Jun 26, 2023, 12:47 PM IST
ರಾಕಿಂಗ್ ಸ್ಟಾರ್ ಯಶ್, ಪ್ಯಾನ್ ಇಂಡಿಯಾದ ಮೋಸ್ಟ್ ಪವರ್ ಫುಲ್ ಸ್ಟಾರ್. ಕೆಜಿಎಫ್ ಕೋಟೆಯಲ್ಲಿ ಚಿನ್ನವನ್ನ ಅಗೆದು ತೆಗೆದು ಇಂದು ಸ್ಯಾಂಡಲ್‌ವುಡ್‌ನ ಶ್ರೀಮಂತ ಹೀರೋ ಆಗಿದ್ದಾರೆ ರಾಕಿ. ಈ ರಿಚೆಸ್ಟ್ ಹೀರೋಗೆ ಒಂದು ಕ್ರೇಜ್ ಇದೆ. ಅದು ಟಾಪ್ ಮೋಸ್ಟ್ ಕಾರುಗಳ ಕಲೆಕ್ಷನ್ ಕ್ರೇಜ್. ಯೆಸ್ ರಾಕಿಂಗ್ ಸ್ಟಾರ್ ಯಶ್ ಕೋಟಿ ಕೋಟಿ ಬೆಲೆ ಬಾಳುವ ಕಾರುಗಳ ಒಡೆಯ. ಯಶ್ ಬಳಿ ಇರುವ ಒಂದೊಂದು ಕಾರುಗಳು ಕೋಟಿಗೆ ಬೆಲೆ ಬಾಳುತ್ತವೆ. ಹೈ ಯೆಂಡ್ ಕಾರುಗಳನ್ನ ನೋಡ್ಬೇಕು ಅಂದ್ರೆ ಯಶ್ರನ್ನ ಫಾಲೋ ಮಾಡಿದ್ರೆ ಸಾಕು. ಯಶ್ ಮೊನ್ನೆ ಮೊನ್ನೆಯಷ್ಟೆ 3 ಕೋಟಿ 93 ಲಕ್ಷದ ರೇಂಜ್ ರೋವರ್ ಎಸ್ಯುವಿ ಕಾರು ಖರೀದಿಸಿದ್ದಾರೆ. ಇದರ ಜೊತೆಗೆ 1 ಕೋಟಿ 21 ಲಕ್ಷದ ಮರ್ಸಿಡಿಸ್ ಬೆಂಜ್ GLS 350D, ಹಾಗು 90 ಲಕ್ಷದ ಆಡಿ Q7, 80 ಲಕ್ಷ ಮರ್ಸಿಡಿಸ್ ಬೆಂಜ್ GLC 250D Coupe, ಮತ್ತು 70 ಲಕ್ಷ ಬಿಎಂಡಬ್ಲ್ಯು 5 Series 520D ಹಾಗು 40 ಲಕ್ಷದ ಪಜೆರೊ ಸ್ಪೋರ್ಟ್ ಕಾರುಗಳನ್ನ ಹೊಂದಿದ್ದಾರೆ. ವಾರಕ್ಕೊಂದು ಹೈ ಫ್ರೊಫೈಲ್ ಕಾರಿನಲ್ಲಿ ಓಡಾಡ್ತಾರೆ ಯಶ್. ರಾಕಿ ಬಳಿ ಇರೋ ಕಾರುಗಳ ಲೀಸ್ಟ್ ಹಾಗು ಅದರ ರೇಟ್ ಇಲ್ಲಿದೆ ನೋಡಿ..
ಇದನ್ನೂ ವೀಕ್ಷಿಸಿ: ಸಾ.ರಾ. ಮಹೇಶ್ ಪುತ್ರನ ಕಿರಿಕ್: ಪತ್ರಕರ್ತನ ಪುತ್ರನ ಜೊತೆ ಡಿಶುಂ ಡಿಶುಂ ..!