ಉಪೇಂದ್ರ-ರಮ್ಯಾ ಜೋಡಿ 'ರಕ್ತ ಕಾಶ್ಮೀರ' ಚಿತ್ರದ ಬಿಡುಗಡೆ ಸೀಕ್ರೆಟ್ ಗೊತ್ತಾ?

ಉಪೇಂದ್ರ-ರಮ್ಯಾ ಜೋಡಿ 'ರಕ್ತ ಕಾಶ್ಮೀರ' ಚಿತ್ರದ ಬಿಡುಗಡೆ ಸೀಕ್ರೆಟ್ ಗೊತ್ತಾ?

Published : Dec 06, 2024, 05:20 PM ISTUpdated : Dec 06, 2024, 05:39 PM IST

ಹೀಗೆ ಎರಡು ಸೂಪರ್ ಹಿಟ್ ಸಿನಿಮಗಳನ್ನ ಕೊಟ್ಟಿರೋ ಈ ಜೋಡಿಯ ಹ್ಯಾಟ್ರಿಕ್ ಕಾಂಬೀನೇಷನ್ ಮೂವಿ ಈಗ ರಿಲೀಸ್ ಗೆ ಸಜ್ಜಾಗಿದೆ. ಅದರ ಹೆಸರೇ ರಕ್ತಕಾಶ್ಮೀರ. ಅರೇ ಇದ್ಯಾವುದಿದು ಹೊಸ ಸಿನಿಮಾ..? ಸೆಟ್ಟೇರಿದ್ದೇ ಗೊತ್ತಾಗಿಲ್ಲ...!

ರಿಯಲ್ ಸ್ಟಾರ್ ಉಪೇಂದ್ರ ಅಂಡ್ ಸ್ಯಾಂಡಲ್​ವುಡ್​ ಕ್ವೀನ್ ರಮ್ಯಾ ಜೋಡಿ  ಕನ್ನಡದ ಸೂಪರ್ ಹಿಟ್ ಜೋಡಿಗಳಲ್ಲಿ ಒಂದು.  ಇವರಿಬ್ಬರು ಜೊತೆಯಾಗಿ ನಟಿಸಿದ ಗೌರಮ್ಮ & ಕಠಾರಿವೀರ ಸುರಸುಂದರಾಂಗಿ ಸಿನಿಮಾಗಳು ಸೂಪರ್ ಹಿಟ್ ಆಗಿದ್ವು. ಇದೀಗ ಇದೇ ಸೂಪರ್​ ಜೋಡಿಯ ಹೊಸ ಸಿನಿಮಾ ತೆರೆಗೆ ಬರ್ತಾ ಇದೆ. ಉಪ್ಪಿ&ರಮ್ಯಾ ಮತ್ತೊಮ್ಮೆ ತೆರೆ ಮೇಲೆ ಮೋಡಿ ಮಾಡೋಕೆ ಬರ್ತಾ ಇದ್ದಾರೆ.. ಅರೇ  ಇದೇನಿದು ಹೊಸ ವಿಷ್ಯ ಅಂತೀರಾ..? ಆ ಕುರಿತ ಎಕ್ಸ್​ ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.

ಉಪೇಂದ್ರ - ರಮ್ಯಾ 'ರಕ್ತಕಾಶ್ಮೀರ'.. ಏನಿದು ಹೊಸ ವಿಚಾರ..? ರಿಯಲ್ ಸ್ಟಾರ್-ಸ್ಯಾಂಡಲ್​ವುಡ್ ಕ್ವೀನ್ ಹ್ಯಾಟ್ರಿಕ್ ಮೂವಿ !
ಹೌದು, ಅವರು ಸ್ಯಾಂಡಲ್​ವುಡ್​​ನ ಸೂಪರ್ ಹಿಟ್ ಜೋಡಿ. ಅವರ ಕಾಂಬಿನೇಷನ್​ನಲ್ಲಿ ಬಂದ ಎರಡು ಸಿನಿಮಾಗಳು ಸೂಪರ್ ಡೂಪರ್ ಹಿಟ್ ಆಗಿದ್ವು. ಉಪ್ಪಿ & ರಮ್ಯಾ ಮೊದಲ ಬಾರಿ ಒಂದಾಗಿ ನಟಿಸಿದ್ದು ಗೌರಮ್ಮ ಸಿನಿಮಾದಲ್ಲಿ. ಈ ರೊಮ್ಯಾಂಟಿಕ್ ಕಾಮಿಡಿ ಡ್ರಾಮಾ ಮೂವಿ ಕನ್ನಡ ಸಿನಿರಸಿಕರ ಮನಸು ಗೆದ್ದಿತ್ತು. ಗೌರಮ್ಮ ಮೂವಿಯ ಹಾಡುಗಳಂತೂ ಸಖತ್ ಸದ್ದು ಮಾಡಿದ್ವು.

