ಅಘೋರಿ ಪಾತ್ರಕ್ಕಾಗಿ ವಿಭೂತಿ ಬಳಿದುಕೊಂಡಿದ್ದಕ್ಕೆ ರಾಧಿಕಾ ಕುಮಾರಸ್ವಾಮಿಗೆ ಏನಾಗಿತ್ತು ಗೊತ್ತಾ?

ಅಘೋರಿ ಪಾತ್ರಕ್ಕಾಗಿ ವಿಭೂತಿ ಬಳಿದುಕೊಂಡಿದ್ದಕ್ಕೆ ರಾಧಿಕಾ ಕುಮಾರಸ್ವಾಮಿಗೆ ಏನಾಗಿತ್ತು ಗೊತ್ತಾ?

Published : Sep 08, 2024, 11:50 AM ISTUpdated : Sep 08, 2024, 12:05 PM IST

ಭೈರಾದೇವಿ ಸಿನಿಮಾ ಚಿತ್ರೀಕರಣದ ಹಂತದಲ್ಲಿ ಇಡೀ ತಂಡ ಸಾಕಷ್ಟು ಅಡೆತಡೆಗಳನ್ನು ಅನುಭವಿಸಿದೆ. ಆದರೆ, ಎಲ್ಲ ಅಡ್ಡಿ ಆತಂಕಗಳನ್ನು ನಿವಾರಿಸಿಕೊಂಡು ಇದೀಗ ಬಿಡುಗಡೆಗೆ ಸಜ್ಜಾಗಿದೆ. ಚಿತ್ರೀಕರಣದ ವೇಳೆ ಅಘೋರಿ ಪಾತ್ರಕ್ಕಾಗಿ..

ಸ್ಯಾಂಡಲ್‌ವುಡ್ ಸ್ವೀಟಿ ಖ್ಯಾತಿಯ ನಟಿ ರಾಧಿಕಾ ಕುಮಾರಸ್ವಾಮಿ ನಟನೆಯ ಭೈರಾದೇವಿ ಚಿತ್ರವು ಬಿಡುಗಡೆಗೆ ಸಿದ್ಧವಾಗಿದೆ. ಮುಂದಿನ ತಿಂಗಳು ದಸರಾ ವೇಳೆ (ಅಕ್ಟೋಬರ್ 03) ಭೈರಾದೇವಿ ಬಿಡುಗಡೆ ಘೋಷಿಸಿರುವ ಚಿತ್ರತಂಡವು ಸದ್ಯ ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ. ಈ ನಿಟ್ಟಿನಲ್ಲಿ, ನಟಿ ಹಾಗೂ ಭೈರಾದೇವಿ ನಿರ್ಮಾಪಕಿಯೂ ಆಗಿರುವ ರಾಧಿಕಾ ಕುಮಾರಸ್ವಾಮಿ ಅವರು ತಮ್ಮ ಸಂದರ್ಶನಗಳಲ್ಲಿ ಹಲವು ಸಂಗತಿಗಳ ಬಗ್ಗೆ ಮಾತನಾಡಿದ್ದಾರೆ. 

ಭೈರಾದೇವಿ ಸಿನಿಮಾ ಚಿತ್ರೀಕರಣದ ಹಂತದಲ್ಲಿ ಇಡೀ ತಂಡ ಸಾಕಷ್ಟು ಅಡೆತಡೆಗಳನ್ನು ಅನುಭವಿಸಿದೆ. ಆದರೆ, ಎಲ್ಲ ಅಡ್ಡಿ ಆತಂಕಗಳನ್ನು ನಿವಾರಿಸಿಕೊಂಡು ಇದೀಗ ಬಿಡುಗಡೆಗೆ ಸಜ್ಜಾಗಿದೆ. ಚಿತ್ರೀಕರಣದ ವೇಳೆ ಅಘೋರಿ ಪಾತ್ರಕ್ಕಾಗಿ ಮುಖ ಮಾತ್ರವಲ್ಲದೇ ಮೈ ತುಂಬಾ ಬೂದಿ (ವಿಭೂತಿ) ಬಳಿದುಕೊಂಡಿದ್ದ ಕಾರಣಕ್ಕೆ ರಾಧಿಕಾ ಅವರಿಗೆ ಸ್ಕಿನ್ ಅಲರ್ಜಿ ಕೂಡ ಕಾಣಿಸಿಕೊಂಡಿತ್ತಂತೆ. ಆದರೆ, ತಮ್ಮ ವೃತ್ತಿಜೀವನದಲ್ಲಿ ಮಾಡುತ್ತಿರುವ ವಿಭಿನ್ನ ಪಾತ್ರ ಎಂಬ ಕಾರಣಕ್ಕೆ ಎಲ್ಲವನ್ನೂ ಸಹಿಸಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ ರಾಧಿಕಾ ಕುಮಾರಸ್ವಾಮಿ. 

ಮೊದಲ ಬಾರಿಗೆ ನಟ ದರ್ಶನ್ ಕೇಸ್ ಬಗ್ಗೆ ಬಾಯ್ಬಿಟ್ಟ ರಾಧಿಕಾ ಕುಮಾರಸ್ವಾಮಿ, ಏನ್ ಹೇಳಿದ್ರು ನೋಡಿ!

ಇನ್ನು, ಚಿತ್ರೀಕರಣದ ವೇಳೆ ತಮ್ಮ ಬ್ಯೂಟಿ ಹಾಗು ಡಯಟ್ ಮ್ಯಾನೇಜ್ ಮಾಡೋಕೆ ನಟಿ ರಾಧಿಕಾ ಅವರಿಗೆ ಸಾಧ್ಯವೇ ಆಗಲಿಲ್ಲವಂತೆ. ಈ ಕಾರಣಕ್ಕೆ ಸದ್ಯ ತಾವು ಸ್ವಲ್ಪ ದಪ್ಪ ಆಗಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಜತೆಗೆ, ಮೊದಲೆಲ್ಲಾ ಇಷ್ಟಪಡುತ್ತಿದ್ದ ತುಪ್ಪ ತಿನ್ನುವುದನ್ನು ಸದ್ಯ ನಿಲ್ಲಿಸಿರುವುದಾಗಿ ಕೂಡ ಹೇಳಿದ್ದಾರೆ ರಾಧಿಕಾ ಕುಮಾರಸ್ವಾಮಿ! ಇನ್ನೂ ಏನೇನು ಹೇಳಿದ್ದಾರೆ ಅನ್ನೋದಕ್ಕೆ ವಿಡಿಯೋ ನೋಡಿ!

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more