May 27, 2023, 10:35 AM IST
ಸಲ್ಮಾನ್ ಖಾನ್ ಬಾಡಿಗಾರ್ಡ್ ಹೀಗೆ ಮಾಡಿದ್ದು ಸರಿಯಲ್ಲ ಅಂತಿದ್ದಾರೆ ಜನ. ಹೌದು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಸಲ್ಮಾನ್ ಖಾನ್ ಮಾಜಿ ಪ್ರೇಯಸಿ ಎಂದೇ ಗುರುತಿಸಿಕೊಂಡಿದ್ದ ಕತ್ರಿನಾ ಕೈಫ್ ಅವರ ಪತಿಯನ್ನು ನಡೆಸಿಕೊಂಡ ರೀತಿ ನೋಡಿ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಇಷ್ಟೆಲ್ಲ ಅವಮಾನ ಮಾಡಬಾರದು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ವಿಕ್ಕಿ ಕೌಶಲ್ ಕಂಡರೆ ಸಲ್ಮಾನ್ ಖಾನ್ ಆಗಲ್ಲ ಎನ್ನುವುದು ಪದೇ ಪದೇ ಸಾಬೀತಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಸಲ್ಮಾನ್ ಖಾನ್ ಜೊತೆ ಡೇಟಿಂಗ್ ಮಾಡಿ ಬಳಿಕ ರಣಬೀರ್ ಕಪೂರ್ ಜೊತೆ ಹೋದಳು ಆದರೆ ಬಳಿಕ ವಿಕ್ಕಿ ಕೌಶಲ್‌ನ ಮದುವೆಯಾದರು. ಇದು ಸಲ್ಮಾನ್ ಖಾನ್‌ಗೆ ಸಹಿಸಲು ಆಗುತ್ತಿಲ್ಲ ಎಂದು ಹೇಳುತ್ತಿದ್ದಾರೆ.
ಇದನ್ನೂ ವೀಕ್ಷಿಸಿ: ಕಪಿಲ್ ಜೊತೆ ಕ್ರಿಸ್‌ಗೇಲ್, ಬ್ರೆಟ್ ಲೀ ಡಿಂಕಚಕ ಡಾನ್ಸ್ ! : ಕಾರ್ತಿ 'ಜಪಾನ್'ಗೆ ರಿಷಬ್ ಶೆಟ್ಟಿ ಸಾಥ್!