ಶಿವರಾಜ್ಕುಮಾರ್-ಉಪೇಂದ್ರ ಜೊತೆಗೆ ರಾಜ್ ಶೆಟ್ಟಿ ನಟಿಸಿರೋ ಮಲ್ಟಿಸ್ಟಾರರ್ ಮೂವಿ 45 ಬಗ್ಗೆ ಸಿನಿಪ್ರಿಯರಲ್ಲಿ ದೊಡ್ಡ ನಿರೀಕ್ಷೆ ಇದೆ. ಎಲ್ಲಾ ಅಂದುಕೊಂಡಂತೆ ಆಗಿದ್ರೆ ಇಷ್ಟೊತ್ತಿಗೆ 45 ರಿಲೀಸ್ ಆಗಬೇಕಿತ್ತು. ಕೊನೆಗೂ 45 ಮೂವಿ ಯಾವಾಗ ರಿಲೀಸ್ ಅಂತ ಕಾಯ್ತಿರೋ ಫ್ಯಾನ್ಸ್ ಗೆ ಇಲ್ಲಿದೆ ಬಿಗ್ ಅಪ್ಡೇಟ್.
ಸ್ಯಾಂಡಲ್ವುಡ್ ನಲ್ಲಿ ದೊಡ್ಡ ನಿರೀಕ್ಷೆ ಮೂಡಿಸಿರೋ ಸಿನಿಮಾ 45. ಶಿವರಾಜ್ಕುಮಾರ್ - ಉಪೇಂದ್ರ ಕಾಂಬಿನೇಷನ್. ಜೊತೆಗೆ ರಾಜ್ ಶೆಟ್ಟಿ ಬೇರೆ ಇದ್ದಾರೆ. ಈ ತ್ರಿಮೂರ್ತಿಗಳು ನಟಿಸಿರೋ ಸಿನಿಮಾ ಅಂದಮೇಲೆ ಸಹಜವಾಗೇ ಅಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆ ಇದೆ. ಸ್ಯಾಂಡಲ್ವುಡ್ನ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಮೊದಲ ಬಾರಿಗೆ ನಿರ್ದೇಶನ ಮಾಡಿರೋ ಸಿನಿಮಾ ಇದು. ಟೀಸರ್ ನೋಡಿದ್ರೇನೆ ಇದೊಂದು ಸ್ಪೆಷಲ್ ಮೂವಿ ಅನ್ನೋದು ಗೊತ್ತಾಗಿದೆ. ದೊಡ್ಡ ಮಟ್ಟದ ವಿಎಫ್ಎಕ್ಸ್ ವರ್ಕ್ ಇರೋ ಈ ಸಿನಿಮಾ ದೊಡ್ಡ ಬಜೆಟ್ನಲ್ಲಿ ಸಿದ್ದಗೊಂಡಿದೆ.