ಏನಾಗ್ತಿದೆ ಟಾಕ್ಸಿಕ್ ಅಡ್ಡಾದಲ್ಲಿ ಅಡ್ಡಿ?..ಈ ವರ್ಷವೂ ಬರಲ್ಲ ಯಾಕೆ ರಾಕಿಭಾಯ್!

ಏನಾಗ್ತಿದೆ ಟಾಕ್ಸಿಕ್ ಅಡ್ಡಾದಲ್ಲಿ ಅಡ್ಡಿ?..ಈ ವರ್ಷವೂ ಬರಲ್ಲ ಯಾಕೆ ರಾಕಿಭಾಯ್!

Published : Mar 24, 2025, 03:02 PM ISTUpdated : Mar 24, 2025, 03:03 PM IST

ಟಾಕ್ಸಿಕ್ ಇಷ್ಟು ತಡವಾಗಲಿಕ್ಕೆ ಕೆಜಿಎಫ್​ನ ಯಶಸ್ಸು. ಕೆಜಿಎಫ್1 ಮತ್ತು 2 ಸಿನಿಮಾಗಳು ಇಡೀ ವಿಶ್ವದಾದ್ಯಂತ ಕನ್ನಡ ಸಿನಿರಂಗದ ಬಾವುಟವನ್ನ ಹಾರಿಸಿದ್ವು. ಯಶ್ ಬಗ್ಗೆ ಇಡೀ ಜಗತ್ತೇ ಅಚ್ಚರಿಯಿಂದ ನೋಡ್ತು. ಈಗ ಅದನ್ನೂ ಮೀರಿಸೋ ಸಿನಿಮಾ ಮಾಡಬೇಕು ಅಂತ..

ರಾಕಿಂಗ್ ಸ್ಟಾರ್ ಯಶ್ (Rocking Star Yash) ನಟನೆಯ ಹಿಂದಿನ ಸಿನಿಮಾ ಕೆಜಿಎಫ್-2 ತೆರೆಗೆ ಬಂದು ಭರ್ತಿ ಮೂರು ವರ್ಷಗಳಾಗ್ತಾ ಬಂತು. ಈ ವರ್ಷವಾದ್ರೂ ಯಶ್ ನಟನೆಯ ಟಾಕ್ಸಿಕ್ ರಿಲೀಸ್ ಆಗುತ್ತೆ ಅಂತ ಫ್ಯಾನ್ಸ್ ಕಾದು ಕುಳಿತಿದ್ರು. ಆದ್ರೆ ಟಾಕ್ಸಿಕ್ ನೋಡೋದಕ್ಕೆ 2026ರ ವರೆಗೂ ಕಾಯಬೇಕು ಅನ್ನೋ ಸುದ್ದಿಕೊಟ್ಟಿದ್ದಾರೆ. ಅಷ್ಟಕ್ಕೂ ಏನಾಗ್ತಿದೆ ಟಾಕ್ಸಿಕ್ ಅಡ್ಡಾದಲ್ಲಿ..? ಸಿನಿಮಾ ಯಾಕಿಷ್ಟು ತಡವಾಗ್ತಾ ಇದೆ..? ಆ ಕುರಿತ ಎಕ್ಸ್​ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.

ಈ ವರ್ಷವೂ ಬರಲ್ಲ ರಾಕಿಭಾಯ್.. ಏನಾಗ್ತಿದೆ ಟಾಕ್ಸಿಕ್ ಅಡ್ಡಾದಲ್ಲಿ..?
ಯೆಸ್ ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಸಿನಿಮಾದ ಅಪ್​​ಡೇಟ್ ಕೊಟ್ಟಿದ್ದಾರೆ. ಚಿತ್ರದ ಸ್ಟೈಲಿಶ್ ಆಗಿರೋ ಹೊಚ್ಚ ಪೋಸ್ಟರ್ ಹಂಚಿಕೊಂಡು ರಿಲೀಸ್ ಡೇಟ್​​ನ ಅನೌನ್ಸ್ ಮಾಡಿದ್ದಾರೆ. ಮಾರ್ಚ್ 19 2026ಕ್ಕೆ ಸಿನಿಮಾ ತೆರೆಕಾಣಲಿದೆ ಅನ್ನೋ ಅಪ್​ಡೇಟ್ ಕೊಟ್ಟಿದ್ದಾರೆ. ಅಲ್ಲಿಗೆ ಯಶ್​ನ ಬಿಗ್ ಸ್ಕ್ರೀನ್​ ಮೇಲೆ ನೋಡಲಿಕ್ಕೆ ಇನ್ನೂ ಒಂದು ವರ್ಷದ ಕಾಲ ಕಾಯಲೇಬೇಕಿದೆ.

