Nov 5, 2023, 10:00 AM IST
ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್(Jailer) ಸಿನಿಮಾದ ಭರ್ಜರಿ ಸಕ್ಸಸ್ ನಂತರ ಸಿನಿಮಾ ಆಯ್ಕೆಯಲ್ಲಿ ತಲೈವಾ ಮತ್ತಷ್ಟು ಬ್ಯೂಸಿಯಾಗಿದ್ದಾರೆ. ಆದ್ರಲ್ಲೂ ತಮಿಳಿನ ಟಾಪ್ ಯುವ ನಿರ್ದೇಶಕ ಎನಿಸಿಕೊಂಡಿರುವ ಲೋಕೇಶ್ ಕನಗರಾಜ್, ರಜನಿಕಾಂತ್‌ಗೆ(Rajinikanth) ಸಿನಿಮಾ ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದ ನಂತರವಂತೂ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ. ಇದೀಗ ಬಂದಿರುವ ಸುದ್ದಿಯಂದ್ರೆ ರಜನಿಕಾಂತ್-ಲೋಕೇಶ್ ಕನಗರಾಜ್ ಕಾಂಬಿನೇಷನ್ ಸಿನಿಮಾದಲ್ಲಿ ರಜನಿಕಾಂತ್ ಅಪ್ಪಟ ಅಭಿಮಾನಿಯೇ ಅವರಿಗೆ ವಿಲನ್ ಆಗಿದ್ದಾರೆ. ಹೌದು, ತಮ್ಮ 171ನೇ ಚಿತ್ರಕ್ಕೆ ಲೋಕೇಶ್ ಕನಗರಾಜ್ ಜೊತೆ ಕೈಜೋಡಿಸಿರುವ ತಲೈವಾ ಮುಂದೆ ಅಬ್ಬರಿಸಲು ನಟ ರಾಘವ್ ಲಾರೆನ್ಸ್ (Raghava Lawrence) ಸಜ್ಜಾಗಿದ್ದಾರೆ. ಅದೂ ಕೂಡ ತಲೈವಾ ಎದುರು ವಿಲನ್ ಆಗಿ ನಟಿಸಲು ರಾಘವಾ ಲಾರೆನ್ಸ್ ಆಯ್ಕೆಯಾಗಿದ್ದಾರೆ. ತಲೈವಾರ 171ನೇ ಸಿನಿಮಾ ಪಕ್ಕಾ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿರಲಿದೆ. ಲೋಕೇಶ್ ಕನಗರಾಜ್, ತಮ್ಮ ಸಿನಿಮಾದಲ್ಲಿ ವಿಲನ್ ಪಾತ್ರಗಳ ಬಗ್ಗೆ ಅತಿಯಾದ ಕಾಳಜಿವಹಿಸ್ತಾರೆ. ಹೀರೋಗೆ ಸರಿಸಮನಾದ ವಿಲನ್ ಪಾತ್ರವನ್ನು ಸೃಷ್ಠಿಸ್ತಾರೆ. ಅದ್ರಂತೆ ರಜನಿಕಾಂತರ ಸಿನಿಮಾಕ್ಕಾಗಿಯೂ ಪವರ್‌ಫುಲ್ ವಿಲನ್ ಪಾತ್ರವನ್ನು ಸೃಷ್ಟಿಸಲಾಗಿದ್ದು, ಮೊದ ಮೊದಲಿಗೆ ಕನ್ನಡದ ದುನಿಯಾ ವಿಜಿ ಅವರು ವಿಲನ್ ಪಾತ್ರವನ್ನ ನಿರ್ವಹಿಸಲಿದ್ದಾರೆ ಅನ್ನೋ ಸುದ್ದಿ ಜೋರಾಗಿತ್ತು. ಆದ್ರೆ ಚಿತ್ರ ತಂಡ ಈ ಪಾತ್ರಕ್ಕೆ ರಜನೀಕಾಂತ್ರ ಅಪ್ಪಟ ಅಭಿಮಾನಿ ರಾಘವ ಲಾರೆನ್ಸ್ ಅವರನ್ನು ಆಯ್ಕೆ ಮಾಡಿಕೊಂಡಿದೆ. ರಾಘವ ಲಾರೆನ್ಸ್ ತಮಿಳು ಚಿತ್ರರಂಗದಲ್ಲಿ(Tamil Industry) ಸಕ್ರಿಯವಾಗಿರುವ ಪ್ರಖ್ಯಾತ ನಟ, ನಿರ್ದೇಶಕ, ನೃತ್ಯ ಸಂಯೋಜಕ. ಅಷ್ಟೆ ಅಲ್ದೆ ಸಂಗೀತ ನಿರ್ದೇಶಕ ಕೂಡ ಹೌದು. ಇವ್ರು ಹಲವು ತಮಿಳು ಮತ್ತು ತೆಲಗು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅದ್ಭುತವಾಗಿ ನೃತ್ಯ ಮಾಡುವ ಇವರು, ಹಾರಾರ್ ಸಿನಿಮಾ ಕಾಂಚನ ನಿರ್ಮಿಸಿ, ನಿರ್ದೇಶಿಸಿ, ನಟಿಸುವ ಮೂಲಕ ರಾಘವ ಲಾರೆನ್ಸ್ ಸಿನಿಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾದ್ರು.
ಇದನ್ನೂ ವೀಕ್ಷಿಸಿ: ಕಮಲ್ ಹಾಸನ್ ಕನ್ನಡ ಪ್ರೀತಿ ನೋಡಿದ್ರೆ ಕಳೆದೇ ಹೋಗ್ತೀರಿ! ಇಂಡಿಯನ್ 2ಗೆ ಕನ್ನಡದಲ್ಲೇ ಡಬ್ ಮಾಡಿದ ನಟ!