸ್ಟ್ ಪಾಸ್' ಸಿನಿಮಾಗೆ ಕೆ ಎಂ ರಘು ನಿರ್ದೇಶನ ಮಾಡಿದ್ದು, ರಾಯ್ಸ್ ಎಂಟರ್ಟೇನ್ಮೆಂಟ್ ಬ್ಯಾನರ್ ಅಡಿಯಲ್ಲಿ ಕೆ ವಿ ಶಶಿಧರ್ ನಿರ್ಮಾಣ ಮಾಡಿದ್ದಾರೆ. ಶ್ರೀ ಮಹಾದೇವ್ಗೆ ನಾಯಕಿಯಾಗಿ ಪ್ರಣತಿ ಕಾಣಿಸಿಕೊಂಡಿದ್ದಾರೆ. ಈಚೆಗೆ ಈ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಎಲ್ಲರ ಗಮನಸೆಳೆಯುತ್ತಿದೆ. "ಹೆಚ್ಚು ಅಂಕ ಪಡೆದವರಿಗೆ ಕಾಲೇಜು ಇರುವಂತೆ, ಇದು ಜಸ್ಟ್ ಪಾಸ್ ಆದ ವಿದ್ಯಾರ್ಥಿಗಳಿಗಾಗಿಯೇ ಶುರುವಾದ ಕಾಲೇಜು. ಇಂತಹ ಕಾಲೇಜಿನಲ್ಲಿ ಏನೆಲ್ಲ ನಡೆಯುತ್ತದೆ ಅನ್ನೋದೇ ಕಥೆ. ಸಿನಿಮಾ ಇದೇ ಶುಕ್ರವಾರ ತೆರೆಕಾಣುತ್ತಿದ್ದು ಸಿನಿಮಾದ ಟೀಸರ್ ಟ್ರೈಲರ್ ವೀಕ್ಷಿಸಿದ ನಟ ದರ್ಶನ್, ನಿರ್ದೇಶಕ ತರುಣ್ ಸುಧೀರ್, ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಕುಮಾರಸ್ವಾಮಿ ಸಿನಿಮಾಗೆ ಶುಭಾಷಯ ಕೋರಿದ್ದಾರೆ.