ಏಪ್ರಿಲ್ 2025ಕ್ಕೆ ರಿಲೀಸ್ ಆಗಬೇಕಿದ್ದ ರಾಕಿಭಾಯ್ ಸಿನಿಮಾ..! 
ಹೌದು  2023ರ ಡಿಸೆಂಬರ್​ನಲ್ಲಿ ಟಾಕ್ಸಿಕ್ ಸಿನಿಮಾವನ್ನ ಘೋಷಣೆ ಮಾಡಿದ್ದ ಯಶ್, ಆಗಲೇ ಈ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ರು. ಏಪ್ರಿಲ್ 2025ಕ್ಕೆ  ಟಾಕ್ಸಿಕ್ ತೆರೆಗೆ ಬರುತ್ತೆ ಅನ್ನೋ ವಿಷ್ಯ ಹಂಚಿಕೊಂಡಿದ್ರು. ಅದಾಗಲೇ ಕೆಜಿಎಫ್ -2 ರಿಲೀಸ್ ಅಗಿ ಒಂದುವರೇ ವರ್ಷ ಆಗಿತ್ತು. ಬಳಿಕ ಒಂದೂವರೇ ವರ್ಷ. ಒಟ್ಟು ಮೂರು ವರ್ಷದ ಗ್ಯಾಪ್ ನಂತರ ಮತ್ತೆ ಬಿಗ್ ಸ್ಕ್ರೀನ್ ಮೇಲೆ ಬರೋದಾಗಿ ಘೋಷಣೆ ಮಾಡಿದ್ರು. ಆದ್ರೆ ಈಗ ನೋಡಿದ್ರೆ ಸಿನಿಮಾ ಮತ್ತೊಂದು ವರ್ಷ ಮುಂದಕ್ಕೆ ಹೋಗಿದೆ.

ಕೆಜಿಎಫ್ ಬಳಿಕ ನಿರೀಕ್ಷೆಯ ಭಾರ.. ವಿಶ್ವಮೆಚ್ಚಿಸುವ ಕಾತುರ..!
ಹೌದು ಟಾಕ್ಸಿಕ್ ಇಷ್ಟು ತಡವಾಗಲಿಕ್ಕೆ ಕಾರಣ. ಕೆಜಿಎಫ್​ನ ಯಶಸ್ಸು. ಕೆಜಿಎಫ್1 ಮತ್ತು 2 ಸಿನಿಮಾಗಳು ಇಡೀ ವಿಶ್ವದಾದ್ಯಂತ ಕನ್ನಡ ಸಿನಿರಂಗದ ಬಾವುಟವನ್ನ ಹಾರಿಸಿದ್ವು. ಯಶ್ ಬಗ್ಗೆ ಇಡೀ ಜಗತ್ತೇ ಅಚ್ಚರಿಯಿಂದ ನೋಡ್ತು. ಈ ಯಶಸ್ಸಿನ ಬಳಿಕ ಇದನ್ನೂ ಮೀರಿಸೋ ಸಿನಿಮಾ ಮಾಡಬೇಕು ಅಂತ ರಾಕಿ ಹಠಕ್ಕೆ ಬಿದ್ರು.