'ಪುಷ್ಪ 2' ಅಬ್ಬರಕ್ಕೆ ಹಳೆಯ ದಾಖಲೆ ಪುಡಿಪುಡಿ; ಶ್ರೀವಲ್ಲಿ-ಪುಷ್ಪರಾಜ್ ರಾಕಿಂಗ್!

ಇನ್ನೂ ಉಪ್ಪಿ ರಮ್ಯಾ  ಎರಡನೇ ಬಾರಿಗೆ ಒಟ್ಟಾಗಿ ನಟಿಸಿದ್ದು ಕಠಾರಿ ವೀರ ಸುರಸುಂದರಾಂಗಿ ಸಿನಿಮಾದಲ್ಲಿ. 2012ರಲ್ಲಿ ತೆರೆಗೆ  ಬಂದ ಈ ಸಿನಿಮಾ ಕನ್ನಡದ ಮೊಟ್ಟ ಮೊದಲ ತ್ರೀಡಿ ಸಿನಿಮಾ. ಉಪ್ಪಿ ಇಲ್ಲಿ ಕಠಾರಿವೀರನಾದ್ರೆ ರಮ್ಯಾ ಸುರಸಂದರಿ ಇಂದ್ರಜಾ ಆಗಿ ನಟಿಸಿದ್ರು.

ಹೀಗೆ ಎರಡು ಸೂಪರ್ ಹಿಟ್ ಸಿನಿಮಗಳನ್ನ ಕೊಟ್ಟಿರೋ ಈ ಜೋಡಿಯ ಹ್ಯಾಟ್ರಿಕ್ ಕಾಂಬೀನೇಷನ್ ಮೂವಿ ಈಗ ರಿಲೀಸ್ ಗೆ ಸಜ್ಜಾಗಿದೆ. ಅದರ ಹೆಸರೇ ರಕ್ತಕಾಶ್ಮೀರ. ಅರೇ ಇದ್ಯಾವುದಿದು ಹೊಸ ಸಿನಿಮಾ..? ಸೆಟ್ಟೇರಿದ್ದೇ ಗೊತ್ತಾಗಿಲ್ಲ. ಅದ್ಯಾವಾಗ ಉಪ್ಪಿ & ರಮ್ಯಾ ಈ ಸಿನಿಮಾ ಮಾಡಿದ್ರು ಅಂತ ತಲೆಕೆಡಿಸಿಕೊಳ್ತಾ ಇದ್ದೀರಾ. ಈ ರಕ್ತಕಾಶ್ಮೀರದ ಹಿಂದೆ ಒಂದು ದೊಡ್ಡ ಕಥೆಯೇ ಇದೆ.

ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್’​​ ಚಿತ್ರಕ್ಕೆ ಹೊಸ ರೂಪ, 2008ರ ಸಿನಿಮಾಗೆ ಈಗ ಕೂಡಿ ಬಂತು ರಿಲೀಸ್ ಭಾಗ್ಯ..!
ಯೆಸ್ ರಕ್ತಕಾಶ್ಮೀರ ಅನ್ನೋದು 2008ರಲ್ಲಿ ಚಿತ್ರಿತವಾದ ಸಿನಿಮಾ. ಹಿರಿಯ ನಿರ್ದೇಶಕ ಎಸ್.ವಿ ರಾಜೇಂದ್ರಸಿಂಗ್ ಬಾಬು ತುಂಬಾನೇ ಮಹತ್ವಾಕಾಂಕ್ಷೆಯಿಂದ ಈ ಸಿನಿಮಾ ರೆಡಿಮಾಡಿದ್ರು. ಉಪೇಂದ್ರ-ರಮ್ಯಾ ಮತ್ತೊಂದಿಷ್ಟು ಮಕ್ಕಳ ಪಡೆಯನ್ನ ಸೇರಿಸಿ ಒಂದು ದೊಡ್ಡ ಬಜೆಟ್​​ನ ಎಂಟರ್​ಟೈನಿಂಗ್ ಸಿನಿಮಾ  ಮಾಡಿದ್ರು ಬಾಬು. ಬೆಂಗಳೂರು ಮತ್ತು ಕಾಶ್ಮೀರದಲ್ಲಿ ಸಿನಿಮಾದ ಶೂಟಿಂಗ್ ನಡೆದಿತ್ತು.

ಅಣ್ಣಾವ್ರು ಹಾಗೂ ಗೀತಾ ಮನೆಯಲ್ಲಿ ಏನಂತ ಕರೀತಾರೆ? ಗುಟ್ಟು ಬಿಚ್ಚಿಟ್ಟ ಶಿವಣ್ಣ!

