Apr 28, 2024, 10:05 AM IST
ಎಂದಿನಂತೆ ಸಿನಿಮಾ ತಾರೆಯರು ಸರದಿ ಸಾಲಿನಲ್ಲಿ ನಿಂತು ಮತದಾನ(Voting) ಮಾಡಿ ಜನರಿಗೆ ಪ್ರೇರಣೆಯಾಗುವ ಕೆಲಸ ಮಾಡಿದ್ದಾರೆ. ಆದ್ರೆ ಕೆಲವು ಸೆಲೆಬ್ರೆಟಿಗಳು ಅದೆಷ್ಟೇ ಬ್ಯುಸಿಯಾಗಿದ್ದರೂ ಇದೊಂದು ದಿನ ಬಿಡುವು ಮಾಡಿಕೊಂಡು ಮತದಾನ ಮಾಡಲು ಬರುತ್ತಾರೆ. ಮತ್ತೆ ಕೆಲವರು ವೋಟ್ ಮಾಡುವುದನ್ನು ಮರೆತುಬಿಟ್ಟಂತೆ ಕಾಣುತ್ತಿದೆ. ಈ ಬಾರಿ ವೋಟ್ ಮಾಡದವರ ಪಟ್ಟಿಯಲ್ಲಿ ಮೋಹಕತಾರೆ ರಮ್ಯಾ(Ramya), ರಶ್ಮಿಕಾ ಮಂದಣ್ಣ ಹೆಸರುಗಳು ಸೇರಿಕೊಂಡಿವೆ. ರಮ್ಯಾ ಇತ್ತೀಚೆಗೆ ಆಕ್ಟಿವ್ ಆಗಿಲ್ಲ. ರಾಜಕೀಯದಿಂದ ದೂರ ಉಳಿದಿದ್ದ ರಮ್ಯಾ, ಸಿನಿಮಾಗಳ ಕಡೆ ಮುಖ ಮಾಡಿದ್ದರು. ಡಾಲಿ ಧನಂಜಯ್ ನಟಿಸುತ್ತಿರುವ 'ಉತ್ತರಕಾಂಡ' ಸಿನಿಮಾದಲ್ಲಿ ನಾಯಕಿಯಾಗಿ ಕಮ್‌ಬ್ಯಾಕ್ ಮಾಡುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಆದರೆ, ಇತ್ತೀಚೆಗೆ ಆ ಸಿನಿಮಾದಿಂದಲೂ ಹೊರ ಬಂದಿದ್ದರು. ಆಗ ರಮ್ಯಾ ಮತ್ತೆ ರಾಜಕೀಯಕ್ಕೆ ಎಂಟ್ರಿ ಕೊಡಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಈ ಬಾರಿ ರಮ್ಯಾ ವೋಟ್ ಮಾಡಿಲ್ಲ. ಇದಕ್ಕೆ ಕಾರಣವೇನು ಅನ್ನೋದು ಇನ್ನೂ ತಿಳಿದು ಬಂದಿಲ್ಲ. ರಮ್ಯಾ ಮಂಡ್ಯದ ಪಿ ಎಲ್ ಡಿ ಬ್ಯಾಂಕ್ ಮತಗಟ್ಟೆಯಲ್ಲಿ ಹೆಸರಿದೆ ಎಂದು ವರದಿಯಾಗಿದೆ. ಇನ್ನು ರಮ್ಯಾ ಅಲ್ಲದೆ ರಶ್ಮಿಕಾ ಮಂದಣ್ಣ(Rashmika Mandanna) ಕೂಡ ಮತದಾನ ಮಾಡಿಲ್ಲ ಎಂದು ವರದಿಯಾಗಿದೆ. ರಶ್ಮಿಕಾ ಹುಟ್ಟೂರು ವಿರಾಜಪೇಟೆಯಲ್ಲಿ ಮತಚಲಾಯಿಸಬೇಕಿತ್ತು ಎನ್ನಲಾಗಿದೆ. ಆದರೆ, ರಶ್ಮಿಕಾ ಬಹುಭಾಷಾ ಸಿನಿಮಾಗಳಲ್ಲಿ ಬ್ಯುಸಿಯಾದ ಬಳಿಕ ಕರ್ನಾಟಕದಲ್ಲಿ(Karnataka) ಇರುವುದು ಕಡಿಮೆಯಾಗಿದೆ. ಹಾಗಾದ್ರೆ ಈ ನಟಿಯರಿಗೆ ವೋಟ್ ಹಾಕೋದು ಅಷ್ಟೊಂದು ಮುಖ್ಯ ಅನ್ನಿಸಲೇ ಇಲ್ವಾ ಎಂದು ಫ್ಯಾನ್ಸ್ ಕೇಳುತ್ತಿದ್ಧಾರೆ.
ಇದನ್ನೂ ವೀಕ್ಷಿಸಿ: Weekly-Horoscope: ಈ ರಾಶಿಯವರಿಗೆ ಆಪ್ತರು ದೂರವಾಗುತ್ತಾರೆ..ಎಚ್ಚರದಿಂದ ಇರಿ