ಟಾಕ್ಸಿಕ್ ಸಿನಿಮಾದ ಸ್ಕ್ರಿಪ್ಟ್ ಫೈನಲ್ ಮಾಡೋದಕ್ಕೇನೇ ಯಶ್ ಬರೊಬ್ಬರಿ ಒಂದೂವರೇ ವರ್ಷ ತೆಗೆದುಕೊಂಡ್ರು. ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೆ ಕೈ ಜೋಡಿಸಿ ತಾನು ನಿರ್ಮಾಣಕ್ಕೆ ಕೈ ಹಾಕಿದ್ರು. ಮಲಯಾಳಂ ನಿರ್ದೇಶಕಿ ಗೀತು ಮೋಹನದಾಸ್​ಗೆ ನಿರ್ದೇಶನದ ಜವಾಬ್ದಾರಿ ಕೊಟ್ರು. 2024ರ ಆಗಸ್ಟ್​​ನಲ್ಲಿ ಸಿನಿಮಾ ಶೂಟಿಂಗ್ ಶುರುವಾಯ್ತು.

ಎರಡು ಭಾಷೆಗಳಲ್ಲಿ ಚಿತ್ರೀಕರಣ.. ಶೂಟಿಂಗ್​ಗೆ ನಾನಾ ಅಡ್ಡಿ..!
ಹೌದು ಟಾಕ್ಸಿಕ್ ಸಿನಿಮಾವನ್ನ ಕನ್ನಡದ ಜೊತೆಗೆ ಇಂಗ್ಲೀಶ್​ನಲ್ಲೂ ಏಕಕಾಲದಲ್ಲಿ ಚಿತ್ರಿಸಲಾಗ್ತಾ ಇದೆ. ಇದೇ ಕಾರಣಕ್ಕೆ ಶೂಟಿಂಗ್​​ಗೆ ಸಿಕ್ಕಾಪಟ್ಟೆ ಸಮಯ ತೆಗೆದುಕೊಳ್ತಾ ಇದೆ. ಜೊತೆಗೆ ಟಾಕ್ಸಿಕ್ ಸೆಟ್ ಹಾಕಲಾಗಿದ್ದ ಎಚ್.ಎಂ.ಟಿ ಜಾಗದಲ್ಲಿ ಮರ ಕಡಿದ ಆರೋಪ ಬಂದು ಕೇಸ್ ಎದುರಿಸುವಂತೆ ಆಗಿತ್ತು.

ಇನ್ನೂ ಸಿನಿಮಾದಲ್ಲಿ ಬಾಲಿವುಡ್, ಹಾಲಿವುಡ್​ನ ಖ್ಯಾತ ಕಲಾವಿದರು ಇರೋದ್ರಿಂದ ಎಲ್ಲರ ಡೇಟ್ ಮ್ಯಾನೇಜ್ ಮಾಡೋದು ದೊಡ್ಡ ಸವಾಲಾಗ್ತಾ ಇದೆ. ಈ ಎಲ್ಲಾ ಕಾರಣಕ್ಕೆ ಅಂದುಕೊಂಡ ವೇಗದಲ್ಲಿ ಟಾಕ್ಸಿಕ್ ಶೂಟಿಂಗ್ ನಡೀತಾ ಇಲ್ಲ. ಚಿತ್ರದ ಪೋಸ್ಟ್ ಪ್ರೊಡಕ್ಷನ್​ಗೂ ಸಿಕ್ಕಾಪಟ್ಟೆ ಸಮಯ ಬೇಕು. ಅದೇ ಕಾರಣಕ್ಕೆ ಯಶ್ ಬರೊಬ್ಬರಿ ಒಂದು ವರ್ಷ ಚಿತ್ರವನ್ನ ಮುಂದೂಡಿದ್ದಾರೆ.

ಇದೂವರೆಗೂ ಟಾಕ್ಸಿಕ್ ಅಡ್ಡಾದಿಂದ ಹೊರಬಂದಿರೋದು ಒಂದೇ ಒಂದು ಸಣ್ಣ ಝಲಕ್. ಅದನ್ನೇ ಇನ್ನೂ ಒಂದು ವರ್ಷ ಕಾಲ ನೋಡಿಕೊಂಡು ಫ್ಯಾನ್ಸ್ ಕಾಯಲೇಬೇಕು. ಯಾಕಂದ್ರೆ ರಾಕಿ ವಿಶ್ವವೇ ಮೆಚ್ಚಿಸೋ ಸಿನಿಮಾ ರೆಡಿ ಮಾಡ್ತಾ ಇದ್ದಾರೆ. ಸೋ ಇನ್ನಷ್ಟು ಕಾದು ನೋಡಿ ಅಂತಿದ್ದಾರೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more