Jan 8, 2025, 12:07 PM IST
ಕಾಂತಾರ ಗ್ಲೋಬಲ್ ಸಕ್ಸಸ್ ನಂತರ ರಿಷಬ್ ಶೆಟ್ಟಿ ಬಹುದೊಡ್ಡ ನಿರೀಕ್ಷೆಯ ಭಾರ ಹೊತ್ತುಕೊಂಡು ಪ್ರೀಕ್ವೆಲ್ ರೆಡಿಮಾಡ್ತಾ ಇದ್ದಾರೆ. ವಿಶೇಷ ಅಂದ್ರೆ ಬಹುತೇಕ ಕುಂದಾಪರ ಸುತ್ತಲೇ ಚಿತ್ರೀಕರಣ ಮಾಡಿರೋ ರಿಷಬ್, ಈಗ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಅನ್ನೂ ತಮ್ಮೂರಲ್ಲಿ ಕುಳಿತೇ ಮಾಡೋದಕ್ಕೆ ನಿರ್ಧರಿಸಿದ್ದಾರೆ. ಈಗಾಗ್ಲೇ ಅಕ್ಟೋಬರ್ 2ಕ್ಕೆ ಕಾಂತಾರ ಚಾಪ್ಟರ್ 1 ರಿಲೀಸ್ ಅಂತ ಫಿಕ್ಸ್ ಆಗಿದೆ. ಸೋ ಸಿನಿಮಾದ ಅಂತಿಮ ಹಂತದ ಕೆಲಸಗಳು ಭರದಿಂದ ನಡೀತಾ ಇವೆ. ಇದೀಗ ತಮ್ಮೂರಿನಲ್ಲೇ ಪೋಸ್ಟ್ ಪ್ರೊಡಕ್ಷನ್ ಸ್ಟುಡಿಯೋವನ್ನೂ ಮಾಡ್ಲಿಕ್ಕೆ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈಗಾಗ್ಲೇ ಸಂಗೀತ ನಿರ್ದೆಶಕ ರವಿ ಬಸ್ರೂರು ತಮ್ಮೂರಿನಲ್ಲೇ ಮ್ಯೂಸಿಕ್ ಸ್ಟುಡಿಯೋ ಮಾಡಿಕೊಂಡು ಬಿಗ್ ಪ್ಯಾನ್ ಇಂಡಿಯಾ ಚಿತ್ರಗಳ ಕೆಲಸವನ್ನ ಹುಟ್ಟೂರಿನಲ್ಲಿ ಕುಳಿತು ಮಾಡ್ತಾ ಇದ್ದಾರೆ. ರಿಷಬ್ ಕೂಡ ಇದೇ ರೀತಿ ತಮ್ಮೂರಿನಲ್ಲಿ ಪೋಸ್ಟ್ ಪ್ರೊಡಕ್ಷನ್ ಸ್ಟುಡಿಯೋ ಆರಂಬಿಸ್ತಾ ಇದ್ದಾರೆ.ರಿಷಬ್ ನಡೆಯೋ ದಾರಿ ನೋಡ್ತಿದ್ರೆ ಶಂಕರ್ನಾಗ್ ನೆನಪಿಗೆ ಬರ್ತಾರೆ. ಹಿಂದೆ ಮದ್ರಾಸ್ನಲ್ಲಿದ್ದ ಕನ್ನಡ ಚಿತ್ರರಂಗವನ್ನ ಬೆಂಗಳೂರಿಗೆ ಕರೆತರೋದಕ್ಕೆ ಶಂಕರ್ನಾಗ್ ಅವಿರತ ಶ್ರಮಪಟ್ಟಿದ್ರು. ಬೆಂಗಳೂರಿನಲ್ಲಿ ಸಂಕೇತ್ ಸ್ಟುಡಿಯೋ ಕಟ್ಟಿದ್ರು. ಇದೀಗ ರಿಷಬ್ ಕೂಡ ಇಂಥದ್ದೇ ಪ್ರಯತ್ನ ಮಾಡ್ತಾ ಇದ್ದಾರೆ. ಲೋಕಲ್ನಲ್ಲಿದ್ದುಕೊಂಡೇ ಗ್ಲೋಬಲ್ ಸಾಹಸ ಮಾಡ್ತಾ ಇದ್ದಾರೆ.
ಶಿವಾಜಿ v/s ಪುಲಕೇಶಿ.. ರಿಷಬ್ಗೆ ನಾಡದ್ರೋಹಿ ಅಂದಿದ್ಯಾರು? ಮರಾಠಿ ದೊರೆಯ ಪಾತ್ರ ಮಾಡ್ಬಾರ್ದಾ?