ರಾಕಿ ಅಭಿಮಾನಿಗಳ ಮೇಲಿನ ಅಭಿಮಾನಕ್ಕೆ ಸಲಾಂ: ಯಶ್ ಲೈಫ್‌ನ ಅಪರೂಪದ ವಿಡಿಯೋಗಳು!

ರಾಕಿ ಅಭಿಮಾನಿಗಳ ಮೇಲಿನ ಅಭಿಮಾನಕ್ಕೆ ಸಲಾಂ: ಯಶ್ ಲೈಫ್‌ನ ಅಪರೂಪದ ವಿಡಿಯೋಗಳು!

Published : May 18, 2022, 07:39 PM IST

ರಾಕಿಂಗ್ ಸ್ಟಾರ್ ಯಶ್ ಮೈಸೂರಿನಿಂದ ತನ್ನ ಜರ್ನಿಯನ್ನ ಆರಂಭಿಸಿ ಈಗ ಇಡೀ ವಿಶ್ವವೇ ತಿರುಗಿ ನೋಡುವಂತ ಸಾಧನೆ ಮಾಡಿರೋ ಸೂಪರ್ ಸ್ಟಾರ್. ಪ್ರತಿ ಹಂತದಲ್ಲಿಯೂ ತನ್ನ ಶ್ರದ್ದೆ, ಶ್ರಮ , ಛಲ ಬಿಡಿದೆ ಹೋರಾಟ ಮಾಡಿ ಈಗ ಕನ್ನಡದ ಕೀರ್ತಿ ಪತಾಕೆಯನ್ನ ಮುಗಿಲೆತ್ತರಕ್ಕೆ ಹಾರಿಸಿರೋ ಕಲಾವಿದ. 

ರಾಕಿಂಗ್ ಸ್ಟಾರ್ ಯಶ್ (Yash) ಮೈಸೂರಿನಿಂದ ತನ್ನ ಜರ್ನಿಯನ್ನ ಆರಂಭಿಸಿ ಈಗ ಇಡೀ ವಿಶ್ವವೇ ತಿರುಗಿ ನೋಡುವಂತ ಸಾಧನೆ ಮಾಡಿರೋ ಸೂಪರ್ ಸ್ಟಾರ್. ಪ್ರತಿ ಹಂತದಲ್ಲಿಯೂ ತನ್ನ ಶ್ರದ್ದೆ, ಶ್ರಮ , ಛಲ ಬಿಡಿದೆ ಹೋರಾಟ ಮಾಡಿ ಈಗ ಕನ್ನಡದ ಕೀರ್ತಿ ಪತಾಕೆಯನ್ನ ಮುಗಿಲೆತ್ತರಕ್ಕೆ ಹಾರಿಸಿರೋ ಕಲಾವಿದ. ನ್ಯಾಷನಲ್ ಸ್ಟಾರ್ ಆಗಿರೋ ರಾಕಿಂಗ್ ಸ್ಟಾರ್ ಆಫ್ ಸ್ಕ್ರೀನ್‌ನಲ್ಲಿ ಯಾವ ರೀತಿ ಇರ್ತಾರೆ. ಅನ್ನೋ ಇಂಟ್ರೆಸ್ಟಿಂಗ್ ವಿಡಿಯೋ ಇಲ್ಲಿದೆ ನೋಡಿ. ಒಬ್ಬ ಸ್ಟಾರ್‌ಗೆ ಅಭಿಮಾನಿಗಳು ದೇವರಿದ್ದಂತೆ ಅವ್ರು ಖುಷಿಯಾಗಿದ್ರೆ ಸ್ಟಾರ್‌ಗಳ ಲೈಫ್‌ನಲ್ಲಿ ಹಬ್ಬ. ಅಭಿಮಾನಿ ಮುನಿಸಿಕೊಂಡ್ರೆ ಅವ್ರ ಲೈಫ್ ಫುಲ್ ಖಾಲಿ ಖಾಲಿ. 

