'ಗೌರಿ' ಹೊಸ ಸಾಂಗ್ ರಿಲೀಸ್.. ಸಮರ್ಜಿತ್ ಭರ್ಜರಿ ಸ್ಟೆಪ್: ರ್ಯಾಪ್ ಟಚ್​ ಕೊಟ್ಟ ಚಂದನ್ ಶೆಟ್ಟಿ!

'ಗೌರಿ' ಹೊಸ ಸಾಂಗ್ ರಿಲೀಸ್.. ಸಮರ್ಜಿತ್ ಭರ್ಜರಿ ಸ್ಟೆಪ್: ರ್ಯಾಪ್ ಟಚ್​ ಕೊಟ್ಟ ಚಂದನ್ ಶೆಟ್ಟಿ!

Published : May 13, 2024, 12:33 PM IST

ಪತ್ರಕರ್ತ ಲಂಕೇಶ್ ಮೊಮ್ಮಗ, ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ಬಣ್ಣದ ಲೋಕಕ್ಕೆ ಎಂಟ್ರಿಕೊಡ್ತಿದ್ದಾರೆ. ಇಂದ್ರಜಿತ್ ಲಂಕೇಶ್, ಅದ್ಭುತ ಸಿನಿಮಾಗಳನ್ನ ಕೊಟ್ಟವರು. ಇದೀಗ ತಮ್ಮ ನಿರ್ದೇಶದಲ್ಲಿಯೇ ಮಗನನ್ನ ಲಾಂಚ್ ಮಾಡ್ತಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಈಗ ಹೊಸ ಚೈತನ್ಯಗಳದ್ದೇ ಹವಾ. ಅದಕ್ಕೀಗ ಸಾಕ್ಷಿಯಾಗಿರೋದೆ ಗೌರಿ ಸಿನಿಮಾ. ಗೌರಿ ಅಂದ ತಕ್ಷಣ ಸಾಕಷ್ಟು ವಿಶೇಷತೆಗಳು ಕಣ್ಮುಂದೆ ಬರುತ್ತವೆ. ಯಾಕಂದರೆ ಈ ಸಿನಿಮಾ ಮೂಲಕ ಕನ್ನಡದ ಖ್ಯಾತ ಪತ್ರಕರ್ತ ಲಂಕೇಶ್ ಮೊಮ್ಮಗ, ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ಬಣ್ಣದ ಲೋಕಕ್ಕೆ ಎಂಟ್ರಿಕೊಡ್ತಿದ್ದಾರೆ. ಇಂದ್ರಜಿತ್ ಲಂಕೇಶ್, ಅದ್ಭುತ ಸಿನಿಮಾಗಳನ್ನ ಕೊಟ್ಟವರು. ಇದೀಗ ತಮ್ಮ ನಿರ್ದೇಶದಲ್ಲಿಯೇ ಮಗನನ್ನ ಲಾಂಚ್ ಮಾಡ್ತಿದ್ದಾರೆ. ಸಮರ್ಜಿತ್ ಸುಮ್ಮನೆ ಹಾಗೆ ತಂದೆಯ ಇನ್ಫೂಯನ್ಸ್ ಮೇಲೆ ಬಂದಿಲ್ಲಾ.. ಸಿಕ್ಕಾಪಟ್ಟೆ ಡೆಡಿಕೇಟ್ ಹಾಕಿ, ಫುಲ್ ವರ್ಕ್ಟ್‌ಔಟ್ ಮಾಡಿ ಬಂದಿದ್ದಾರೆ ಅನ್ನೊದಿಕ್ಕೆ ಅಂದು ಟೀಸರ್ ಸಾಕ್ಷಿಯಾಗಿತ್ತು. 

ಅದಕ್ಕೆ ಮತ್ತಷ್ಟು ಪುಷ್ಟಿ ಕೊಡ್ತಿದೆ ಈ ಸಾಂಗ್. ಈ ಹಾಡಿನಲ್ಲಿ ಸಮರ್ಜಿತ್‌ ಸ್ಟೆಪ್ಸ್, ಸ್ಟೈಲ್, ಆ ಎಕ್ಸ್‌ಪ್ರೇಷನ್ ನೋಡ್ತಿದ್ರೆ, ಅವರಿಗೆ ಸಿನಿಮಾ ಮೇಲೆ ಸಿಕ್ಕಾಪಟ್ಟೆ ಫ್ಯಾಷನ್ ಇದೆ ಅಂತ ಗೊತ್ತಾಗುತ್ತೆ. ಗೌರಿ ಸಿನಿಮಾದ ಈ ಹಾಡಿನಲ್ಲಿ ಚಂದನ್ ಶೆಟ್ಟಿ ರ್ಯಾಪ್​ ಟಚ್​ ಇದೆ. ಈ ಹಾಡಿನಲ್ಲಿ ಚಂದನ್ ಶೆಟ್ಟಿಯ ಸಂಗೀತ ಮತ್ತು ಗಾಯನ ಎರಡೂ ಇರೋದ್ರಿಂದ, ರ‍್ಯಾಪ್ ಸಾಂಗ್ ಫೀಲ್ ರೀತಿ ಕೇಳಿಸುತ್ತಿದೆ. ನಿರ್ದೇಶಕ ಇಂದ್ರಜಿತ್ ಲಂಕೇಶ್ ತನ್ನ ಸಿನಿಮಾಗಳಲ್ಲಿ ಹಾಡಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಈಗ ಗೌರಿಯಲ್ಲೂ ಅದ್ಧೂರಿ ಸಟ್ ಹಾಕಿ ಕಲರ್‌ಫುಲ್ ಆಗಿ ಚಿತ್ರೀಕರಿಸಿದ್ದಾರೆ. 