ಈ ಸಿನಿಮಾಗಾಗಿ ಖಾಸಗಿ ಬ್ಯಾಂಕ್​ವೊಂದರಿಂದ ಸಿಂಗ್ ಬಾಬು ಸಾಲ ಪಡೆದಿದ್ರು. ಇದರ ರಿಲೀಸ್ ವೇಳೆ ಆ ಬ್ಯಾಂಕ್ ಮತ್ತು ನಿರ್ಮಾಪಕರ ನಡುವೆ ಕಿರಿಕ್ ಆಗೀ ಕೋರ್ಟ್ ಅಂಗಳಕ್ಕೆ ಕೇಸ್ ಹೋಯ್ತು. ಕೇಸ್ ಇತ್ಯರ್ಥ ಆಗೋವರೆಗೂ ರಿಲೀಸ್ ಮಾಡೋ ಹಾಗಿಲ್ಲ ಅನ್ನೋ ಮಧ್ಯಂತರ ಆದೇಶ ಬಂತು. ಸೋ ಈ ಸಿನಿಮಾ ಭರ್ತಿ 16 ವರ್ಷ ಡಬ್ಬದಲ್ಲೇ ಉಳಿದಿತ್ತು.

ಇದೀಗ ಈ ಕೇಸ್ ಮುಕ್ತಾಯವಾಗಿದ್ದು ಬೀಮೂಸ್ ಬ್ಯಾಂಗ್  ಬ್ಯಾಂಗ್ ಕಿಡ್ಸ್​ ಚಿತ್ರಕ್ಕೆ ಹೊಸ ಟೈಟಲ್ ಕೊಟ್ಟು ತೆರೆಗೆ ತರೋದಕ್ಕೆ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಸಜ್ಜಾಗಿದ್ದಾರೆ. ಇದ್ರಲ್ಲಿ ಕಾಶ್ಮೀರ-ಭಯೋತ್ಪಾದನೆ ಕುರಿತ ಕಥೆ ಇರೋದ್ರಿಂದ ರಕ್ತ ಕಾಶ್ಮೀರ ಅಂತ ಹೊಸ ಟೈಟಲ್ ಕೊಟ್ಟಿದ್ದಾರೆ.

ಈ ಸಿನಿಮಾಗೆ  ಎಂ.ಎಸ್ ರಮೇಶ್ ಸಂಭಾಷಣೆ, ಗುರುಕಿರಣ್ ಸಂಗೀತ ನಿರ್ದೇಶನ ಇದೆ. ವಿಶೇಷ ಅಂದ್ರೆ ಈ ಚಿತ್ರದ  ಒಂದು ಹಾಡಿನಲ್ಲಿ ಡಾ.ವಿಷ್ಣುವರ್ಧನ್ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲಿಗೆ ಈ ಸಿನಿಮಾ ಮೂಲಕ ಸಾಹಸ ಸಿಂಹನನ್ನ ಮತ್ತೆ ತೆರೆ ಮೇಲೆ ನೋಡುವ ಚಾನ್ಸ್ ಸಿಕ್ತಾ ಇದೆ.

ಮನೆಗೇ ಹೋಗಿದ್ದ ಯಮುನಾ ನೋಡಿ ಡಾ ರಾಜ್‌ ಮಾಡಿದ್ದೇನು, ನಟಿ ರಿಯಾಕ್ಷನ್ ಏನಿತ್ತು?

ಉಪೇಂದ್ರ ನಟನೆ-ನಿರ್ದೇಶನದ UI ಇದೇ ಡಿಸೆಂಬರ್ 20ಕ್ಕೆ ರಿಲೀಸ್ ಆಗಲಿದ್ದು ಅದರ ಬೆನ್ನಲ್ಲೇ ಈ ರಕ್ತಕಾಶ್ಮೀರ ರಿಲೀಸ್ ಮಾಡೋಕೆ ಪ್ಲ್ಯಾನ್ ಮಾಡಲಾಗಿದೆ. ಸೋ UI ಬಳಿಕ ಇಮ್ಮಿಡಿಯೇಟ್ ಆಗಿ ಉಪ್ಪಿಯ ಮತ್ತೊಂದು ಸಿನಿಮಾ ನೋಡೋಕೆ ಸಿಗಲಿದೆ. ಚಿತ್ರರಂಗದಿಂದ ದೂರವೇ ಉಳಿದಿರೋ ರಮ್ಯಾರ ಹಳೆಯ ಅವತಾರ ನೋಡೋದಕ್ಕೆ ಸಿಗಲಿದೆ.. ಸೋ ರಕ್ತಕಾಶ್ಮೀರ ಪ್ರೇಕ್ಷಕರಿಗೆ ಮೋಡಿ ಮಾಡೋ ನಿರೀಕ್ಷೆ ಇದೆ.  ಸದ್ಯ ಹೊಸ ಟೈಟಲ್ ಅನೌನ್ಸ್ ಮಾಡಿರೋ ಈ ಸಿನಿಟೀಮ್ ಸದ್ಯದಲ್ಲೇ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಲಿದೆ. ಹೆಚ್ಚಿಮ ಮಾಹಿತಿಗೆ ವಿಡಿಯೋ ನೋಡಿ.. 

05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!