'ರಂಗನಾಯಕ'ನಾದ ನವರಸ ನಾಯಕ ಜಗ್ಗೇಶ್..!'ಎನ್ನ ಮನದರಸಿ' ಎನ್ನುತ್ತ ಬಂದ ರಂಗನಾಯಕ..!

'ರಂಗನಾಯಕ'ನಾದ ನವರಸ ನಾಯಕ ಜಗ್ಗೇಶ್..!'ಎನ್ನ ಮನದರಸಿ' ಎನ್ನುತ್ತ ಬಂದ ರಂಗನಾಯಕ..!

Published : Feb 18, 2024, 11:23 AM ISTUpdated : Feb 18, 2024, 11:24 AM IST

ರಂಗನಾಯಕ..ಈ ಹೆಸ್ರು ನಟ ಜಗ್ಗೇಶ್‌ಗೆ ಪಕ್ಕಾ ಸೂಟ್ ಆಗುತ್ತೆ. ಯಾಕಂದ್ರೆ ಜಗ್ಗೇಶ್ ಥಿಯೇಟರ್ ಆರ್ಟಿಸ್ಟ್ ಆಗಿ ಚಿತ್ರರಂಗಕ್ಕೆ ಬಂದವರು. ಬೆಳ್ಳಿ ತೆರೆಗೆ ಬಂದ್ ಮೇಲೆ ಜಗ್ಗೇಶ್ ನವರಸಗಳನ್ನು ಗಟ ಗಟ ಕುಡಿದು ಅಭಿನಯಿಸಿ ನವರಸ ನಾಯಕ ಜಗ್ಗೇಶ್ ಆದ್ರು. ಈಗ ಈ ನವರಸ ನಾಯಕ ಜಗ್ಗೇಶ್ ರಂಗನಾಯಕ ಆಗಿದ್ದಾರೆ.


ಜಗ್ಗೇಶ್ ನಟನೆಯ ಬಹು ನಿರೀಕ್ಷಿಯ ರಂಗನಾಯಕ ಸಿನಿಮಾ(Ranganayaka Movie) ಬಿಡುಗಡೆಗೆ ಸಿದ್ಧವಾಗಿದ್ದು, 'ಎನ್ನ ಮನದರಸಿ' ಅನ್ನೋ ಹಾಡು(Enna Manadarasi song) ಬಿಡುಗಡೆ ಆಗಿದೆ. ಜಗ್ಗೇಶ್‌(Jaggesh) ಮೋಸ್ಟ್ ವಾಂಟೆಡ್ ಮೂವಿ ರಂಗನಾಯಕ. ಈ ಸಿನಿಮಾದಲ್ಲೂ ಜಗ್ಗೇಶ್‌ರ ಕ್ಯೂಟ್ ಲವ್ ಸ್ಟೋರಿ ಇದೆ. ಹೀಗಾಗಿ ರಂಗನಾಯಕನ ಪ್ರೇಮಗೀತೆಯನ್ನ ಪ್ರೇಮಿಗಳ ದಿನ ಮುಗಿದ ಬಳಿಕ ಜಗ್ಗೇಶ್ ಬಿಡುಗಡೆ ಮಾಡಿದ್ದಾರೆ. ಈ ಪ್ರೇಮ ಪ್ರಣಯ ಗೀತೆಯಲ್ಲಿ ಜಗ್ಗೇಶ್ ಜೊತೆ ನಾಯಕಿ ರಚಿತಾ ಮಹಾಲಕ್ಷ್ಮಿ ನಟಿಸಿದ್ದಾರೆ. 70-80ರ ದಶಕದ ಫೀಲ್ನಲ್ಲಿ ಈ ಸಾಂಗ್ ಮಾಡಿದ್ದು, ಆ ದಿನಗಳ ಫೀಲ್‌ ಕೊಡುತ್ತಿದ್ದೆ. ಗಾಯಕ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಅದ್ಭುತವಾಗಿಯೇ ಹಾಡಿದ್ದಾರೆ. ರಂಗನಾಯಕ.. ಇದು ಜಗ್ಗೇಶ್ ಸಿನಿ ಪ್ರೇಕ್ಷಕರ ಫೆವರಿಟ್ ಡೈರೆಕ್ಟರ್ ಗುರುಪ್ರಸಾದ್ (Guruprasad) ನಿರ್ದೇಶನದ ಸಿನಿಮಾ. ಜಗ್ಗೇಶ್ ಗುರುಪ್ರಸಾದ್ ಕಾಂಬಿನೇಷನ್ ಅಂದ್ರೆ ಕೇಳ್ಬೇಕಾ..? ಮಠ ಎದ್ದೇಳು ಮಂಜುನಾಥ ಸಿನಿಮಾಗಳು ಇಂದಿಗೂ ಟಾಕ್ ಆಫ್ ದಿ ಮ್ಯಾಟರ್. ಈಗ ರಂಗನಾಯಕ ಸಿನಿಮಾ ಸ್ಯಾಂಪಲ್ಸ್ಗಳು ಟಾಪ್ ಆಫ್ ದಿ ಮ್ಯಾಟರ್ ಆಗ್ತಿವೆ. ರಂಗನಾಯಕ ಚಿತ್ರದ ಮೂಲಕ ಈ ಜೋಡಿ ಕನ್ನಡದ ಕ್ರಾಂತಿ ಮಾಡ್ತಿರೋ ಹಾಗಿದೆ. ಮೊನ್ನೆ ಮೊನ್ನೆ ಕನ್ನಡ ಅಕ್ಷರ ಮಾಲೆಯ ಒಂದು ಹಾಡು ರಿಲೀಸ್  ಮಾಡಿತ್ತು. ಈ ಮೂಲಕ ಚಿತ್ರದಲ್ಲಿ ಕನ್ನಡ ಪ್ರೇಮ ಜಾಸ್ತಿ ಇದೆ ಅನ್ನೋದನ್ನ ತೋರಿಸಿಕೊಟ್ಟಿತ್ತು.

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more