ಈ ಚಿತ್ರದ ಮೂಲಕ ಮತ್ತೊಂದು ಪ್ರತಿಭೆ ಮುದ್ದು ಹುಡುಗಿ ಸಾನ್ಯ ಅಯ್ಯರ್ ಸ್ಯಾಂಡಲ್‌ವುಡ್‌ಗೆ ಕಾಲಿಡ್ತಿದ್ದಾರೆ. ಮೊದಲ ಚಿತ್ರದಲ್ಲಿಯೇ ತಾನೋಬ್ಬ ಅದ್ಭುತ ನಟಿಯಾಗೋ ಸೂಚನೆ ಕೊಟ್ಟಿದ್ದಾರೆ. ಗೌರಿ ಸಿನಿಮಾದ ಸ್ಯಾಂಪಲ್ಸ್​ಗಳು ಟ್ರೆಂಡ್ ಆಗಿವೆ. ಹೀಗಾಗಿ ಈ ಸಿನಿಮಾದ ಹಾಡನ್ನ ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ದೊಡ್ಡ ಕಾರ್ಯಕ್ರಮ ಮಾಡಿ ಬಿಡುಗಡೆ ಮಾಡಲಾಯ್ತು. ನಟಿ ಸಾನ್ಯಾ ಅಯ್ಯರ್ ಜೊತೆ ಕಾಲೇಜು ಹುಡುಗ್ರು ಕುಣಿದು ಕುಪ್ಪಳಿಸಿ ಎಂಜಾಯ್ ಮಾಡಿದ್ದಾರೆ. ಲಾಫಿಂಗ್ ಬುದ್ದ ಫಿಲಂಸ್ ಲಾಂಛನದಲ್ಲಿ ಇಂದ್ರಜಿತ್ ಲಂಕೇಶ್ ನಿರ್ಮಿಸಿ, ನಿರ್ದೇಶಿಸಿರುವ ಗೌರಿ ಚಿತ್ರ ಯಾವುದಕ್ಕೂ ಕಡಿಮೆ ಇಲ್ಲದೆ ಅದ್ದೂರಿಯಾಗಿ ಮೂಡಿ ಬಂದಿದೆ. ಅಫ್‌ಕೋರ್ಸ್ ಅದಕ್ಕೆ ಹಿಂದೆ ಬಂದ ಟೀಸರ್ ಹಾಗು ಈ ಹಾಡು ಸಾಕ್ಷಿ. 

ಇಲ್ಲಿನ ಮತ್ತೊಂದು ಹೈಲೇಟ್ ಅಂದ್ರೆ, ಸಿನಿಮಾದ ಟೆಕ್ನಿಷಿಯನ್ಸ್.. ಸಂಭಾಷಣೆ ಬರೆದಿರುವ ಮಾಸ್ತಿ, ರಾಜಶೇಖರ್, ಸಂಗೀತ ನಿರ್ದೇಶನ ಮಾಡಿರುವ ಅನಿರುದ್ದ್ ಶಾಸ್ತ್ರಿ, ಹಿನ್ನೆಲೆ ಸಂಗೀತ ನೀಡಿರುವ ಮ್ಯಾಥ್ಯೂಸ್ ಮನು, ಹೀಗೆ ನುರಿತ ತಂತ್ರಜ್ಞರ ತಂಡವೆ ಇಲ್ಲಿದೆ. ಗೌರಿ ಸಿನಿಮಾ ಪ್ರಾಮಿಸ್ಸಿಂಗ್ ಆಗಿದೆ. ಈಗ ಈ ಗೌರಿ ಎಲ್ಲರ ಗಮನ ಸೆಳೆಯುತ್ತಿದೆ. ಸಮರ್ಜಿಯ್​ ಲಂಕೇಶ್​​​​ ಕನ್ನಡದ ಹೊಸ ಭರವಸೆ ಆಗುತ್ತಿದ್ದಾರೆ. ಯುವ ಪ್ರತಿಭೆಗಳ ಸಿನಿಮಾಗಳನ್ನ ಕೈ ಹಿಡಿದು ಗೆಲ್ಲಿಸೋ ಕನ್ನಡ ಸಿನಿ ಪ್ರೇಕ್ಷಕರು ಗೌರಿಯನ್ನೂ ಸಕ್ಸಸ್ ಮಾಡಿಸುತ್ತಾರೆ ಅನ್ನೋ ನಂಬಿಕೆ ಈಗ ಸ್ಯಾಂಡಲ್​ವುಡ್​ನಲ್ಲಿ ಚಿಗುರೊಡೆದಿದೆ. ಈ ಗೌರಿ ಇನ್ನೇನು ಕೆಲವೇ ದಿನಗಳಲ್ಲಿ ಬೆಳ್ಳಿ ತೆರೆ ಮೇಲೆ ರಾರಾಜಿಸಲಿದೆ.

02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
Read more