ಮಂಗಳೂರು ವಜ್ರದೇಹಿ ಮಠದ ಕೋಲದಲ್ಲಿ ರಿಷಬ್..! ಧೈರ್ಯ ಕಳೆದುಕೊಳ್ಳದಂತೆ ನಟನಿಗೆ ದೈವದ ಅಭಯ..!

ಮಂಗಳೂರು ವಜ್ರದೇಹಿ ಮಠದ ಕೋಲದಲ್ಲಿ ರಿಷಬ್..! ಧೈರ್ಯ ಕಳೆದುಕೊಳ್ಳದಂತೆ ನಟನಿಗೆ ದೈವದ ಅಭಯ..!

Published : Jan 07, 2024, 09:18 AM IST

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಈಗ ಕಾಂತಾರ ಚಾಪ್ಟರ್ ಒನ್ ಶೂಟಿಂಗ್ ಹೋಗೋ ಟೈಂ ಬಂದಿದೆ. ಇಷ್ಟು ದಿನ ಕಾಂತಾರ ಸ್ಟೋರಿ, ಲೊಕೇಷನ್ ಹಂಟಿಂಗ್, ಕಲಾವಿದರ ಆಯ್ಕೆ ಕಡೆ ಗಮನ ಹರಿಸಿದ್ದ ಶೆಟ್ರು ಕುಂದಾಪುರದ ಆಣೆಗುಡ್ಡೆ ದೇವಸ್ಥಾನಲ್ಲಿ ವಿಘ್ನೇಶ್ವರನಿಗೆ ಪೂಜೆ ಮಾಡಿ ಸಿನಿಮಾದ ಮುಹೂರ್ತ ಮಾಡಿದ್ರು.

ಯಾವುದೇ ಕೆಲ್ಸ ಆಗ್ಲಿ ದೇವರ ಆಶೀರ್ವಾದ ಬೇಕು. ರಿಷಬ್ ಶೆಟ್ಟಿ ಕೂಡ ಕಾಂತಾರ 1(Kantara 1) ಶೂಟಿಂಗ್ ಹೋಗೋ ಮೊದಲು ದೈವರ ಆಶೀರ್ವಾದ ಕೇಳಿದ್ದಾರೆ. ಜನವರಿಯಿಂದ ಕಾಂತಾರ ಶೂಟಿಂಗ್ ಆರಂಭವಾಗಲಿದೆ. ಈಗ ಶೆಟ್ರು ಟೀಂ ಮುಂದಿನ ವಾರದಿಂದ ಶೂಟಿಂಗ್ ಹೋಗ್ತಿದ್ದಾರೆ. ಹೀಗಾಗಿ  ಕಾಂತಾರ ಚಾಪ್ಟರ್ ಒನ್ ಶೂಟಿಂಗ್ ಯಾವ್ದೇ ವಿಘ್ನವಿಲ್ಲದೆ ನಿರ್ವಿಘ್ನವಾಗಿ ನಡೆಯಲಿ ಅಂತ ದೈವದ ಅಭಯ ಬೇಡಿದ್ದಾರೆ ಶೆಟ್ರು.ಈಗ ಕರಾವಳಿ ಭಾಗದಲ್ಲಿ ಭೂತ ಕೋಲದ ಸಮಯ. ಮನೆ ಮನೆಯಲ್ಲೂ ದೈವಾರಾಧನೆ ನಡೆಯುತ್ತೆ. ಇದೀಗ ರಿಷಬ್ ಶೆಟ್ಟಿ ಇದೇ ಸಮಯಲ್ಲಿ ದೈವದ ಕತೆಯ ಕಾಂತಾರ ಚಾಪ್ಟರ್ 1 ಶೂಟಿಂಗ್ ಶುರು ಮಾಡ್ತಿದ್ದಾರೆ. ಹೀಗಾಗಿ ಮಂಗಳೂರಿನ ವಜ್ರದೇಹ ಮಠದ ಮೈಸಂದಾಯ ಕೋಲದಲ್ಲಿ ರಿಷಬ್ (Rishab Shetty) ಭಾಗಿ ಆಗಿದ್ದಾರೆ. ಈ ಹಿಂದೆ ವಜ್ರದೇಹಿ ಮಠದ ಸ್ವಾಮೀಜಿಯನ್ನ(Swamiji of Vajradehi Math)  ಭೇಟಿಯಾಗಿದ್ದ ರಿಷಬ್ ಈ ಮಠದಲ್ಲಿ ನಡೆಯೋ ಭೂತಕೋಲದಲ್ಲಿ ಭಾಗಿ ಆಗೋ ಆಸೆ ವ್ಯಕ್ತಪಡಿಸಿದ್ರು. ರಿಷಬ್ ಶೆಟ್ಟಿ ಇಚ್ಛೆಯಂತೆ ಕೋಲಕ್ಕೆ ಆಹ್ವಾನಿಸಿದ್ರು. ಹೀಗಾಗಿ ರಿಷಬ್ ಈ ಭೂತ ಕೋಲದಲ್ಲಿ(Buta Kola) ಭಾಗಿ ಆಗಿದ್ದಾರೆ.ಕಾಂತಾರದಲ್ಲಿ ರಿಷಬ್ ಮೈ ಮೇಲೆ ಬರೋ ದೈವ ಕಾಡು ಬೆಟ್ಟದ ಊರ ಜನರಿಗೆ ಯಾವುದೇ ಸಮಸ್ಯೆ ಬಂದ್ರು ಹೆದರಬೇಡಿ ನಿಮ್ಮ ಜೊತೆ ನಾನಿದ್ದೇನೆ ಅಂತ ಅಭಯ ಕೊಡುತ್ತೆ. ಇದೇ ತರದ ದೃಶ್ಯ ರಿಷಬ್ ಈಗ ನಡೆದಿದೆ. ಅತ್ತಿತ್ತ ಕಣ್ಣಾಡಿಸದೆ ದೈವವನ್ನೇ ನೋಡುತ್ತಾ ನಿಂತ ರಿಷಬ್ ಶೆಟ್ಟಿಗೆ ಏನೇ ಸಮಸ್ಯೆ ಬಂದ್ರು ಕುಗ್ಗಬೇಡ ಮುನ್ನುಗ್ಗು ನಿನ್ನ ಬೆನ್ನ ಹಿಂದೆ ನಾನಿದ್ದೇನೆ ಎಂದು ಸನ್ನೆ ಮಾಡಿ ಆಶೀರ್ವದಿಸಿದೆ ದೈವ.

ಇದನ್ನೂ ವೀಕ್ಷಿಸಿ:  ಅಯೋಧ್ಯೆಯಲ್ಲಿ ಸುವರ್ಣ ಹೆಜ್ಜೆ : ನಿರಂತರ ಸಂಚಾರ, ಸಮಗ್ರ ವರದಿ & ಲೇಟೆಸ್ಟ್ ಅಪ್ಡೇಟ್ಸ್‌ -ಒಂದು ಹಿನ್ನೋಟ

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more