Dec 18, 2022, 5:13 PM IST
ತಮ್ಮ ನೆಚ್ಚಿನ ಸ್ಟಾರ್ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳೋಕೆ ಯಾವ ಅಭಿಮಾನಿಗೆ ಆಸೆ ಇರುವುದಿಲ್ಲ ಹೇಳಿ. ಒಂದೇ ಒಂದು ಫೋಟೋಗೋಸ್ಕರ ರಾತ್ರಿ ಬೆಳಗಾಗಿ ಮತ್ತೆ ಕತ್ತಲಾದ್ರೂ ಕಾಯೋ ಡೈಹಾರ್ಡ್ ಫ್ಯಾನ್ಸ್ ಇದ್ದಾರೆ. ಅಂತಹ ಅಭಿಮಾನಿಗಳ ಆಸೆ ಈಡೇರಿಸಿದ್ದಾರೆ ರಾಕಿಂಗ್ ಸ್ಟಾರ್ ಯಶ್. ಕೆಜಿಎಫ್ ಬಂದ ಮೇಲೆ ಯಾರ ಕೈಗೂ ಸಿಗದೇ ಫುಲ್ ಬ್ಯುಸಿ ಇದ್ದ ಯಶ್ ಇತ್ತೀಚೆಗೆ ಅಭಿಮಾನಿಗಳಿಗೋಸ್ಕರ ಎರಡು ಗಂಟೆ ಸಮಯ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಸಂವಾದ ಕಾರ್ಯಕ್ರಮ ಒಂದರಲ್ಲಿ ಯಶ್ ಭಾಗಿ ಆಗಿದ್ರು. ಆಗ ಸುಮಾರು 700ಕ್ಕೂ ಹೆಚ್ಚು ಅಭಿಮಾನಿಗಳಿಗೆ ಯಶ್, 2 ಗಂಟೆ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳಲು ಅವಕಾಶ ಕೊಟ್ಟಿದ್ದು, ಯಶ್ ಜೊತೆ ಫೋಟೋ ಪಡೆದಿದ್ದಕ್ಕೆ ಫ್ಯಾನ್ಸ್ ಖುಷಿ ದಿಲ್ ಖುಷ್ ಆಗಿದ್ದಾರೆ.
Pro Kabaddi: ಜೈಪುರ ಗೆದ್ದ ಖುಷಿಗೆ ಪತ್ನಿ ಐಶ್ವರ್ಯಾರನ್ನು ಬಿಗಿದಪ್ಪಿ ಸಂಭ್ರಮಿಸಿದ ಅಭಿಷೇಕ್ ಬಚ್ಚನ್