ಹಾಗಾಗಿ ಪ್ರತಿ ಕಲಾವಿದನೂ ತನ್ನ ಅಭಿಮಾನಿಯನ್ನ ದೇವರಂತೆ ಕಾಣ್ತಾರೆ. ಯಶ್ ಕೂಡ ಫ್ಯಾನ್ಸ್ ವಿಚಾರದಲ್ಲಿ ಸಿಕ್ಕಾಪಟ್ಟೆ ಕೇರಿಂಗ್. ಕಲಾವಿದರಿಗೆ ಪುಟ್ಟ ಅಭಿಮಾನಿಗಳು ಇರ್ತಾರೆ. ಕೆಜಿಎಫ್ ಆದ ನಂತ್ರ ಯಶ್‌ಗೆ ಪುಟ್ಟ -ಪುಟ್ಟ ಮಕ್ಕಳ ಅಭಿಮಾನಿ ಬಳಗವೇ ಇದೆ. ಕಾರ್ಯಕ್ರಮವೊಂದರಲ್ಲಿ ಪುಟ್ಟ ಅಭಿಮಾನಿ ಯಶ್ ಬಳಿ ಅಪ್ಪುಗೆ ಕೇಳಿದಾಗ ಏನಾಯ್ತು ನೋಡಿ. ವಿಶ್ವವೇ ನೋಡುವಂತ ಸಾಧನೆ ಮಾಡಿದ್ರು ಯಶ್ ಸಂಸ್ಕಾರ ಪದ್ದತಿಯನ್ನ ಮರೆತಿಲ್ಲ ಅನ್ನೋದನ್ನ ಆಗಾಗ ನಿರೂಪಿಸುತ್ತಿರುತ್ತಾರೆ. ಅದಕ್ಕೆ ಸಾಕ್ಷಿಯಂತಹ ಘಟನೆ ಇತ್ತೀಚಿಗೆ ಅಂದ್ರೆ ಕೆಜಿಎಫ್ 2 (KGF 2) ಚಿತ್ರದ ಸುದ್ದಿಗೋಷ್ಟಿ ಸಮಯದಲ್ಲಿ ನಡೆಯಿತು. ಯಶ್ ಕಂಡ ಕೂಡಲೇ ಸಾಕಷ್ಟು ಜನರು ಫೋಟೋ ತೆಗೆಸಿಕೊಳ್ಳಲು ಮುಂದಾಗುತ್ತಾರೆ. 

Yash: ಅಪ್ಪ ಸಿನಿಮಾದಲ್ಲಿ ರಾಕಿಂಗ್, ಮಕ್ಕಳು ಮನೆಯಲ್ಲಿ ರಾಕಿಂಗ್!

ಬಂದ ಅಭಿಮಾನಿಗಳ ಜೊತೆ ಯಶ್ ಫೋಟೋಗೆ ಫೋಸ್ ಕೊಟ್ಟೇ ಕೊಡ್ತಾರೆ. ಆದ್ರೆ ಯಶ್ ಮುಂದೆ ಅಭಿಮಾನಿಗಳೇ (Fans) ಸೂಪರ್ ಸ್ಟಾರ್. ಅದು ಹೇಗೆ ಅಂತೀರಾ ಈ ವಿಡಿಯೋ ನೋಡಿ. ಯಶ್ ಈ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ (Viral) ಆಗ್ತಿದೆ. ಇದನ್ನ ಕಂಡ ಅಭಿಮಾನಿಗಳು ಇದೇ ಕಾರಣಕ್ಕೆ ಯಶ್ ಅವ್ರನ್ನ ರಾಕಿಂಗ್ ಸ್ಟಾರ್ ಅನ್ನೋದು ಅಂತಿದ್ದಾರೆ. ಅದಷ್ಟೆ ಅಲ್ಲ ಯಶ್ ತನ್ನ ಪರಿಶ್ರಮದಿಂದಲೇ ಈ ಮಟ್ಟಕ್ಕೆ ಬಂದಿದ್ದಾರೆ ಹಾಗಾಗಿ ಈ ಗುಣಗಳು ಇದ್ದೇ ಇರುತ್ತೆ ಎಂದು ಯಶ್ ಗುಣಗಾನ ಮಾಡ್ತಿದ್ದಾರೆ. ಒಟ್ಟಾರೆ ರಾಕಿ ಅಭಿಮಾನಿಗಳಿಗಂತು ಈ ವಿಡಿಯೋ ಸಖತ್ ಖುಷಿ ಕೊಟ್ಟಿರೋದು ಸತ್ಯ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more