Jan 14, 2025, 5:03 PM IST
ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ ಈಗ ಪುಷ್ಪ-2 ಸಕ್ಸಸ್ ಸಂಭ್ರಮದಲ್ಲಿದ್ದಾಳೆ. ಪುಷ್ಪ-2 ಸಿನಿಮಾ ಭರ್ತಿ 1800 ಕೋಟಿ ಗಳಿಕೆ ಮಾಡಿದೆ. ಈ ಯಶಸ್ಸಿನ ಜೊತೆಗೆ ಸಲ್ಮಾನ್ ಖಾನ್ ಜೊತೆಗಿನ ಬಾಲಿವುಡ್ ಪ್ರಾಜೆಕ್ಟ್ನಲ್ಲಿ ಕೆಲಸ ಮಾಡ್ತಾ ಇರೋ ರಶ್ಮಿಕಾ ಆಗಸದಲ್ಲಿ ತೇಲ್ತಾ ಇದ್ದಾಳೆ. ಆದ್ರೆ ಆಗಸದಿಂದ ರಪ್ ಅಂತ ಬಿದ್ದಿರೋ ರಶ್ಮಿಕಾ ಎಲ್ಲರಿಗೂ ಸಾರಿ ಕೇಳ್ತಾ ಇದ್ದಾರೆ. ಇಷ್ಟೆಲ್ಲಾ ಖುಷಿಯ ನಡುವೆಯೇ ಒಂದು ಎಡವಟ್ಟು ನಡೆದಿದೆ. ರಶ್ಮಿಕಾ ಜಿಮ್ ಮಾಡೋ ವೇಳೆ ಆಯತಪ್ಪಿ ಕಾಲಿಗೆ ತೀವ್ರ ಪೆಟ್ಟು ಬಿದ್ದಿದೆ. ರಶ್ಮಿಕಾನ ಪರೀಕ್ಷಿಸಿರೋ ವೈದ್ಯರು ಒಂದಿಷ್ಟು ದಿನಗಳ ಕಾಲ ಕಡ್ಡಾಯವಾಗಿ ವಿಶ್ರಾಂತಿ ಪಡೆಯಲೇಬೇಕು ಅಂತ ಹೇಳಿದ್ದಾರೆ.ವೃತ್ತಿ ಜೀವನದ ಪೀಕ್ನಲ್ಲಿದ್ದಾಗ ನಟಿಯೊಬ್ಬಳು ಹೀಗೆ ಪೆಟ್ಟು ಮಾಡಿಕೊಂಡು,. ರೆಸ್ಟ್ ತೆಗೆದುಕೊಂಡ್ರೆ ಆಕೆಯನ್ನ ನಂಬಿಕೊಂಡಿರೋ ಸಿನಿಮಾಗಳು ನಿಂತುಹೋಗುತ್ವೆ. ಸದ್ಯ ರಶ್ಮಿಕಾ ವಿಚಾರದಲ್ಲೂ ಅದೇ ಆಗಿರೋದು. ರಶ್ಮಿಕಾ ಕಾಲು ಸರಿಹೋಗೋ ತನಕ ಸಿಕಂದರ್ ಸಿನಿಮಾ ಶೂಟಿಂಗ್ ಮಾಡೋಹಾಗಿಲ್ಲ.
ದಿನಕ್ಕೆ 1300 ದೋಸೆ ಮಾರಾಟ, 45 ಸಿಬ್ಬಂದಿಗಳ ಸಾಥ್; ವಿದ್ಯಾರ್ಥಿ ಭವನ ದುಡಿಮೆ ಬಗ್ಗೆ ಅರುಣ್ ಅಡಿಗ