ಬದುಕಿ ಬಾಳಿದ್ದ ಅರಮನೆ ತೊರೆದ ಕ್ರೇಜಿಸ್ಟಾರ್: ಕನಸಿನ ಮನೆ ಖಾಲಿ ಮಾಡಿದ್ದೇಕೆ ರವಿಚಂದ್ರನ್?

ಬದುಕಿ ಬಾಳಿದ್ದ ಅರಮನೆ ತೊರೆದ ಕ್ರೇಜಿಸ್ಟಾರ್: ಕನಸಿನ ಮನೆ ಖಾಲಿ ಮಾಡಿದ್ದೇಕೆ ರವಿಚಂದ್ರನ್?

Published : Sep 26, 2022, 07:50 PM IST

ರಾಜಾಜಿನಗರದಲ್ಲಿ ಯಾವೆಲ್ಲಾ ಸ್ಯಾಂಡಲ್‌ವುಡ್ ಸ್ಟಾರ್ಸ್ ಇದ್ದಾರೆ ಅಂತ ಹುಡುಕಿದ್ರೆ, ಮೊದ್ಲು ಸಿಗೋದೆ ಕನಸುಗಾರ. ಆದ್ರೆ ತನ್ನ ಕನಸಿನ ಮನೆಯನ್ನ ಖಾಲಿ ಮಾಡಿದ್ದಾರೆ ಕ್ರೇಜಿಸ್ಟಾರ್. ಇಷ್ಟು ವರ್ಷ ಬದುಕಿ ಬಾಳಿದ್ದ ಅರಮನೆಯನ್ನೇ ತೊರೆದಿದ್ದಾರಂತೆ ರವಿಮಾಮ. 

ಮನೆ ಮನೆ ಮುದ್ದು ಮನೆ. ಮನೆ ಮನೆ ನನ್ನ ಮನೆ. ತಾಯಿ ಮುತ್ತು ಕೊಟ್ಟ ಮನೆ. ತಂದೆ ಪೆಟ್ಟು ಕೊಟ್ಟ ಮನೆ ಅನ್ನೋ ಸಾಲುಗಳನ್ನ ರಾಷ್ಟ್ರಕವಿ ಕುವೆಂಪು ಬರೆದ್ರು. ಈ ಸಾಲುಗಳನ್ನ ಕೇಳುತ್ತಿದ್ರೆ ಓದುತ್ತಿದ್ರೆ ನೀವೆಲ್ಲಾ ಆಡಿ ಬಳೆದ ಮನೆ ಕಣ್ಮುಂದೆ ಬರೋದು ನಿಜಾ ಅಲ್ವಾ. ಹೀಗೆ ಆಡಿ ಬೆಳೆದಿದ್ದ ಮನೆಯನ್ನ ಈಗ ಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್ ರವಿಚಂದ್ರನ್ ಖಾಲಿ ಮಾಡಿದ್ದಾರೆ. ಬೆಂಗಳೂರಿನ ರಾಜಾಜಿನಗರದ ಡಾ. ರಾಕ್‌ಕುಮಾರ್ ರಸ್ತೆ ಅಂದ್ರೆ ರವಿಚಂದ್ರನ್ ಮನೆಗೆ ಫೇಮಸ್. ರಾಜಾಜಿನಗರದಲ್ಲಿ ಯಾವೆಲ್ಲಾ ಸ್ಯಾಂಡಲ್‌ವುಡ್ ಸ್ಟಾರ್ಸ್ ಇದ್ದಾರೆ ಅಂತ ಹುಡುಕಿದ್ರೆ, ಮೊದ್ಲು ಸಿಗೋದೆ ಕನಸುಗಾರ. ಆದ್ರೆ ತನ್ನ ಕನಸಿನ ಮನೆಯನ್ನ ಖಾಲಿ ಮಾಡಿದ್ದಾರೆ ಕ್ರೇಜಿಸ್ಟಾರ್. ಇಷ್ಟು ವರ್ಷ ಬದುಕಿ ಬಾಳಿದ್ದ ಅರಮನೆಯನ್ನೇ ತೊರೆದಿದ್ದಾರಂತೆ ರವಿಮಾಮ. ಆದ್ರೆ ಇದ್ದಕ್ಕಿದ್ದಂತೆ ತನ್ನ ಸ್ವಂತ ಮನೆಯನ್ನ ಖಾಲಿ ಮಾಡಿದ್ದೇಕೆ ಕ್ರೇಜಿಸ್ಟಾರ್ ಅನ್ನೋದೆ ಈಗ ಪ್ರಶ್ನೆಯಾಗಿದೆ. 

