Jul 24, 2023, 10:26 AM IST
ರಿಷಬ್ ಶೆಟ್ಟಿ ಹಾಗೂ ನಿಮ್ಮ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭಾ ದಿನಪತ್ರಿಗೆ ಸೇರಿ ಸೇವ್ ವೈಲ್ಡ್ ಲೈಫ್ ಕ್ಯಾಂಪೇನ್(Save Wild Life campaign) ಮಾಡ್ತಿದೆ. ಈ ಕ್ಯಾಂಪೇನ್‌ನ ರಾಯಭಾರಿ ಕಾಡು ಬೆಟ್ಟದ ಶಿವ ರಿಷಬ್ ಶೆಟ್ಟಿ(Rishabh Shetty). ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಗೂಡಿ ಕಾಡು ಸುತ್ತಿದ್ದ ನಟ ರಿಷಬ್ ಅಲ್ಲಿನ ಜನರ ಸಮಸ್ಯೆ ಬಗ್ಗೆ ಅರಿತಿದ್ರು. ಅಂತಹ ಸಮಸ್ಯೆಗಳಲ್ಲೊಂದು ಕಾಡಂಚಿನ ಗ್ರಾಮಗಳಿಗೆ ವಿದ್ಯುತ್ ಕೊರತೆಯ(Current problem) ಸಮಸ್ಯೆ. ಇದರ ಬಗ್ಗೆ ಹಿಂದಿನ ಸರ್ಕಾರದ ಗಮನಕ್ಕೆ ತಂದಿದ್ರು ರಿಷಬ್ ಶೆಟ್ಟಿ. ಇದೀಗ ನಟ ರಿಷಬ್ ಶೆಟ್ಟಿ ಕೋರಿಗೆಗೆ ಮಣಿದಿರೋ ಕಲಬುರಗಿ ವಿದ್ಯುತ್ ಪ್ರಸರಣ ನಿಗಮ, ತಮ್ಮ ವ್ಯಾಪ್ತಿಯಲ್ಲಿ ಬರೋ ಕಾಡಂಚಿನ ಗ್ರಾಮಗಳಲ್ಲಿರೋ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ಹೊತ್ತಲ್ಲಿ 3 ರಿಂದ ಐದು ಗಂಟೆಗಳ ಕಾಲ 3 ಫೇಸ್ ವಿದ್ಯುತ್ ನೀಡಲು ಒಪ್ಪಿಗೆ ಸೂಚಿಸಿದೆ. ಇದರ ಕುರಿತು ರಿಷಬ್ ಶೆಟ್ಟಿಗೆ ಪತ್ರ ಬರೆದಿದೆ. ಈ ಮೂಲಕ ರಿಷಬ್ ಕಾಡಂಚಿನ ಗ್ರಾಮಗಳಿಗೆ ಬೆಳಕಾಗಿದ್ದಾರೆ.
ಇದನ್ನೂ ವೀಕ್ಷಿಸಿ: 'KD' ಶೂಟಿಂಗ್‌ಗೆ ಬ್ರೇಕ್.. ರಾಘವೇಂದ್ರ ಸ್ವಾಮಿ ಮಠದಲ್ಲಿ ಧ್ರುವ!