Dec 31, 2024, 5:43 PM IST
ಸಂಜು ವೆಡ್ಸ್ ಗೀತಾ -2 ಸೆಟ್ಟೇರಿದಾಗಿನಿಂದಲೂ ಸೌಂಡ್ ಮಾಡ್ತಾ ಬಂದಿರೋ ಸಿನಿಮಾ. ತನ್ನ ಸೂಪರ್ ಸಾಂಗ್ಸ್ನಿಂದ ಸೆನ್ಸೇಷನ್ ಸೃಷ್ಟಿಸಿರೋ ಸಿನಿಮಾ. ಇದೀಗ ಸಂಜು ಗೀತಾರ ಮತ್ತೊಂದು ಮೆಲೋಡಿ ನಂಬರ್ ರಿಲೀಸ್ ಆಗಿದೆ. ಜೊತೆಗೆ ಸಿನಿಮಾ ರಿಲೀಸ್ಗೂ ಮುಹೂರ್ತ ಫಿಕ್ಸ್ ಅಗಿದೆ.ಈಗಾಗ್ಲೇ ರಿಲೀಸ್ ಅಗಿರೋ ಸಂಜು ವೆಡ್ಸ್ ಗೀತಾ ಚಿತ್ರದ 2 ಸಾಂಗ್ಸ್ ಕಮಾಲ್ ಮಾಡಿವೆ. ಮತ್ತೀಗ ಚಿತ್ರದ ಇನ್ನೊಂದು ಮೆಲೋಡಿ ಸಾಂಗ್ ನ ಕಿಚ್ಚ ಸುದೀಪ್ ರಿಲೀಸ್ ಮಾಡಿದ್ದು ಸಂಜು ಆಂಡ್ ಗೀತಾಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.ಶ್ರೀಧರ್ ಸಂಭ್ರಮ್ ಕಂಪೋಸ್ ಮಾಡಿರೋ ಹಾಡುಗಳು ಸಂಜು ವೆಡ್ಸ್ ಗೀತಾ-2 ಪಾಲಿಗೆ ಖಂಡಿತ ಇನ್ವಿಟೇಶನ್ನಂತೆ ಕೆಲಸ ಮಾಡ್ತಾ ಇವೆ. ಚಲವಾದಿ ಕುಮಾರ್ ಈ ಚಿತ್ರಕ್ಕೆ ಬಂಡವಾಳಹೂಡಿದ್ದು, ಬಹು ನಿರೀಕ್ಷಿತ ಸಂಜು ವೆಡ್ಸ್ ಗೀತಾ-2 ಜನವರಿ 10ರಂದು ಪ್ರಪಂಚದಾದ್ಯಂತ ಬಿಡುಗಡೆಯಾಗಲಿದೆ.
ಫಾರ್ಮ್ಹೌಸ್ನಲ್ಲಿ ಅಮ್ಮನ ಭೇಟಿ, ಕಣ್ಣೀರಿಟ್ಟ ದರ್ಶನ್; ಈಗ ನೆನಪಾಯ್ತಾ ಅಮ್ಮನ ಮನೆ?