ರವಿಚಂದ್ರನ್ ಇದ್ದಕ್ಕಿದ್ದಂತೆ ಮನೆ ಕಾಲಿ ಮಾಡಿದ್ದು ಯಾಕೆ ಅಂತ ಹುಡುಕಿದ್ರೆ, ಕ್ರೇಜಿಸ್ಟಾರ್ ಆಪ್ತರು ಹೇಳೋದು ಹೀಗೆ. ವಾಸ್ತು ಕಾರಣದಿಂದ ಈ ಮನೆ ತೊರೆದಿದ್ದಾರಂತೆ ರವಿಚಂದ್ರನ್. ಆದರೆ ಶಾಶ್ವತವಾಗಿ ಈ ಮನೆ ಖಾಲಿ ಮಾಡಿದ್ರಾ ಅಥವಾ ವಾಸ್ತು ಕಾರಣದಿಂದ ರಿಪೇರಿ ಏನಾದರೂ ಮಾಡಿ ಮತ್ತೆ ಈ ಮನೆಗೆ ವಾಪಾಸ್ ಬರ್ತಾರಾ ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ. ರವಿಚಂದ್ರನ್ ತಂದೆ ವೀರಸ್ವಾಮಿ ಅವರ ಕಾಲದಿಂದಲೂ ವಾಸವಿದ್ದ ಮನೆ ಇದು. ಈ ಮನೆಗೆ 50ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಇದೆ. ಈಶ್ವರಿ ಪ್ರೊಡಕ್ಷನ್ ಶುರುಮಾಡಿದ್ದ ವೀರಸ್ವಾಮಿಯವರು ಇದೇ ಮನೆಯಿಂದಲೇ ಆ ಸಂಸ್ಥೆಯ ಕೀರ್ತಿ ಹೆಚ್ಚುವಂತಹ ಕೆಲಸ ಮಾಡಿದ್ರು. ಡಾ. ರಾಜ್ ಕುಮಾರ್ ಆದಿಯಾಗಿ ಎಲ್ಲಾ ಚಿತ್ರರಂಗದ ಮಂದಿ, ರವಿಚಂದ್ರನ್ ಅಭಿಮಾನಿಗಳು ಬಂದು ಹೋದ ಮನೆ ಇದು. ಇಷ್ಟೆ ಯಾಕೆ ರಾಮಾಚಾರಿ ರವಿಚಂದ್ರನ್, ಆಡಿ ಬೆಳೆದ ಮನೆ ಕೂಡ ಹೌದು. : ರಾಮಾಚಾರಿಯ ಈ ಮನೆಯಲ್ಲಿ ಏನೆಲ್ಲಾ ಇದೆ ಗೊತ್ತಾ.? ಕ್ರೇಜಿಸ್ಟಾರ್ ಸಿನಿಮಾ ನುಡಿ ಕಲಿತ ಮನೆ ಇದು. ಈ ಮನೆಯಲ್ಲಿ ರವಿಚಂದ್ರನ್ರ ಎಡಿಟಿಂಗ್ ಸುಡಿಯೋ ಇದೆ. 

ರೆಕಾರ್ಡಿಂಗ್ ಸ್ಟುಡಿಯೋ ಇದೆ. ಸಿನಿಮಾಗಳ ಏನೆಲ್ಲಾ ಕೆಲಸ ಇದೆಯೋ ಆ ಎಲ್ಲಾ ಕೆಲಸಗಳು ಈ ಮನೆಯಲ್ಲಿ ಆಗಿವೆ. ಅಪೂರ್ವ, ರವಿ ಬೋಪಣ್ಣ, ಅಹಂ ಪ್ರೇಮಾಸ್ಮಿ, ಮಲ್ಲ ಸೇರಿದಂತೆ ಹಲವು ಸಿನಿಮಾಗಳ ಶೂಟಿಂಗ್ ಕೂಡ ಇದೇ ಮನೆಯಲ್ಲೇ ಮಾಡಿದ್ದಾರೆ ರವಿಚಂದ್ರನ್. ರವಿಚಂದ್ರನ್ ಕುಟುಂಬ 10 ವರ್ಷದ ಹಿಂದೆಯೂ ಈ ಮನೆ ಖಾಲಿ ಮಾಡಿದ್ರು. ವಾಸ್ತು ಸರಿ ಇಲ್ಲ ಅಂತ ಜ್ಯುಡೀಷಿಯಲ್ ಲೇಔಟ್ನಲ್ಲಿ ಬಾಡಿಗೆ ಮನೆಗೆ ಹೋಗಿದ್ರು. ಆದ್ರೆ ರವಿಚಂದ್ರನ್ ಅವರ ತಾಯಿಗೆ ಆ ಬಾಡಿಗೆ ಮನೆಯಲ್ಲಿ ಇರಲು ಆಗದೇ ಕೊನೆಗೆ ಮತ್ತೆ ಈ ಸ್ವಂತ ಮನೆಗೆ ಬಂದಿದ್ರು. ತಮ್ಮ ಸುಧೀರ್ಘ ಜರ್ನಿಯನ್ನ ಇದೇ ಮನೆಯಲ್ಲಿ ಕಳೆದಿರುವ ರವಿಚಂದ್ರನ್‌ಗೆ ಈ ಮನೆ ಎಲ್ಲವೂ ಕೊಟ್ಟಿದೆ. ಇದೇ ಮನೆಯಲ್ಲಿದ್ದುಕೊಂಡು ಹಿಟ್ ಮೇಲೆ ಹಿಟ್ ಚಿತ್ರಗಳನ್ನ ಕೊಟ್ಟಿದ್ದಾರೆ. ಸತತ ಸೋಲುಗಳನ್ನ ಕಂಡಿದ್ದಾರೆ. ಲಾಭವೂ ಮಾಡಿದ್ದಾರೆ, ನಷ್ಟವೂ ಅನುಭವಿಸಿದ್ದಾರೆ. ನೋವು ಕಂಡಿದ್ದಾರೆ, ನಲಿವು ಕಂಡಿದ್ದಾರೆ. ಮಗಳು ಮತ್ತು ಮಗನ ಮದುವೆ ಮಾಡಿದ್ದಾರೆ. ತಾಯಿಯನ್ನು ಕೊನೆಯವರೆಗೂ ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ. ಹೀಗಾಗಿ ರವಿಮಾಮ ರಾಜಾಜಿನಗರದ ಈ ಮನೆಯಲ್ಲಿ ಮತ್ತೆ ರಾರಾಜಿಸೋದು ಯಾವಾಗ ಅನ್ನೋದೆ ಈಗ ಪ್ರಶ್ನೆಯಾಗಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
Read more